More

    ಬೆಂಗಳೂರಿಗೆ ಬರುತ್ತಿದ್ದಾಳೆ ಬಾಲಿವುಡ್​ನ ಗುಳಿ ಕೆನ್ನೆ ಸುಂದರಿ ‘ಆಲಿಯಾ ಭಟ್’; 30 ಥಿಯೇಟರ್​ಗಳಲ್ಲಿ ‘RRR’ ಕನ್ನಡ ಟ್ರೈಲರ್ ರಿಲೀಸ್!

    ಬೆಂಗಳೂರು: ಟಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್​​ನ ಖ್ಯಾತ ಪ್ರತಿಭೆಗಳು ಸೇರಿ ನಟಿಸಿರುವ ಹೈ-ವೋಲ್ಟೇಜ್ ಚಿತ್ರ ‘RRR’. ಈ ಸಿನಿಮಾದಲ್ಲಿ ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ರೇ ಸ್ಟೀವನ್ಸನ್ ಸ್ಕಾಟ್ ಮತ್ತು ನಟಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್ ಜೊತೆ ಹಲವಾರು ಕಲಾವಿದರು ಸಿನಿಪ್ರಿಯರನ್ನು ರಂಜಿಸಲಿದ್ದಾರೆ. ‘ಬಾಹುಬಲಿಸಿನಿಮಾದ ನಂತರ ‘RRR’ ರಾಜಮೌಳಿ ಅವರ 400 ಕೋಟಿಯ ಹೈ-ಬಜೆಟ್ ಚಿತ್ರವಾಗಿದೆ. ಹಾಗಾಗಿ, 2022 ಜನವರಿ 7 ರಂದು ಬಿಡುಗಡೆಯಾಗಲಿರುವ ‘RRR’ ಚಿತ್ರಕ್ಕೆಂದು ನಿರ್ದೇಶಕ ರಾಜಮೌಳಿ ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದೀಗ ಬಂದ ಮಾಹಿತಿಯ ಪ್ರಕಾರ ಬಾಲಿವುಡ್ ಬೆಡಗಿ ನಟಿ ಆಲಿಯಾ ಭಟ್ ಅವರನ್ನು ಬೆಂಗಳೂರಿಗೆ ಕರೆತರುವುದರ ಜೊತೆ ‘RRR’ ಚಿತ್ರದ ಟ್ರೈಲರ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ ರಾಜಮೌಳಿ.

    ಹೌದು, ‘RRR’ ಸಿನಿಮಾದ ಟ್ರೈಲರ್ ಡಿ.3 ರಂದು ರಿಲೀಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಅದು ಬಿಡುಗಡೆ ಆಗಿರಲಿಲ್ಲ. ಇದರಿಂದ ಡಿ.9 ಗುರುವಾರದಂದು ಚಿತ್ರದ ಟ್ರೈಲರ್ ಬೆಳಗ್ಗೆ 10 ಗಂಟೆಗೆ ರಿಲೀಸ್ ಆಗಲಿದೆ ಎನ್ನಲಾಗಿದೆ. ‘RRR’ ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವುದರಿಂದ ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಹೀಗಾಗಿ, ಟ್ರೈಲರ್ ಸಹ ಐದೂ ಭಾಷೆಗಳಲ್ಲಿ ಒಂದೇ ಸಮಯಕ್ಕೆ ಅದರಲ್ಲೂ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ. ಇನ್ನು, ‘RRR’ನ ಕನ್ನಡದ ಅವತರಣೆಕೆಯ ಟ್ರೈಲರ್ ಅನ್ನು ಬೆಂಗಳೂರಿನ 30 ಥಿಯೇಟರ್​​ಗಳಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಲಾಗುತ್ತೆ. ಹಾಗಾದರೆ, ಬೆಂಗಳೂರಿನ ಯಾವ ಯಾವ ಚಿತ್ರಮಂದಿರಗಳಲ್ಲಿ ಟ್ರೈಲರ್ ಬಿಡುಗಡೆಯಾಗುತ್ತೆ ಎಂಬುದಕ್ಕೆ ಕೆಳಗಿನ ಫೋಟೋದಲ್ಲಿರುವ ಮಾಹಿತಿ ನೋಡಿ.  

    ಬೆಂಗಳೂರಿಗೆ ಬರುತ್ತಿದ್ದಾಳೆ ಬಾಲಿವುಡ್​ನ ಗುಳಿ ಕೆನ್ನೆ ಸುಂದರಿ 'ಆಲಿಯಾ ಭಟ್'; 30 ಥಿಯೇಟರ್​ಗಳಲ್ಲಿ 'RRR' ಕನ್ನಡ ಟ್ರೈಲರ್ ರಿಲೀಸ್! ಬೆಂಗಳೂರಿಗೆ ಬರುತ್ತಿದ್ದಾಳೆ ಬಾಲಿವುಡ್​ನ ಗುಳಿ ಕೆನ್ನೆ ಸುಂದರಿ 'ಆಲಿಯಾ ಭಟ್'; 30 ಥಿಯೇಟರ್​ಗಳಲ್ಲಿ 'RRR' ಕನ್ನಡ ಟ್ರೈಲರ್ ರಿಲೀಸ್!

    ಇದಿಷ್ಟೆ ಅಲ್ಲದೇ, ನಿರ್ದೇಶಕ ರಾಜಮೌಳಿ ಬೆಂಗಳೂರಿನ ಯುವಜನತೆ ತಮ್ಮ ಸಿನಿಮಾ ನೋಡುವಂತೆ ಮಾಡಲು ಒಂದು ಮಾಸ್ಟರ್ ಪ್ಲಾನ್ ಹಾಕಿದ್ದಾರೆ. ಅದುವೆ, ಚಿತ್ರದ ಟ್ರೈಲರ್ ರಿಲೀಸ್ ಆದ ನಂತರ ಬಾಲಿವುಡ್​​ನ ಗುಳಿ ಕೆನ್ನೆ ಸುಂದರಿ ನಟಿ ಆಲಿಯಾ ಭಟ್ ಅನ್ನು ಬೆಂಗಳೂರಿಗೆ ಕರೆತಂದು ಪ್ರಚಾರ ಮಾಡಿಸುವುದು. ಡಿ.10 ರಂದು ನಟಿ ಆಲಿಯಾ ಭಟ್, ರಾಜಮೌಳಿ ಬೆಂಗಳೂರಿಗೆ ಬರಲಿದ್ದಾರೆ. ಜಕ್ಕಣ್ಣನ ಈ ಮಾಸ್ಟರ್ ಪ್ಲಾನ್​​ನಿಂದ ಬಹುತೇಕ ಎಲ್ಲಾ ಪಡ್ಡೆ ಹುಡುಗರು ಸೂಪರ್ ಎಕ್ಸೈಟ್ ಆಗಲಿದ್ದಾರೆ ಎಂದು ಹೇಳಬೇಕು. ಜೊತೆಗೆ, ಸಿನಿಮಾದ ಸೂಪರ್ ಸ್ಟಾರ್ ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಕೂಡ ಬೆಂಗಳೂರಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ರಾಮ್ ಚರಣ್, ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಬರುವುದು ಇನ್ನೂ ದೃಢವಾಗಿಲ್ಲ. ಅಂದಹಾಗೆ, ನವೆಂಬರ್ 26 ರಂದು ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬಂದಿದ್ದರು. ‘RRR’ ಚಿತ್ರದ ಜನನಿಹಾಡನ್ನು ಹೋಟೆಲ್ ಒಂದರಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ಟ್ರೈಲರ್ ರಿಲೀಸ್ ನಂತರ ಬೆಂಗಳೂರಿಗೆ ಪ್ರಚಾರಕ್ಕೆ ಬರುತ್ತಿರುವುದು ವಿಶೇಷವಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts