More

    ದೆಹಲಿಯ ಮದ್ವೆಗೆ ಹೋದ ಬೆಂಗಳೂರಿನ ಅಮ್ಮ-ಮಗನಿಗೆ ಒಮಿಕ್ರಾನ್‌! ಕ್ವಾರಂಟೈನ್‌ ಮಾಡದೇ ನಡೆಯಿತು ಎಡವಟ್ಟು

    ಬೆಂಗಳೂರು: ರಾಜ್ಯಾದ್ಯಂತ ಒಮಿಕ್ರಾನ್‌ ಭೀತಿ ಹೆಚ್ಚಿರುವ ನಡುವೆಯೇ ದೆಹಲಿಯ ಹೋದ ಅಮ್ಮ- ಮಗ ಬೆಂಗಳೂರಿಗೆ ವಾಪಸಾಗುತ್ತಿದ್ದಂತೆಯೇ ಈ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಇದರಿಂದ ಅವರು ವಾಸಿಸುವ ಇಡೀ ಪ್ರದೇಶದ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.

    ಬೆಂಗಳೂರಿನ ಮಹದೇವಪುರದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ರೀಟ್ರೀಟ್ ವಿಲ್ಲಾದಲ್ಲಿ 70 ವರ್ಷದ ತಾಯಿ ಮತ್ತು 36 ವರ್ಷದ ಮಗ ನೆಲೆಸುತ್ತಿದ್ದಾರೆ. ಇವರು ಈಚೆಗೆ ದೆಹಲಿಗೆ ಮದುವೆಗೆಂದು ಹೋಗಿದ್ದರು. ಇದೇ 3ರಂದು ಬೆಂಗಳೂರಿಗೆ ವಾಪಸಾಗಿದ್ದರು. ಅಲ್ಲಿಯೇ ಆಗಿದ್ದ ಎಡವಟ್ಟು. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮಾತ್ರ ವಿಮಾನ ನಿಲ್ದಾಣದಲ್ಲಿ ಚೆಕಿಂಗ್‌ ಮಾಡಲಾಗುತ್ತಿದ್ದು, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

    ಆದರೆ ಈ ತಾಯಿ-ಮಗ ದೆಹಲಿಗೆ ಹೋಗಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಅಲ್ಲವೆಂದು ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಿಲ್ಲ. ಆದ್ದರಿಂದ ನೇರವಾಗಿ ಇವರು ತಮ್ಮ ಮನೆಗೆ ತೆರಳಿದ್ದಾರೆ.
    ಈ ನಡುವೆ ದೆಹಲಿಯಲ್ಲಿ ಒಮಿಕ್ರಾನ್‌ ಪತ್ತೆಯಾದಾಗ, ಆ ವ್ಯಕ್ತಿಯನ್ನು ಸಂಪರ್ಕಿಸುವವರ ಹಿನ್ನೆಲೆ ಹುಡುಕಿದಾಗ ಈ ತಾಯ-ಮಗನ ವಿಷಯ ಗೊತ್ತಾಗಿದೆ. ಅದನ್ನು ತಪಾಸಣೆ ಮಾಡಿ, ಸ್ಯಾಂಪಲ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಬ್ಬರಿಗೂ ಈಗ ಒಮಿಕ್ರಾನ್ ದೃಢಪಟ್ಟಿದೆ!

    ತಾಯಿ-ಮಗ ವಾಸಿಸುತ್ತಿರುವ ವಿಲ್ಲಾಗೆ ಆರೋಗ್ಯ ಅಧಿಕಾರಿಗಳು ಆಗಮಿಸಿದ್ದು, ಇವರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಯುತ್ತಿದೆ. ತಪಾಸಣೆ ವೇಳೆ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಹಲವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ!

    ಸ್ಪೀಕರ್‌ ರಮೇಶ್‌ ಕುಮಾರ್‌ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಅವರೀಗ ಹೇಳಿದ್ದೇ ಆಗಲಿ: ಸಚಿವ ಮುನಿರತ್ನ ಆಕ್ರೋಶ

    ಮಾಲ್‌ಗೆ ಬೆಂಕಿ: ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts