More

    ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್​ನಲ್ಲಿ 18 ವರ್ಷಕ್ಕೆ ಮದುವೆ

    ಲಂಡನ್: ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ವರ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಕಾನೂನು ಸೋಮವಾರ ಜಾರಿಗೆ ಬಂದಿದೆ.

    ಇದುವರೆಗೆ 16ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ಮದುವೆಯಾಗಬಹುದಿತ್ತು. ಆದರೆ, ಯುವಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಾಯಿಸುವುದರಿಂದ ರಕ್ಷಿಸಲು ಈ ಕಾನೂನು ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡಿದವರು 7 ವರ್ಷ ಜೈಲು ಅನುಭವಿಸಬೇಕಾಗುತ್ತದೆ.

    ಇದನ್ನೂ ಓದಿ: ಹೆಚ್ಚು ಪ್ರೋಟೀನ್ ಆಹಾರ, ಟೀ ಬೇಡ! ಬಿಸಿಗಾಳಿಯಿಂದ ಆರೋಗ್ಯ ರಕ್ಷಣೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

    ಬಲವಂತದ ಮದುವೆಗಳ ವಿರುದ್ಧ ಪ್ರಚಾರ ಮಾಡುತ್ತಿರುವ ದತ್ತಿ ಸಂಸ್ಥೆಗಳು ಹೊಸ ಕಾನೂನನ್ನು ಸ್ವಾಗತಿಸಿವೆ. ಬ್ರಿಟನ್​ನಲ್ಲಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಜನಾಂಗಗಳು ಈ ರೀತಿಯ ಬಲವಂತದ ಮದುವೆಗೆ ಒಳಗಾಗುತ್ತಿದ್ದರು.

    ಎಲ್ಲಿ ಎಷ್ಟು?
    * ಚೀನಾ ಯುವಕರಿಗೆ 22, ಯುವತಿಯರಿಗೆ 21.
    * ಅಮೆರಿಕದ ಬಹುತೇಕ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟು ಇದೆ.
    * ಪ.ಆಫ್ರಿಕಾದಲ್ಲಿರುವ ನೈಜರ್ ದೇಶದಲ್ಲಿ ಬಾಲ್ಯ ವಿವಾಹ ಅಧಿಕೃತ.
    * ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್​ನಲ್ಲಿ ವಧು-ವರರ ವಯಸ್ಸು 18.

    ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಖಡಕ್​ ಎಚ್ಚರಿಕೆ

    ಹೆಚ್ಚು ಪ್ರೋಟೀನ್ ಆಹಾರ, ಟೀ ಬೇಡ! ಬಿಸಿಗಾಳಿಯಿಂದ ಆರೋಗ್ಯ ರಕ್ಷಣೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

    ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts