More

    ಹೆಚ್ಚು ಪ್ರೋಟೀನ್ ಆಹಾರ, ಟೀ ಬೇಡ! ಬಿಸಿಗಾಳಿಯಿಂದ ಆರೋಗ್ಯ ರಕ್ಷಣೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

    ನವದೆಹಲಿ: ದೇಶಾದ್ಯಂತ ಬಿಸಿಗಾಳಿ ತೀವ್ರವಾಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಬೆನ್ನಿಗೆ ಕೇಂದ್ರ ಆರೋಗ್ಯ ಸಚಿವಾಲಯ ಉಷ್ಣತೆ ಸಂಬಂಧಿತ ಅನಾರೋಗ್ಯದ ರಾಷ್ಟ್ರೀಯ ಕ್ರಿಯಾ ಯೋಜನೆ ಭಾಗವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸಲಹಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸ್ಥಳೀಯ ಹವಾಮಾನ ಸುದ್ದಿಗಳಿಗಾಗಿ ರೇಡಿಯೊ ಕೇಳುವಂತೆ, ಪತ್ರಿಕೆ ಓದುವಂತೆ ಮತ್ತು ಟಿವಿ ವೀಕ್ಷಿಸುವಂತೆ, ಭಾರತದ ಹವಾಮಾನ ಇಲಾಖೆಯ ವೆಬ್​ಸೈಟ್ ಅನ್ನು ಟ್ರಾ್ಯಕ್ ಮಾಡುವಂತೆ ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ಏನು ಮಾಡಬೇಕು? ಏನು ಮಾಡಬಾರದು?
    * ಬಾಯಾರಿಕೆ ಇಲ್ಲದಿದ್ದರೂ ಯಥೇಚ್ಛವಾಗಿ ನೀರು ಕುಡಿಯಿರಿ.
    * ಒಆರ್​ಎಸ್, ಮನೆಯಲ್ಲಿ ತಯಾರಿಸಿದ ನಿಂಬೆ ಷರಬತ್ತು, ಮಜ್ಜಿಗೆ, ಲಸ್ಸಿ, ಚಿಟಿಕೆ ಉಪ್ಪು ಸೇರಿಸಿದ ಹಣ್ಣಿನ ರಸ ಸೇವಿಸಿ.
    * ಹೊರಗೆ ಹೋಗುವಾಗ ತೆಳುವಾದ, ಸಡಿಲವಾದ ಹತ್ತಿಯ ಉಡುಪು ಧರಿಸಿ,
    * ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ, ಟೋಪಿ, ಟವೆಲ್, ಸನ್ ಗ್ಲಾಸ್ ಬಳಸಿ.
    * ಹೆಚ್ಚು ಪ್ರೋಟೀನ್ ಭರಿತ ಆಹಾರ, ಹಳಸಲು ಆಹಾರ ಸೇವಿಸಬೇಡಿ
    * ನಿರ್ಜಲೀಕರಣಕ್ಕೆ ಕಾರಣವಾಗುವ ಕಾಫಿ, ಟೀ, ಕಾರ್ಬೇನೇಟೆಡ್ ಪಾನೀಯಗಳಿಂದ ದೂರವಿರಿ.
    * ಮ.12ರಿಂದ 3ರವರೆಗೆ ಬಿಸಿಲಿಗೆ ಒಡ್ಡಿಕೊಳ್ಳಬೇಡಿ.
    * ಸಾಧ್ಯವಾದಷ್ಟು ಗಾಳಿಯಾಡುವ, ತಂಪಾದ ಸ್ಥಳದಲ್ಲಿರಿ.
    * ಮನೆಯನ್ನು ತಂಪಾಗಿಡಿ. ಗಾಳಿಯಾಡುವಂತೆ ರಾತ್ರಿ ಹೊತ್ತು ಕಿಟಕಿಗಳನ್ನು ತೆರೆದಿಡಿ.
    * ಹೊರಗೆ ಹೋಗಬೇಕಾದ ಅನಿವಾರ್ಯತೆ ಉಂಟಾದರೆ ಬೆಳಗ್ಗೆ ಅಥವಾ ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳಿ.
    * ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವವರು, ಮಾನಸಿಕ ಅಸ್ವಸ್ಥತೆಯುಳ್ಳ ವರು, ಹೃದಯ ಕಾಯಿಲೆ , ಅಧಿಕ ರಕ್ತದೊತ್ತಡ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.
    * ನಿಲುಗಡೆ ಮಾಡಿದ ವಾಹನಗಳ ಬಳಿ ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಬಿಡಬೇಡಿ. ವಾಹನದೊಳಗಿನ ತಾಪಮಾನವು ಅಪಾಯಕಾರಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.
    * ತಲೆತಿರುಗುವಿಕೆ, ಮೂರ್ಛೆ, ವಾಕರಿಕೆ, ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ತ್ವರಿತ ಉಸಿರಾಟ, ಹೃದಯ ಬಡಿತದ ಲಕ್ಷಣಗಳ ಬಗ್ಗೆ ಗಮನವಿಡಿ.

    ಈ ಫ್ರೆಬವರಿಯಲ್ಲಿ 29.54 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 1901ರ ನಂತರ ಫೆಬ್ರವರಿ ಮಾಹೆಯ ಅತ್ಯಂತ ಗರಿಷ್ಠ ತಾಪಮಾನ ಇದಾಗಿದೆ. ಮುಂದಿನ ಮೂರು ತಿಂಗಳು ಕಡುಬೇಸಿಗೆ ಎದುರಾಗಲಿದೆ.

    | ಎಸ್.ಸಿ ಭಾನ್ ಐಎಂಡಿ ಹಿರಿಯ ವಿಜ್ಞಾನಿ

    ಯೂಕ್ರೇನ್ ಹೆಗಲ ಮೇಲೆ ಬೈಡೆನ್ ಬಂದೂಕು!

    ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts