More

    ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಕುಗ್ಗುತ್ತಿದೆ, ವಿರೂಪಗೊಳ್ಳುತ್ತಿದೆಯಂತೆ ಪುರುಷ ಜನನಾಂಗ: ಸಂಶೋಧನಾ ವರದಿ ಬಹಿರಂಗ

    ಲಂಡನ್: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ, ಜನಿಸುವ ಮಕ್ಕಳಲ್ಲಿ ಶಿಶ್ನದ ಗಾತ್ರ ಕುಗ್ಗುತ್ತಿದೆ ಮತ್ತು ಬೆಳೆಯುತ್ತಿರುವ ಮಕ್ಕಳು, ಪುರುಷರಲ್ಲಿ ಶಿಶ್ನ ವಿರೂಪಗೊಳ್ಳುತ್ತಿದೆ ಎಂಬ ವರದಿಯೊಂದು ಬಂದಿದೆ.

    ಅಮೆರಿಕದ ನ್ಯೂಯಾರ್ಕ್​​ನ ಮೌಂಟ್ ಸಿನಾಯಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ Dr Shanna ಅವರು ನಡೆಸಿರುವ ಸಂಶೋಧನೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ವರದಿಯನ್ನು ಇಂಗ್ಲೆಂಡ್​ನ https://news.sky.com/ ಪ್ರಕಟಿಸಿದೆ.

    ವಾಯಮಾಲಿನ್ಯ, ಭೂ ಮಾಲಿನ್ಯದಿಂದ ಹಾಗೂ ಪ್ಯ್ಲಾಸ್ಟಿಕ್​ ತ್ಯಾಜ್ಯಗಳಲ್ಲಿನ ಥಾಲೇಟ್‌ಗಳು ಮಾನವನ ಸಂತಾನೋತ್ಪತ್ತಿ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಹುಟ್ಟುತ್ತಿರುವ ಮಕ್ಕಳ ಜನನಾಂಗ ಕುಗ್ಗುತ್ತಾ ಬರುತ್ತಿದೆ ಎಂದು ವರದಿ ಹೇಳಿದೆ. ಅಧ್ಯಯನಕ್ಕೆ ಅವರು ಎಂಟು ವರ್ಷಗಳಿಂದ ವಿವಿಧ ವಲಯಗಳಿಂದ ಪ್ರತಿ ವರ್ಷ ಸುಮಾರು 4000 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದರಂತೆ.

    ಅಲ್ಲದೇ ಪರಿಸರ ಮಾಲಿನ್ಯದಿಂದ ಯುವಕರ ವಿರ್ಯದ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ. (ಏಜೇನ್ಸಿಸ್)

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts