More

    ನನ್ನ ಈ ಸಮಸ್ಯೆ ಮುದ್ದಿನ ಪತ್ನಿಯನ್ನು ತೀವ್ರ ಕುಗ್ಗಿಸಿಬಿಟ್ಟಿದೆ- ಪ್ಲೀಸ್​ ನನಗೆ ಸಹಾಯ ಮಾಡಿ… ಇದರಿಂದ ಮುಕ್ತಿ ನೀಡಿ…

    ನನ್ನ ಈ ಸಮಸ್ಯೆ ಮುದ್ದಿನ ಪತ್ನಿಯನ್ನು ತೀವ್ರ ಕುಗ್ಗಿಸಿಬಿಟ್ಟಿದೆ- ಪ್ಲೀಸ್​ ನನಗೆ ಸಹಾಯ ಮಾಡಿ... ಇದರಿಂದ ಮುಕ್ತಿ ನೀಡಿ...ಪ್ರಶ್ನೆ: ನಾನು ಸರ್ಕಾರಿ ನೌಕರ. ವಯಸ್ಸು 34. ಮದುವೆ ಆಗಿದೆ. ಇಬ್ಬರು ಮಕ್ಕಳು. ನಾನು ದೈಹಿಕವಾಗಿ ಆರೋಗ್ಯವಾಗಿಯೇ ಇದ್ದೇನೆ. ಮಾನಸಿಕವಾಗಿ ನರಳುತ್ತಿದ್ದೇನೆ. ಮನೋವೈದ್ಯರನ್ನು ಸಂಪರ್ಕಿಸಿ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿದೆ.
    ಎಲ್ಲಿ ಹೋದರೂ ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ. ನನ್ನ ಪತ್ನಿ ನನ್ನನ್ನು ತುಂಬ ಪ್ರೀತಿಸುತ್ತಾಳೆ. ನಾನೂ ಅವಳನ್ನು ತುಂಬ ಪ್ರೀತಿಸುತ್ತೇನೆ. ಆದರೆ, ನನ್ನ ಮಾನಸಿಕ ವೇದನೆ ಏನೆಂದರೆ, ನನ್ನ ಪತ್ನಿ ನನ್ನನ್ನು ಬಿಟ್ಟು ಬೇರೆ ಪುರುಷರ ಜತೆಗೆ ಹೆಚ್ಚು ಮಾತನಾಡಿದರೆ, ಮನಸ್ಸಿನಲ್ಲಿ ಒಂದು ರೀತಿಯ ಚಿತ್ರಹಿಂಸೆ, ವೇದನೆ ಶುರುವಾಗುತ್ತದೆ.

    ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅದೊಂದು ಮನೋರೋಗದ ಲಕ್ಷಣ ಎಂದು ನನಗೆ ಗೊತ್ತು. ಹೆಂಡತಿಯನ್ನು ಇದೇ ಕಾರಣಕ್ಕೆ ಸ್ವತಂತ್ರವಾಗಿ ಇರುವುದಕ್ಕೆ ಬಿಡಲು ಆಗುತ್ತಿಲ್ಲ. ನಾನು ಪತ್ನಿಯನ್ನು ದ್ವೇಷಿಸುವುದಿಲ್ಲ. ಇದು ಅನುಮಾನದ ರೋಗ. ಆದರೆ, ಇದರಿಂದ ನನ್ನ ಜೀವನ ನರಕವಾಗಿದೆ. ಪತ್ನಿಯನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ಅವಳನ್ನು ವಿನಾಕಾರಣ ಅನುಮಾನಿಸುತ್ತ ಚಿತ್ರಹಿಂಸೆ ಪಡುವುದರಿಂದ ಹೊರಗೆ ಬರಬೇಕಾಗಿದೆ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ.

    ಉತ್ತರ: ನೀವು ಪತ್ನಿಯ ಮೇಲೆ ವಿನಾಕಾರಣ ಸಂಶಯ ಪಡುತ್ತಿರುವಿರಿ. ಮನೋವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಮುಂದುವರೆಸಿ.
    ಬ್ರಾಹ್ಮಿ ವಟಿಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯನ್ನು ಊಟದ ನಂತರ ಸೇವಿಸಿ. ಬ್ರಾಹ್ಮಿಘೃತವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚೆಯಷ್ಟು ಬಿಸಿನೀರು ಇಲ್ಲವೇ ಬಿಸಿಹಾಲಿನಲ್ಲಿ ಬೆರೆಸಿ ಸೇವಿಸಿ. ಶಿರೋಧಾರ ಚಿಕಿತ್ಸೆಯನ್ನು ತೆಗೆದುಕೊಳ್ಳಿ. ಮೆದುಳಿನಲ್ಲಿ ಡೋಪಮಿನ್ ಸ್ರವಿಸುವಿಕೆಯಲ್ಲಿ ಆಗುವ ವ್ಯತ್ಯಾಸದಿಂದಾಗಿ ಈ ರೀತಿಯ ಸಂಶಯಪಡುವ ಪ್ರವೃತ್ತಿ ಹೆಚ್ಚುತ್ತದೆ.
    ಮನಸ್ಸಿಗೆ ಸಮಾಧಾನ ಇಲ್ಲವಾಗುತ್ತದೆ. ದಾಂಪತ್ಯಜೀವನ ಪರಸ್ಪರರ ನಂಬುಗೆಯ ಮೇಲೆ ಸ್ಥಾಪಿತವಾಗಬೇಕಾದ್ದು. ದೈಹಿಕ, ಮಾನಸಿಕ ಸಾಮರಸ್ಯ ಬಲುಮುಖ್ಯ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?

    ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಕುಗ್ಗುತ್ತಿದೆ, ವಿರೂಪಗೊಳ್ಳುತ್ತಿದೆಯಂತೆ ಪುರುಷ ಜನನಾಂಗ: ಸಂಶೋಧನಾ ವರದಿ ಬಹಿರಂಗ

    ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?

    ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts