More

    15 ವರ್ಷಕ್ಕೇನೇ ಮಕ್ಳನ್ನು ಹೆರ್ಬೋದು- ಮದುವೆ ವಯಸ್ಸು 21 ಮಾಡೋದ್ಯಾಕೆ ಎಂದ ಮಾಜಿ ಸಚಿವ!

    ಭೋಪಾಲ್: ಬಾಲಕಿಯರ ಮೇಲೆ ಆಗುತ್ತಿರುವ ಹಿಂಸೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ‍‍ಪ್ರಾಶಸ್ತ್ಯ ನೀಡಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಈಗಿರುವ 18 ವರ್ಷದಿಂದ 21ನೇ ವಯಸ್ಸಿಗೆ ಏರಿಸುವ ಚಿಂತನೆ ನಡೆಸಿದೆ. ಈ ನಡುವೆಯೇ ಇಲ್ಲೊಬ್ಬ ಮಾಜಿ ಸಚಿವ, ಇಬ್ಬರು ಹೆಣ್ಣುಮಕ್ಕಳ ತಂದೆ, ವಿವಾದಿತ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

    ಮಧ್ಯ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಸಮೀಪವರ್ತಿಯಾಗಿರುವ ಸಜ್ಜನ್ ಸಿಂಗ್ ವರ್ಮ ಇಂಥದ್ದೊಂದು ಅಸಂಬದ್ಧ ಹೇಳಿಕೆ ನೀಡಿ ಈಗ ಸ್ತ್ರೀಯರು ಸೇರಿದಂತೆ ಹಲವರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂದಹಾಗೆ ವರ್ಮ ಅವರಿಗೆ ವರ್ಮ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳಿದ್ದಾರೆ!

    ಯುವತಿಯರ ವಿವಾಹ ವಯಸ್ಸು ಈಗಿನ 18ರಿಂದ 21ಕ್ಕೆ ಏರಿಸಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು ಹೀಗೆ ಹೇಳಲು ಅವರೇನು ವಿಜ್ಞಾನಿಯೇ ಅಥವಾ ದೊಡ್ಡ ವೈದ್ಯರೇ ಎಂದು ಮರುಪ್ರಶ್ನಿಸಿ ಈ ಮಾತನ್ನು ಹೇಳಿದ್ದಾರೆ.

    ಬಾಲಕಿಯರು 15 ವರ್ಷ ಪ್ರಾಯದಲ್ಲಿಯೇ ಸಂತಾನೋತ್ಪತ್ತಿ ಮಾಡಲು ಶಕ್ಯರಾಗಿರುತ್ತಾರೆ, ಅವರು ಮಕ್ಕಳನ್ನು ಹೆರಬಹುದು. ಹಾಗಿರುವಾಗ, ವಿವಾಹದ ವಯಸ್ಸನ್ನು ಈಗಿನ 18ರಿಂದ 21ಕ್ಕೆ ಏಕೆ ಏರಿಸಬೇಕು ಎಂದು ಪ್ರಶ್ನೆ ಕೇಳಿದ್ದಾರೆ.

    ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಮಜಾಯಿಷಿ ನೀಡಿರುವ ಸಜ್ಜನ್‌ ಸಿಂಗ್‌, ಹೀಗಂತ ನಾನಾಗಿಯೇ ಹೇಳುತ್ತಿಲ್ಲ. ವೈದ್ಯರ ವರದಿಗಳ ಪ್ರಕಾರ ಬಾಲಕಿಯರು 15 ವರ್ಷ ಪ್ರಾಯದಲ್ಲಿಯೇ ಮಕ್ಕಳನ್ನು ಹೆರಬಹುದಾಗಿದೆ. ಅಂದರೆ ಈ ವಯಸ್ಸಿಗೇ ಹೆಣ್ಣಿಗೆ ಪ್ರಬುದ್ಧತೆ ಬಂದಿರುತ್ತದೆ. ಆದ್ದರಿಂದ 18 ವಯಸ್ಸಿಗೆ ಅತ್ತೆ ಮನೆಗೆ ಹೋಗಿ ಖುಷಿಯಾಗಿರಬಹುದು ಎಂದಿದ್ದಾರೆ.

    ಇವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ, “ಅವರು ಮಧ್ಯ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಪುತ್ರಿಯರನ್ನು ಅವಮಾನಿಸಿದ್ದಾರೆ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಭೂಪೇಂದರ್ ಗುಪ್ತಾ ಸಿಂಗ್‌ ಅವರು ಹೇಳಿರುವುದು ದೊಡ್ಡ ತಪ್ಪೇನೂ ಅಲ್ಲ, ಒಂದು ವಿಚಾರವೇ ಅಲ್ಲದ ವಿಷಯವನ್ನೆತ್ತಿಕೊಂಡು ಬಿಜೆಪಿ ವಿವಾದವೆಬ್ಬಿಸುತ್ತಿದೆ ಎಂದಿದ್ದಾರೆ!

    ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರು ಹೆಣ್ಣು ಮಕ್ಕಳು ಎಂಬುದನ್ನು ವರ್ಮಾ ಮರೆತಿದ್ದಾರೆ. ಅವರ ಹೇಳಿಕೆಗೆ ಅವರು ಸಾರ್ವಜನಿಕವಾಗಿ ಹುಡುಗಿಯರಿಂದ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ನೇಹಾ ಬಗ್ಗಾ ಆಗ್ರಹಿಸಿದ್ದಾರೆ.

    ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

    ಮದುವೆಯಾದ ತಿಂಗಳಲ್ಲೇ ರೈಲಿನಿಂದ ಪತ್ನಿಯ ನೂಕಿ ಕೊಲೆ- ಮುಂಬೈನಲ್ಲಿ ಅಮಾನುಷ ಘಟನೆ

    ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?

    ಅಂಚೆ ಕಚೇರಿಯಲ್ಲಿವೆ ಡಾಕ್ ಸೇವಕ್‌ ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರಿಗೂ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts