More

    ಬಿಪಿಎಲ್​ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳಿಗೆ ತಲಾ 10 ಕಿಲೋ ಅಕ್ಕಿ ಮೂರು ತಿಂಗಳು- ನಾಳೆಯಿಂದಲೇ ವಿತರಣೆ ಎಂದ ಸಚಿವ ಗೋಪಾಲಯ್ಯ

    ಬೆಂಗಳೂರು: ಕರೊನಾ ಸೋಂಕು ತಡೆಗೆ ಲಾಕ್​ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಯಾರಿಗೂ ಪಡಿತರವಿಲ್ಲದೆ ತೊಂದರೆ ಆಗಬಾರದು ಎಂದು ಈ ಮೊದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ಧಾರ ಮಾಡಿದ ಪ್ರಕಾರ ಎರಡು ತಿಂಗಳ ಪಡಿತರ ನೀಡಲಾಗುತ್ತಿದೆ. ಇದನ್ನು ರಾಜ್ಯದ ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.

    ಅವರು ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಇದೇ ಮೊದಲ ಬಾರಿಗೆ ಎರಡ ತಿಂಗಳ ಪಡಿತರವನ್ನು ಇಡೀ ರಾಜ್ಯಾದ್ಯಂತ 90% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದಾನ್ಯಗಳ ವಿತರಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ನಾಳೆಯಿಂದ ಪ್ರತಿ ತಿಂಗಳಂತೆ 3 ತಿಂಗಳು ೧೦ ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದಾರೆ.

    ಅಲ್ಲದೆ, ಉಜ್ವಲ ಮತ್ತು ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗುತ್ತದೆ. ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೆ ಪ್ರತಿ ತಿಂಗಳು ೧೦ ಕೆ.ಜಿ ಅಕ್ಕಿಯನ್ನು ಮುಂದಿನ ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. ಮೇ 1ರಿಂದ ಎಲ್ಲ ಪಡಿತರ ಅಂಗಡಿಗಳಲ್ಲಿ 10ಕೆಜಿ ಅಕ್ಕಿ , 1ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

    ಅದೇ ರೀತಿ, ಎಪಿಎಲ್ ಪಡಿತರ ಚೀಟಿದಾರರಿಗೂ ಕೆಜಿ ಗೆ 15ರೂ ದರದಲ್ಲಿ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ.ಮೇ 1,ರಿಂದ ಅಕ್ಕಿ ವಿತರಣೆ ಆರಂಭವಾಗುತ್ತದೆ ಎಂಬ ಅಂಶದತ್ತವೂ ಅವರು ಗಮನಸೆಳೆದರು.

    ಸ್ಟ್ರಾಟಜಿಕ್​ ಆಗಿಯೇ ಟ್ರೋಲ್ ಆದ್ರು ರಾಗಾ

    ಸೂಪರ್​ ಶಿಕ್ಷೆ!- ಲಾಕ್​ಡೌನ್ ನಿಯಮ ಉಲ್ಲಂಘಕರಿಗೆ ಸಿಕ್ತು ಸ್ಮರಣೀಯ ಸಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts