More

    ವಿದ್ಯಾವಂತರ 686 ಮತಗಳೇ ತಿರಸ್ಕೃತ; ಸಾಮಾನ್ಯರಿಗೆ ಮತದಾನದ ಮಾರ್ಗದರ್ಶನ ನೀಡುವ ಅಧಿಕಾರಿಗಳ ಸ್ಥಿತಿಯಿದು

    ರಾಣೆಬೆನ್ನೂರ: ತಿರಸ್ಕೃತಗೊಂಡ ಮತಗಳು, ಅಸಿಂಧುವಾದ ಮತಗಳು… ಈ ಶಬ್ದಗಳು ವಿದ್ಯುನ್ಮಾನ ಮತಯಂತ್ರಗಳು ಬಂದ ಬಳಿಕವೂ ಅಸ್ತಿತ್ವದಲ್ಲಿವೆ.
    ವಿದ್ಯುನ್ಮಾನ ಮತಯಂತ್ರಗಳಲ್ಲಿ ಏಕ ಕಾಲಕ್ಕೆ ಇಬ್ಬರಿಗೆ ಮತ ಹಾಕುವ ಅವಕಾಶ ಇಲ್ಲದೆ ಇರುವುದರಿಂದ ಎಲ್ಲ ಮತಗಳೂ ಸಿಂಧುವಾಗುತ್ತವೆ. ತಿರಸ್ಕೃತಗೊಂಡ ಮತಗಳು ಎಂಬ ಶಬ್ದ ಇತಿಹಾಸ ಸೇರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದು ಜೀವಂತ ಇದೆ. ಈ ಬಾರಿ ಚುನಾವಣೆಯಲ್ಲಿ ತಿರಸ್ಕೃತಗೊಂಡ 686 ಮತಗಳು ಇದಕ್ಕೆ ಸಾಕ್ಷಿಯಾಗಿವೆ.
    ಹೌದು, ಮಂಗಳವಾರ ನಡೆದ ಮತ ಎಣಿಕೆಯಲ್ಲಿ 686 ಮತಗಳು ತಿರಸ್ಕೃತಗೊಂಡಿವೆ. ಇವುಗಳೆಲ್ಲ ಸಾಮಾನ್ಯ ಮತದಾರ ವಿದ್ಯುನ್ಮಾನ ಮತಯಂತ್ರದಲ್ಲಿ ಹಾಕಿದ ಮತಗಳಲ್ಲ. ಬದಲಿಗೆ, ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ವಿದ್ಯಾವಂತರು ಹಾಕಿದ ಮತಗಳು.
    ಚುನಾವಣಾ ಕರ್ತವ್ಯದಲ್ಲಿ ನಿರತರಾಗಿ ಸಾಮಾನ್ಯ ಮತದಾರರು ಹೇಗೆ ಮತದಾನ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ ಸಿಬ್ಬಂದಿ ಹಾಕಿದ ಮತಗಳೇ ತಿರಸ್ಕೃತವಾಗಿದ್ದು ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿವೆ. ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದರು. ಇವರಲ್ಲಿ ಎಷ್ಟು ಜನ ಮತ ಚಲಾಯಿಸಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿಲ್ಲ. ಆದರೆ ಮತದಾನ ಮಾಡಿರುವ ಅಧಿಕಾರಿಗಳ ಪೈಕಿ 686 ಮತಗಳು ತಿರಸ್ಕೃತಗೊಂಡಿವೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
    ಅಂಚೆ ಮತಗಳು ತಿರಸ್ಕೃತಗೊಳ್ಳಲು ಬಹುಮುಖ್ಯ ಕಾರಣ ಮತ ಪತ್ರದಲ್ಲಿ ಒಬ್ಬ ಅಭ್ಯರ್ಥಿಗಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಹಾಕಿರುವುದು. ಕ್ರಮಬದ್ಧವಾಗಿ ಮತ ಹಾಕದೇ ಇರುವುದು ಕಾರಣ ಎನಿಸಿವೆ.

    See also  ಲಖನೌ ಸೂಪರ್‌ಜೈಂಟ್ಸ್ ಎದುರು ವಿಶಿಷ್ಠ ದಾಖಲೆ ಬರೆದ ರಾಜಸ್ಥಾನ ರಾಯಲ್ಸ್​ನ ವೇಗಿ ಬೌಲ್ಟ್, ನಾಯಕ ಸ್ಯಾಮ್ಸನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts