More

    ರೂ. 110ರಿಂದ ರೂ. 3ಕ್ಕೆ ಕುಸಿದಿದ್ದ ರಿಲಯನ್ಸ್ ಹೋಮ್ ಫೈನಾನ್ಸ್ ಷೇರು: ಈಗ ಭಾರೀ ಬೇಡಿಕೆ, ಅಪ್ಪರ್ ಸರ್ಕ್ಯೂಟ್ ಹಿಟ್​ ಏಕೆ?

    ಮುಂಬೈ: ಅನಿಲ್ ಅಂಬಾನಿ ಅವರ ಬಹುತೇಕ ಕಂಪನಿಗಳ ಷೇರುಗಳು ದೀರ್ಘಾವಧಿಗೆ ಹೂಡಿಕೆ ಮಾಡಿದ ಹೂಡಿಕೆದಾರರನ್ನು ಬಹುತೇಕ ದಿವಾಳಿ ಮಾಡಿವೆ. ಈ ಕಂಪನಿಗಳಲ್ಲಿ ಒಂದು ರಿಲಯನ್ಸ್ ಹೋಮ್ ಫೈನಾನ್ಸ್.

    ರಿಲಯನ್ಸ್ ಹೋಮ್ ಫೈನಾನ್ಸ್‌ನ ಷೇರುಗಳ ಬೆಲೆ ಅಂದಾಜು 8 ವರ್ಷಗಳ ಹಿಂದೆ ರೂ. 110 ರ ಮಟ್ಟವನ್ನು ಮುಟ್ಟಿತ್ತು. ಆದರೆ, ನಂತರ ಪರಿಸ್ಥಿತಿ ಬದಲಾಯಿತು. ಕಂಪನಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಾರಂಭಿಸಿತು. ಇದರ ಪರಿಣಾಮವು ರಿಲಯನ್ಸ್ ಹೋಮ್ ಫೈನಾನ್ಸ್‌ನ ಷೇರುಗಳ ಮೇಲೂ ಗೋಚರಿಸಿತು. ಹೀಗಾಗಿ, ಷೇರು ಬೆಲೆ 1 ರೂಪಾಯಿಗಿಂತ ಕಡಿಮೆ ಬೆಲೆ ಮುಟ್ಟಿತು. ಆದರೆ, ಈಗ ಮತ್ತೆ ಈ ಷೇರುಗಳ ಬೆಲೆಯಲ್ಲಿ ಏರುಗತಿ ವಾತಾವರಣ ಮೂಡಿದೆ.

    ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ, ರಿಲಯನ್ಸ್ ಹೋಮ್ ಫೈನಾನ್ಸ್ ಷೇರುಗಳ ಬೆಲೆ ಶೇಕಡಾ 2 ರಷ್ಟು ಏರಿಕೆ ಕಂಡು ಅಪ್ಪರ ಸರ್ಕ್ಯೂಟ್ ಹಿಟ್​ ಆದವು. ಈ ಷೇರು ಬೆಲೆ ಈಗ 3.02 ರೂ. ತಲುಪಿದೆ. ಈ ಷೇರಿನ ಹಿಂದಿನ ದಿನದ ಮುಕ್ತಾಯದ ಬೆಲೆ ರೂ. 2.97 ಆಗಿತ್ತು. ಈ ವರ್ಷದ ಜನವರಿ ತಿಂಗಳಲ್ಲಿ ಈ ಷೇರು ಬೆಲೆ 6.22 ರೂ. ತಲುಪಿತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಆಗಸ್ಟ್ 2023 ರಲ್ಲಿ ಷೇರಿನ ಬೆಲೆ 1.61 ರೂ. ಇದ್ದು, ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ.

    ರಿಲಯನ್ಸ್ ಹೋಮ್ ಫೈನಾನ್ಸ್ ಒಂದು ಹಣಕಾಸು ಸೇವೆಗಳ ಕಂಪನಿಯಾಗಿದೆ. ಇದು ರಿಲಯನ್ಸ್ ಕ್ಯಾಪಿಟಲ್‌ನ ಅಂಗಸಂಸ್ಥೆಯಾಗಿದೆ. ಇತ್ತೀಚೆಗೆ ರಿಲಯನ್ಸ್ ಕ್ಯಾಪಿಟಲ್ ಅನ್ನು ಹಿಂದೂಜಾ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗ ಷೇರುಗಳ ಬೆಲೆ ಏರಿಕೆ ಕಂಡುಬಂದಿದೆ. ಆದರೆ, ಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ನವೆಂಬರ್ 29, 2021 ರಂದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯನ್ನು ತೆಗೆದುಹಾಕಿದೆ. ಇದರ ನಿರ್ವಾಹಕರಾಗಿ ನಾಗೇಶ್ವರ ರಾವ್ ವೈ ಅವರನ್ನು ನೇಮಿಸಿದೆ.

    ಎಷ್ಟು ಸಾಲ?:

    ರಿಲಯನ್ಸ್ ಕ್ಯಾಪಿಟಲ್ 38,000 ಕೋಟಿ ರೂ.ಗಿಂತ ಹೆಚ್ಚಿನ ಸಾಲವನ್ನು ಹೊಂದಿತ್ತು. ನಾಲ್ಕು ಅರ್ಜಿದಾರರು ಆರಂಭದಲ್ಲಿ ಪರಿಹಾರ ಯೋಜನೆಗಳೊಂದಿಗೆ ಈ ಕಂಪನಿ ಖರೀದಿಗೆ ಬಿಡ್ ಮಾಡಿದ್ದರು. ಆದರೂ, ಕಡಿಮೆ ಬಿಡ್ ಬೆಲೆಯಿಂದಾಗಿ ಸಾಲಗಾರರ ಸಮಿತಿಯು ಅವುಗಳನ್ನು ತಿರಸ್ಕರಿಸಿತ್ತು. ಅಲ್ಲದೆ, ಎರಡನೇ ಸುತ್ತಿನ ಹರಾಜನ್ನು ನಡೆಸಿತು, ಇದರಲ್ಲಿ ಹಿಂದೂಜಾ ಸಮೂಹದ ಕಂಪನಿ ಇಂಡಸ್ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್ (IIHL) ಮತ್ತು ಟೊರೆಂಟ್ ಇನ್ವೆಸ್ಟ್​ಮೆಂಟ್ಸ್ ಭಾಗವಹಿಸಿದ್ದವು. ಜೂನ್ 2023 ರಲ್ಲಿ ರಿಲಯನ್ಸ್ ಕ್ಯಾಪಿಟಲ್‌ಗಾಗಿ ಇಂಡಸ್‌ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್ ನೀಡಿದ ಸಾಲ ಪರಿಹಾರ ಯೋಜನೆಯನ್ನು NCLT (National Company Law Tribunal- ಕಂಪನಿ ಕಾನೂನು ರಾಷ್ಟ್ರೀಯ ನ್ಯಾಯಮಂಡಳಿ)ಯ ಮುಂಬೈ ಪೀಠವು ಅನುಮೋದಿಸಿತು.

    ರೂ. 1774 ರಿಂದ 458ಕ್ಕೆ ಕುಸಿದಿದ್ದ ಷೇರು ಬೆಲೆ ಮೂರೇ ದಿನಗಳಲ್ಲಿ 65% ಏರಿಕೆ; ದಿಗ್ಗಜ ಹೂಡಿಕೆದಾರನಿಂದ 3 ಲಕ್ಷ ಷೇರು ಖರೀದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts