More

    ಅಪಹರಣ, ನಾಲ್ವರು ಆರೋಪಿಗಳ ಬಂಧನ

    ಹಾರೂಗೇರಿ: ವೃದ್ಧನೋರ್ವನನ್ನು ಅಪಹರಣ ಮಾಡಿ 15 ಲಕ್ಷ ರೂ. ಪಡೆದು, ಮತ್ತೆ 30 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

    ಖಣದಾಳದ ವಾಸುದೇವ ಸಹದೇವ ನಾಯಿಕ (36), ಭುಜಂಗ ತುಕಾರಾಮ ಜಾಧವ (31), ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಈರಯ್ಯ ಸಾತಯ್ಯ ಹಿರೇಮಠ (30), ಅಥಣಿ ತಾಲೂಕಿನ ನಂದಗಾಂವದ ಶಿವಾನಂದ ಉರ್ಫ್ ಶಿವಗೊಂಡ ನಾನಪ್ಪ ಸೋಲಖಾನ್ (26) ಬಂಧಿತ ಆರೋಪಿಗಳು. ಇವರಿಂದ 2 ಲಕ್ಷ ರೂ. ಮೌಲ್ಯದ ಕಾರು, ಒಂದು ಚಾಕು, ಒಂದು ತಲ್ವಾರ್ ಸೇರಿ 4.10 ಲಕ್ಷ ರೂ. ಮೌಲ್ಯದ ವಸ್ತುಗಳು, 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಘಟನೆ ವಿವರ: ರಾಯಬಾಗ ತಾಲೂಕಿನ ಖನದಾಳ ಗ್ರಾಮದ ಭೂಪಾಲ ಬಸಪ್ಪ ಆಜೂರೆ (60) ಎಂಬಾತನನ್ನು 30-1-2023ರಂದು ಅಪಹರಣ ಮಾಡಿದ ಆರೋಪಿಗಳು 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 15 ಲಕ್ಷ ರೂ. ಹಣ ಪಡೆದಿದ್ದಾರೆ. ಮತ್ತೆ 30 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಅಪಹರಣಕ್ಕೊಳಗಾದ ಭೂಪಾಲನ ಪತ್ನಿ ಶಾಂತಕ್ಕ ಆಜೂರೆ ಹಾರೂಗೇರಿ ಠಾಣೆಗೆ ದೂರು ನೀಡಿದ್ದಳು. ದೂರಿನನ್ವಯ ಕಾರ್ಯಪ್ರವೃತ್ತರಾದ ಹಾರೂಗೇರಿ ಪೊಲೀಸರು ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿ (ೆ.19) ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳು 18-8-2022ರಂದು ಈಗ ಅಪಹರಣಕ್ಕೊಳಗಾಗಿದ್ದ ಭೂಪಾಲನ ಮಗ ಬಾಳಪ್ಪ ಆಜೂರೆ ಎಂಬಾತನನ್ನು ಕೊಲೆ ಮಾಡಿ ಪುರಾವೆ ನಾಶ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಈ ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 20 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಸ್ಪಿ ಡಾ. ಸಂಜೀವ ಪಾಟೀಲ, ಡಿವೈಎಸ್ಪಿ ಎಂ. ವೇಣುಗೋಪಾಲ್ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಶ್ರೀಪಾದ ಜಲ್ದೆ ನೇತೃತ್ವದಲ್ಲಿ ಪ್ರಕರಣ ಭೇದಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ರವೀಂದ್ರ ನಾಯ್ಕೋಡಿ, ರವಿಚಂದ್ರ ಡಿ.ವಿ., ಪಿಎಸ್‌ಐಗಳಾದ ರೇಣುಕಾ ಎಂ. ಜಕನೂರ, ಪಿ.ವಿ. ಮುಜಾರಿ, ಎಎಸ್‌ಐಗಳಾದ ಎಸ್.ಎಲ್. ಬಾಡಕರ, ಕೆ.ಆರ್. ಸಾಳವಂಕಿ ಹಾಗೂ ಪಿ.ಬಿ.ವಿನಾಯಕ, ವಿ.ಎನ್. ಗಾಯಕವಾಡ, ಆರ್.ಪಿ. ಕಟೇಕರಿ, ಎಂ.ಎಸ್. ಪಾಟೀಲ, ಎ.ವಿ. ಶಾಂಡಗೆ, ಜಮೀರ ಡಾಂಗೆ, ಬಿ.ಎಲ್. ಹೋಸಟ್ಟೆ, ಪ್ರಕಾಶ ಖವಟಕೊಪ್ಪ, ಎ.ಎ. ಈರಕರ, ಬಸವರಾಜ ತಳವಾರ, ಸೋಮನಾಥ ಹಲಕಿ, ದೀಪಕ ಕಾಂಬಳೆ, ಸದಾಶಿವ ದಾಂಬೋಳಿ, ಅರ್ಜುನ ಬಾಗಿ, ಆರ್.ಎಸ್.ಲೋಹಾರ, ಎಚ್.ಆರ್. ಅಂಬಿ, ಗಜಾನನ ಸಾಂವಗಾಂವ, ಬನ್ನಪ್ಪ ಕೋತ ,ಮಹಾವೀರ ಪಾಟೀಲ, ಜಿ.ಎ.ಹಾವರಡ್ಡಿ, ಐ.ಕೆ ಖಾಜಿ, ಎಸ್.ಕೆ. ಅಸ್ಕಿ, ಎ.ಎನ್. ಮಸರಗುಪ್ಪಿ, ಆ.ಜಿ. ಖಾನಾಪೂರೆ, ಸಂಗನಗೌಡ ಬೌಧರಿ, ವಿಶ್ವನಾಥ ದೊಡಮನಿ (ಚಾಲಕ), ವಿನೋದ ಠಕ್ಕಣ್ಣವರ, ಪ್ರಶಾಂತ ಆಲಮಟ್ಟಿ, ನಂದೆವಾಲೆ, ಕುಮಾರ ಪವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts