More

    ಕರೊನಾ ಬಿಕ್ಕಟ್ಟು ನಿವಾರಣೆ: ಕರ್ನಾಟಕಕ್ಕೆ ಪ್ರಧಾನಿ ಮೋದಿ ಶಹಭಾಸ್​ಗಿರಿ

    ಬೆಂಗಳೂರು: ಕರೊನಾ ವೈರಸ್​ ವಿರುದ್ಧದ ಹೋರಾಟವನ್ನು ಕರ್ನಾಟಕವು ಅತ್ಯಂತ ಸಮರ್ಥನೀಯವಾಗಿ ನಿಭಾಯಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 25ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಿರುವ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಕರ್ನಾಟಕವು ಅತ್ಯಂತ ಒಳ್ಳೆಯ ವಿಧಾನದಿಂದ ಇದನ್ನು ನಿಭಾಯಿಸುವಲ್ಲಿ ಸಮರ್ಥ ಆಗುತ್ತಿದೆ ಎಂದು ಹೇಳಿದರು.

    ಕರೊನಾ ವೈರಸ್​ ಎನ್ನುವುದು ಜಾಗತಿಕ ಯುದ್ಧ ಇದ್ದಂತೆಯೇ, ವೈದ್ಯಕೀಯ ಸಿಬ್ಬಂದಿ ಈ ಯುದ್ಧದಲ್ಲಿ ಸೈನಿಕರಂತೆ ಹೋರಾಟ ನಡೆಸುತ್ತಿದ್ದಾರೆ. ಸೈನಿಕರಂತೆ ಸಮವಸ್ತ್ರ ಇಲ್ಲ ಎನ್ನುವುದು ಬಿಟ್ಟರೆ ಇವರ ಹೋರಾಟ ಮಾತ್ರ ಅತ್ಯಂತ ಶ್ಲಾಘನಾರ್ಹವಾದುದು ಎಂದಿರುವ ಪ್ರಧಾನಿ, ಕರೊನಾ ವಾರಿಯರ್ಸ್​ ವಿರುದ್ಧ ನಡೆಯುತ್ತಿರುವ ದೌರ್ಜನ್ಯಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

    ಇದನ್ನೂ ಓದಿ: ನಮೋ ಜೀವನ ಚರಿತ್ರೆಯ ಹೊಸ ಬುಕ್​ ಬಿಡುಗಡೆ: ಕನ್ನಡವೂ ಸೇರಿ 20 ಭಾಷೆಗಳಲ್ಲಿ ಲಭ್ಯ

    ಯಾವುದೇ ಕಾರಣಕ್ಕೂ ಕರೊನಾ ವಾರಿಯರ್ಸ್ ವಿರುದ್ಧದ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಮೋದಿ ಹೇಳಿದರು. ಇದೆ ಸಂದರ್ಭದಲ್ಲಿ ಕರೊನಾ ವಾರಿಯರ್ಸ್​ಗೆ 50 ಲಕ್ಷ ರೂಪಾಯಿಗಳ ವಿಮಾ ಸೌಲಭ್ಯ ನೀಡಿರುವ ಬಗ್ಗೆ ಮಾಹಿತಿ ನೀಡಿದರು.

    ಕರೊನಾ ವೈರಸ್​ ಕಣ್ಣಿಗೆ ಕಾಣಿಸುವುದಿಲ್ಲ. ಇದು ಅಗೋಚರವಾದದ್ದು. ಆದರೆ ಇದರ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕರೊನಾ ವೈರಸ್​ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ. ಆದರೆ ಇದನ್ನು ಸಮರ್ಥವಾಗಿ ನಮ್ಮ ವೈದ್ಯಕೀಯ ಸಿಬ್ಬಂದಿ ನಿರ್ವಹಿಸುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

    ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸಾಧ್ಯವಾಗದ್ದು ಈ ಆರು ವರ್ಷಗಳಲ್ಲಿ ಸಾಧ್ಯವಾಗಿದ್ದು, ಇಡೀ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ ಎಂದು ಹೇಳಿದ ಪ್ರಧಾನಿ, ಹೊಸಹೊಸ ಪ್ರಯೋಗಗಳ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವಕರನ್ನು ತಯಾರು ಮಾಡುತ್ತಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸಿದರು.

    ಇದನ್ನೂ ಓದಿ: ಅಮ್ಮನಿಗೆ ಅಂದು ಮೋದಿ ಬರೆದ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ…

    ಈ ಮೊದಲು ಜಾಗತೀಕರಣ ಎಂದರೆ ಆರ್ಥಿಕತೆಯ ಸುಧಾರಣೆ ಎಂಬ ಮಾತು ಇತ್ತು. ಆದರೆ ಕರೊನಾ ವೈರಸ್,​ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪ್ರಗತಿ ಸಾಧಿಸಬೇಕಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಗ, ಆಯುರ್ವೇದ ಮತ್ತು ಜನರಲ್​ ಫಿಟ್​ನೆಟ್​ನಂಥ ತರಬೇತಿಗಳು ಹೆಚ್ಚಿಗೆ ನಡೆಯುವ ಅವಶ್ಯಕತೆ ಇದೆ ಎಂದು ಮೋದಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಭಾರತದ ಜನತೆಯ ಆರೋಗ್ಯಕ್ಕಾಗಿ ತಮ್ಮ ಸರ್ಕಾರ ಶುರು ಮಾಡಿರುವ ಆಯುಷ್ಮಾನ್​ ಭಾರತ್​ ಇದಾಗಲೇ ಒಂದು ಕೋಟಿ ಜನರನ್ನು ತಲುಪಿದೆ. ಅದೇ ರೀತಿ, ಮಿಷನ್​ ಇಂದ್ರಧನುಷ್​ನಿಂದ ಲಕ್ಷಾಂತರ ಮಂದಿ ಪ್ರಯೋಜನ ಪಡೆದಿದ್ದಾರೆ. ಕರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ಶುರು ಮಾಡಿರುವ ಆರೋಗ್ಯ ಸೇತು ಅ್ಯಪ್​ ವಿಶ್ವದಲ್ಲಿಯೇ ಮಹತ್ವದ ಪ್ರಯೋಗ ಆಗಿದ್ದು, ಇದಾಗಲೇ 12 ಕೋಟಿ ಜನರನ್ನು ಇದನ್ನು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಸ್ವದೇಶಿ ಚಳವಳಿ ಕೂಡ ಏರುಗತಿಯಲ್ಲಿ ಸಾಗಿದ್ದು, ಇದಾಗಲೇ ಪಿಪಿಇ ಕಿಟ್​ ಸೇರಿದಂತೆ ಅನೇಕ ವೈದ್ಯಕೀಯ ಸಲಕರಣೆಯನ್ನು ಮೇಕ್​ ಇನ್​ ಇಂಡಿಯಾ ಯೋಜನೆ ಅಡಿ ರೂಪಿಸಲಾಗಿದೆ. ಇವೆಲ್ಲವೂ ಆರೋಗ್ಯ ಕ್ಷೇತ್ರದಲ್ಲಿ ಭಾರತ ಸದಾ ಮುಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

    ಇದನ್ನೂ ಓದಿ:  ಅನಿಸಿಕೆ: ಆತ್ಮನಿರ್ಭರ ಭಾರತಕ್ಕಾಗಿ ದೃಢಹೆಜ್ಜೆ

    ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 25ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಅದೀಗ ಯೌವ್ವನಕ್ಕೆ ಕಾಲಿಟ್ಟಂತಾಗಿದೆ. ಈಗ ಅದರ ಜವಾಬ್ದಾರಿ ಹೆಚ್ಚಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಯುವಸಮೂಹವನ್ನು ಪ್ಯಾರಾ ಮೆಡಿಕಲ್​ ಸೇರಿದಂತೆ ಇನ್ನಿತರ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಪ್ರಧಾನಿ ಕರೆ ಕೊಟ್ಟರು.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts