More

    ಜಿದ್ದಾಜಿದ್ದಿನ ಕಣದಲ್ಲಿ ಮತದಾನ ಆಗಿದ್ದೆಷ್ಟು? ಯಾರಿಗೆ ಲಾಭ-ನಷ್ಟ ಎಂಬ ಜಿಜ್ಞಾಸೆ ಮೂಡಿದ್ದೇಕೆ?

    ಬೆಂಗಳೂರು/ಶಿರಾ: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ ರೂಂನಲ್ಲಿ ಭದ್ರವಾಗಿದೆ.

    ರಾಜರಾಜೇಶ್ವರಿನಗರದಲ್ಲಿ ಮತದಾರನ ಮುನಿಸಿಕೊಂಡಂತೆ ಕಂಡು ಬಂದಿದೆ. 2018ರಲ್ಲಿ ಶೇ.54.34 ಮತದಾನ ಆಗಿತ್ತು. ಈ ಬಾರಿ ರಾಜರಾಜೇಶ್ವರಿನಗರದಲ್ಲಿ ಶೇ.45.24 ರಷ್ಟು ಮತದಾನವಾಗಿದ್ದು, ಮೂರು ವಿಧಾನಸಭೆ, ಕಳೆದ ಲೋಕಸಭೆ ಹಾಗೂ ಬಿಬಿಎಂಪಿಯ ಹಿಂದಿನ ಚುನಾವಣೆಯಲ್ಲಿ ಆಗಿರುವ ಮತದಾನಕ್ಕಿಂತ ಈ ಬಾರಿ ಶೇ.9.1 ಕಡಿಮೆ ಮತದಾನವಾಗಿದೆ.

    ಜಿದ್ದಾಜಿದ್ದಿನ ಕಣದಲ್ಲಿ ಮತದಾನ ಆಗಿದ್ದೆಷ್ಟು? ಯಾರಿಗೆ ಲಾಭ-ನಷ್ಟ ಎಂಬ ಜಿಜ್ಞಾಸೆ ಮೂಡಿದ್ದೇಕೆ?ಇನ್ನು ಶಿರಾದಲ್ಲಿ ಶೇ.84.54 ಮತದಾನವಾಗಿದೆ. ಕಳೆದ ಬಾರಿಗಿಂತ ಈ ಬಾರಿಯೇ ತುಸು ಹೆಚ್ಚಾಗಿದೆ. 2018ರಲ್ಲಿ ಶೇ.84.31 ಮತದಾನವಾಗಿತ್ತು.
    ಈ ಬಾರಿ ಆರ್​ಆರ್​ನಗರ ಹೈವೋಲ್ಟೇಜ್​ ಕ್ಷೇತ್ರವಾಗಿತ್ತು. ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಹೋರಾಟ ಹೆಚ್ಚಾಗಿದ್ದೆರಿಂದ ಹೆಚ್ಚಿನ ಮತದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕರೊನಾ ಕರಿನೆರಳು ಸೇರಿದಂತೆ ನಾನಾ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗಿದೆ. ಇದು ಮತದಾನಕ್ಕೆ ಮತದಾರ ಮುನಿಸಿಕೊಂಡ ಸಂಕೇತ.

    ಮತದಾನದ ಪ್ರಮಾಣ ಕಡಿಮೆಯಾಗಿರುವುದು ನಾನಾ ರಾಜಕೀಯ ಲೆಕ್ಕಾಚಾರಗಳಿಗೆ ಇಂಬು ಮಾಡಿಕೊಟ್ಟಿದೆ. ಮತದಾನ ಪ್ರಮಾಣ ಕಡಿಮೆಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬ ಜಿಜ್ಞಾಸೆ ಸಾಮಾನ್ಯರಲ್ಲಿ ಮಾತ್ರವಲ್ಲ, ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳ ವರಿಷ್ಠರನ್ನೂ ಕಾಡುತ್ತಿದೆ.

    ಶಿರಾದಲ್ಲಿ ಶೇ.84 ರಷ್ಟು ಮತದಾನವಾಗಿದ್ದು ಹೇಳಿಕೊಳ್ಳುವ ಮಟ್ಟಿಗೇನೂ ಮತದಾನ ಪ್ರಮಾಣ ಕಡಿಮೆಯಾಗಿಲ್ಲ. ಆದರೆ, ರಾಜರಾಜೇಶ್ವರಿನಗರದ ಮತದಾನ ಪ್ರಮಾಣ ಶೇ.9.1 ರಷ್ಟು ಕಡಿಮೆಯಾಗಿರುವುದರ ಮರ್ಮ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ.

    ಮತದಾನ ಮುಗಿಯುತ್ತಿದ್ದಂತೆ ಶಾಸಕ, ಸಚಿವರ ಫೋನ್​ ಸಿಚ್ಡ್​ ಆಫ್​! ಅಂತಹದ್ದೇನಾಯ್ತು?

    ‘ಗೌರಮ್ಮ-ಕುಸುಮಾ ತಾಯಿ-ಮಗಳಂತೆ ಚೆನ್ನಾಗಿರಲಿ… ಅವರ ವಿರುದ್ಧ ನಮಗೆ ವ್ಯಕ್ತಿಗತ ಹೋರಾಟವಿಲ್ಲ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts