More

    ನಮೋ ಜೀವನ ಚರಿತ್ರೆಯ ಹೊಸ ಬುಕ್​ ಬಿಡುಗಡೆ: ಕನ್ನಡವೂ ಸೇರಿ 20 ಭಾಷೆಗಳಲ್ಲಿ ಲಭ್ಯ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತ ಮುನ್ನಡೆಯುತ್ತಿರುವ ಸಂದರ್ಭ ಇದು. ಇದೇ ವೇಳೆ ಪ್ರಧಾನಿ ಮೋದಿಯವರ ಬಾಲ್ಯದ ವಿರಳ ಚಿತ್ರಗಳು ಮತ್ತು ಕುತೂಹಲಕರ ಅಂಶಗಳಿರುವ ಜೀವನ ಚರಿತ್ರೆಯ ಹೊಸ ಪುಸ್ತಕ ಬಿಡುಗಡೆಯಾಗಿದೆ.  ಪುಸ್ತಕದ ಹೆಸರು ‘Narendra Modi – Harbinger of Prosperity & Apostle of World Peace’ ಎಂದಾಗಿದ್ದು, ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್​ ಇದನ್ನು ಶುಕ್ರವಾರ ಬಿಡಗಡೆ ಮಾಡಿದರು. ಪ್ರಧಾನ ಮಂತ್ರಿಯಾಗಿ ಅವರು ಆರು ವರ್ಷ ಅವಧಿ ಪೂರೈಸಿದ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

    ಇದನ್ನೂ ಓದಿ:1962 ಅಲ್ಲ ಈಗ ನಡೀತಿರೋದು- ಚೀನಾಕ್ಕೆ ಪಂಜಾಬ್ ಸಿಎಂ ವಾರ್ನಿಂಗ್​!

    ಕರೊನಾ ಕಾರಣಕ್ಕೆ ಲಾಕ್​ಡೌನ್ ಚಾಲ್ತಿಯಲ್ಲಿರುವ ಕಾರಣ ಇಂಟರ್​ನೆಟ್ ಮೂಲಕ ಪುಸ್ತಕ ಬಿಡುಗಡೆಯ ಸರಳ ಕಾರ್ಯಕ್ರಮ ಪ್ರಸಾರವಾಗಿದೆ. ಈ ಕಾರ್ಯಕ್ರಮವನ್ನು ಭಾರತ ಮತ್ತು ಅಮೆರಿಕದಲ್ಲಿನ ಗಣ್ಯರು ವೀಕ್ಷಿಸಿದ್ದಾರೆ ಎಂದು ಪುಸ್ತಕದ ಸಹ ಲೇಖಕ ಅದಿಶ್ ಸಿ. ಅಗರ್​ವಾಲ್​ ತಿಳಿಸಿದ್ದಾರೆ. ಅದಿಶ್ ಅವರು ಇಂಟರ್​ನ್ಯಾಷನಲ್​ ಕೌನ್ಸಿಲ್ ಆಫ್ ಜುರಿಸ್ಟ್ಸ್​ನ ಪ್ರೆಸಿಡೆಂಟ್​, ಆಲ್​ ಇಂಡಿಯಾ ಬಾರ್ ಅಸೋಸಿಯೇಷನ್​ನ ಚೇರ್​ಮನ್​. ಇನ್ನೊಬ್ಬ ಸಹ ಲೇಖಕ ಅಮೆರಿಕನ್ ಲೇಖಕ, ಕವಿ ಎಲಿಸ್​ಬೆತ್​​ ಹೊರನ್​. ಪುಸ್ತಕದಲ್ಲಿ ಮೋದಿ ಅವರ ಬಾಲ್ಯದ ಮತ್ತು ಆರಂಭಿಕ ಬದುಕಿನ ವಿರಳ ಛಾಯಾಚಿತ್ರಗಳಿವೆ. ವೈಯಕ್ತಿಕ ಬದುಕು ಮತ್ತು ರಾಜಕೀಯ ಬದುಕಿನ ಸೂಕ್ಷ್ಮ ಚಿತ್ರಣವನ್ನು ಈ ಪುಸ್ತಕ ನೀಡುತ್ತಿದ್ದು, ಚಹಾ ಮಾರಿದ ಹುಡುಗ ಪ್ರಧಾನಿಯಾಗಿ ಬದಲಾದ ಬಗೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಇದುವರೆಗೆ ಗೊತ್ತಿಲ್ಲ. ಕಡಿಮೆ ಜನರಿಗಷ್ಟೇ ಗೊತ್ತಿರುವ ಕೆಲವು ವಿಷಯಗಳೂ ಈ ಪುಸ್ತಕದಲ್ಲಿದೆ ಎಂದು ಅದಿಶ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಜಿ7 ಔಟ್​ಡೇಟೆಡ್​!: ಹೊಸತನ್ನು ಕಟ್ಟೋಣ, ಭಾರತವನ್ನೂ ಸೇರಿಸೋಣ ಎಂದ್ರು ಅಧ್ಯಕ್ಷ ಟ್ರಂಪ್​

    ಈ ಪುಸ್ತಕ ಇ-ಬುಕ್​ ರೂಪದಲ್ಲಿಯೂ ಲಭ್ಯವಿದೆ. ಇಂಗ್ಲಿಷ್, ಅರೆಬಿಕ್​, ಡಚ್​, ಫ್ರೆಂಚ್​, ಜರ್ಮನ್​, ಇಟಾಲಿಯನ್​, ಜಪಾನೀಸ್​, ಮ್ಯಾಂಡ್ರಿಯನ್​, ರಷ್ಯನ್​, ಸ್ಪ್ಯಾನಿಶ್ ಸೇರಿ 10 ವಿದೇಶಿ ಭಾಷೆ ಮತ್ತು ಹಿಂದಿ, ಆಸ್ಸಾಮಿಸ್​, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು,ತೆಲುಗು, ಉರ್ದು ಸೇರಿ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್​)

    ಐಟಿ ರಿಟರ್ನ್ಸ್ ಅರ್ಜಿಗಳನ್ನು ಬಿಡುಗಡೆ ಮಾಡಿದ ಸಿಬಿಡಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts