More

    ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ

    ಮಂಡ್ಯ: ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮಸ್ಥರಲ್ಲಿ ಕಳೆದ ಐದು ವರ್ಷಗಳಿಂದ ಪ್ರಶ್ನೆಯೊಂದು ಕಗ್ಗಂಟಾಗಿಯೇ ಉಳಿದಿತ್ತು. ಇದಕ್ಕೆ ಬಸವಣ್ಣ ಕೇವಲ ಒಂದೇ ತಾಸಿನಲ್ಲಿ ಉತ್ತರಿಸುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ.

    ಇದು ದೇವಸ್ಥಾನದ ಅರ್ಚಕರ ನೇಮಕಕ್ಕೆ ಸಂಬಂಧಿಸಿದ ಸಮಸ್ಯೆಯಾಗಿತ್ತು. ಚೀರನಹಳ್ಳಿಯಲ್ಲಿ ಪ್ರಸಿದ್ಧ ಉರುಗಮ್ಮದೇವಿ ದೇವಾಲಯವಿದೆ. ಅಲ್ಲಿ ಮಸಣಯ್ಯ ಎನ್ನುವವರು ಅರ್ಚಕರಾಗಿದ್ದರು. ಇವರು ಮೃತಪಟ್ಟಮೇಲೆ ಸಮಸ್ಯೆ ಶುರುವಾಗಿತ್ತು.

    ಅದೇನೆಂದರೆ ಅವರ ನಂತರ ದೇವಾಲಯಕ್ಕೆ ಯಾರನ್ನು ಅರ್ಚಕರನ್ನಾಗಿ ಮಾಡಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲ ಶುರುವಾಗಿತ್ತು. ಒಬ್ಬೊಬ್ಬರದ್ದು ಒಂದೊಂದು ತೆರನಾದ ಉತ್ತರ ಆಗಿದ್ದರಿಂದ ಸಮಸ್ಯೆ ಕೊನೆಗೂ ಬಗೆಹರಿದಿರಲಿಲ್ಲ.
    ಹೀಗೆ ಐದು ವರ್ಷ ಕಳೆದೇ ಹೋಯಿತು. ಇದೀಗ ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಕ್ಕೆ ಕರೆತರಲಾಇತು. ಊರ ಹೊರಗಿರುವ ಕಲ್ಯಾಣಿಯ ಬಳಿ ಅದಕ್ಕೆ ಪೂಜೆ ಮಾಡಿ ಅರ್ಚಕ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗಿತ್ತು.

    ಈ ದೃಶ್ಯ ನೋಡಲು ತಂಡೋಪತಂಡವಾಗಿ ಜನರು ಆಗಮಿಸಿದ್ದರು. ಅಲ್ಲಿಗೆ ಬಂದ ಬಸವಣ್ಣ ಅಲ್ಲಿ ನೆರೆದಿದ್ದ ಸಹಸ್ರಾರು ಜನರಲ್ಲಿ ಶಿವಣ್ಣ ಎಂಬುವವರನ್ನು ಕೊಂಬಿನಿಂದ ತಿವಿಯಿತು. ಇದು ಅವರನ್ನೇ ಆಯ್ಕೆ ಮಾಡುವ ಸೂಚನೆ ಎಂದು ತಿಳಿದ ಗ್ರಾಮಸ್ಥರು ಖುಷಿಯಿಂದ ಅವರ ನೇಮಕಕ್ಕೆ ಮುಂದಾಗಿದ್ದಾರೆ. ಅಚ್ಚರಿ ಎಂದರೆ ಬಸವಣ್ಣ ಶಿವಣ್ಣ ಅವರನ್ನು ತಿವಿದದ್ದು ಮಾತ್ರವಲ್ಲದೇ ಅವರನ್ನು ನೂಕಿಕೊಂಡು ಕಲ್ಯಾಣಿಯ ಒಳಗೆ ತಳ್ಳಿತು. ಇದನ್ನು ಕಂಡ ಜನ ಹರ್ಷದಿಂದ ಕೇಕೇ ಹಾಕಿದರು.

    ಅಲ್ಲಿಗೆ ಅರ್ಚಕರ ನೇಮಕ ಸಮಸ್ಯೆ ಮುಗಿದಿದೆ. ಶಿವಣ್ಣ ಅವರೇ ಮುಂದಿನ ಅರ್ಚಕರಾಗಲಿದ್ದಾರೆ.

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

    ತಾಯಿಯನ್ನು ಕೊಂದು ಒಲೆಯಲ್ಲೇ ಸುಟ್ಟು ಚಿಕನ್‌ ರೋಸ್ಟ್‌ ಮಾಡಿ ತಿಂದ ಯುವಕ!

    ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

    ರೋಗಿಗಳ ಜತೆಯಲ್ಲಿಯೇ ಬೀದಿ ನಾಯಿಗಳ ಕಾರುಬಾರು! ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಎಡವಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts