More

    ಆರ್‌ಸಿಬಿಗೆ ಇಂದು ರಾಜಸ್ಥಾನ ರಾಯಲ್ಸ್ ಚಾಲೆಂಜ್

    ದುಬೈ: ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡು ಎಡವಟ್ಟು ಮಾಡಿಕೊಂಡಿರುವ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಅಸ್ಥಿರ ನಿರ್ವಹಣೆಯಿಂದಾಗಿ ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-13ರಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ.

    ವಿರಾಟ್ ಕೊಹ್ಲಿ ಪಡೆ ಕಳೆದ 8 ದಿನಗಳಲ್ಲಿ 4ನೇ ಪಂದ್ಯವಾಡುತ್ತಿದ್ದು, ಈ ಬಾರಿ ಮಧ್ಯಾಹ್ನದ ಬಿಸಿಲಿನಲ್ಲಿ ಆಡುವ ಸವಾಲನ್ನೂ ಎದುರಿಸುತ್ತಿದೆ. ಕೆಕೆಆರ್ ವಿರುದ್ಧ ಬಲಿಷ್ಠ ನಿರ್ವಹಣೆ ತೋರಿದ್ದರೂ, ಕಿಂಗ್ಸ್ ಇಲೆವೆನ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಮುಂದಾಗಿ ಕೈಸುಟ್ಟುಕೊಂಡಿದೆ. ಮತ್ತೊಂದೆಡೆ ರಾಜಸ್ಥಾನ ತಂಡ ಮಧ್ಯಮ ಕ್ರಮಾಂಕದ ದೌರ್ಬಲ್ಯದಿಂದಾಗಿ ಡೆಲ್ಲಿ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತ್ತು. ಈ ತಿಂಗಳ ಆರಂಭದಲ್ಲಿ ರಾಜಸ್ಥಾನ ವಿರುದ್ಧ ಅಬುಧಾಬಿಯಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ಸುಲಭ ಗೆಲುವು ದಾಖಲಿಸಿತ್ತು. ಇದು ಟೂರ್ನಿಯಲ್ಲಿ ಆರ್‌ಸಿಬಿ ಚೇಸಿಂಗ್ ಮೂಲಕ ಗೆದ್ದ ಏಕೈಕ ಪಂದ್ಯವೂ ಆಗಿದೆ.

    ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿದರೂ, ಅವರನ್ನು ಆರಂಭಿಕರನ್ನಾಗಿ ಆಡಿಸುತ್ತಿರುವುದರಿಂದ ತಂಡದ ಮಧ್ಯಮ ಕ್ರಮಾಂಕದ ಅಸ್ಥಿರ ನಿರ್ವಹಣೆ ಮುಂದುವರಿದಿದೆ. ಇನ್ನು ವೇಗಿ ಜೋಫ್ರಾ ಆರ್ಚರ್ ಬೌಲಿಂಗ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದರೂ ಅವರಿಗೆ ಸಮರ್ಥ ಬೆಂಬಲದ ಕೊರತೆ ಕಾಡುತ್ತಿದೆ.

    ಆರ್‌ಸಿಬಿ: ಟೀಮ್ ಕಾಂಬಿನೇಷನ್ ಬದಲಾಗುವ ಸಾಧ್ಯತೆ ಕಡಿಮೆ ಇದ್ದರೂ, ಬ್ಯಾಟಿಂಗ್ ಕ್ರಮಾಂಕ ಮಾತ್ರ ಹಿಂದಿನಂತೆಯೇ ಶಿಸ್ತುಬದ್ಧವಾಗುವ ನಿರೀಕ್ಷೆ ಇದೆ. ಇದರಿಂದ ಎಬಿ ಡಿವಿಲಿಯರ್ಸ್‌ ಮತ್ತೆ ಮೇಲಿನ ಕ್ರಮಾಂಕಕ್ಕೆ ಮರಳಬಹುದು.
    ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್ ಸೋಲು.
    ಸಂಭಾವ್ಯ ತಂಡ: ಆರನ್ ಫಿಂಚ್, ದೇವದತ್ ಪಡಿಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ (ವಿ.ಕೀ), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಕ್ರಿಸ್ ಮಾರಿಸ್, ಇಸುರು ಉದಾನ, ನವದೀಪ್ ಸೈನಿ, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.

    ರಾಜಸ್ಥಾನ ರಾಯಲ್ಸ್: ತಂಡದಲ್ಲಿ ಈಗ ಹೆಚ್ಚಿನ ಬದಲಾವಣೆಗೆ ಅವಕಾಶವಿಲ್ಲ. ಆಲ್ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಆರಂಭಿಕರನ್ನಾಗಿ ಆಡಿಸುವ ನಿರ್ಧಾರವನ್ನಷ್ಟೇ ಮರುಪರಿಶೀಲಿಸಬಹುದಾಗಿದೆ. ಇದರಿಂದ ತಂಡದ ಮಧ್ಯಮ ಕ್ರಮಾಂಕಕ್ಕೂ ಹೆಚ್ಚಿನ ಬಲ ತುಂಬಬಹುದು.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 13 ರನ್ ಸೋಲು.
    ಸಂಭಾವ್ಯ ತಂಡ: ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿ.ಕೀ), ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ/ಮನನ್ ವೊಹ್ರಾ, ರಿಯಾನ್ ಪರಾಗ್, ರಾಹುಲ್ ತೆವಾಟಿಯ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 21
    ಆರ್‌ಸಿಬಿ: 9
    ರಾಜಸ್ಥಾನ: 10
    ರದ್ದು: 2

    ದುರ್ಬಲ ಹೃದಯದವರು ಪಂಜಾಬ್ ತಂಡದ ಪಂದ್ಯ ನೋಡಬೇಡಿ, ಪ್ರೀತಿ ಝಿಂಟಾ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts