More

    ‘ಸಿಂಗಂ’ ಜತೆಗೆ ‘ಸಿಂಬ’; ಅಜಯ್​ ದೇವಗನ್​ ಚಿತ್ರದಲ್ಲಿ ರಣವೀರ್​ ಸಿಂಗ್​

    ಮುಂಬೈ: ‘ಸಿಂಗಂ’ ಚಿತ್ರದ ಮೂರನೆಯ ಭಾಗ ಬರುತ್ತದಂತೆ. ಹಾಗಂತ ಒಂದು ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಚಿತ್ರಕ್ಕೆ ‘ಸಿಂಗಂ ಅಗೇನ್​’ ಎಂಬ ಹೆಸರಿಡಲಾಗುತ್ತದೆ ಮತ್ತು ಈ ಚಿತ್ರ ಮಾರ್ಚ್​ನಲ್ಲಿ ಶುರುವಾಗಲಿದೆ ಎಂದು ಹೇಳಲಾಗಿತ್ತು. ಈಗ ‘ಸಿಂಗಂ’ ಜತೆಗೆ ‘ಸಿಂಬ’ ಸಹ ಸೇರಿಕೊಂಡಿದ್ದಾರಂತೆ.

    ಇದನ್ನೂ ಓದಿ: ರಾಜೇಶ್​ ಕೃಷ್ಣನ್​, ಕುಮಾರ್​ ಗೋವಿಂದ್​, ಶ್ರೀನಿವಾಸಮೂರ್ತಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

    ರೋಹಿತ್​ ಶೆಟ್ಟಿ ಮೊದಲು ಅಜಯ್​ ದೇವಗನ್​ ಜತೆಗೆ ‘ಸಿಂಗಂ’ ಚಿತ್ರ ಮಾಡಿದರು. ಆ ನಂತರ ರಣವೀರ್​ ಸಿಂಗ್​ ಜತೆಗೆ ‘ಸಿಂಬ’ ಮಾಡಿದರು. ಇದಾದ ಮೇಲೆ ಅಕ್ಷಯ್​ ಕುಮಾರ್​ ಜತೆಗೆ ‘ಸೂರ್ಯವಂಶಿ’ ಮಾಡಿದರು, ಈ ಮೂರೂ ಚಿತ್ರಗಳ ನಾಯಕರು ಖಡಕ್​ ಪೊಲೀಸ್​ ಅಧಿಕಾರಿ. ಈ ಪೊಲೀಸ್​ ಅಧಿಕಾರಿಗಳು ಒಂದು ಕೆಟ್ಟ ವ್ಯವಸ್ಥೆ ಮತ್ತು ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದೇ ಈ ಮೂರು ಚಿತ್ರಗಳ ಕಥೆಯಾಗಿತ್ತು.

    ಈಗ ರೋಹಿತ್​ ಶೆಟ್ಟಿ ಮತ್ತೆ ಅಜಯ್​ ದೇವಗನ್​ ಜತೆಗೆ ಸೇರಿಕೊಂಡು ‘ಸಿಂಗಂ ಅಗೇನ್​’ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ‘ಸಿಂಬ’ ಚಿತ್ರದ ರಣವೀರ್​ ಸಿಂಗ್​ ಪಾತ್ರವನ್ನು ಸಹ ಎಳೆದು ತರುತ್ತಾರಂತೆ. ‘ಸೂರ್ಯವಂಶಿ’ ಚಿತ್ರದಲ್ಲಿ ಅಜಯ್​ ಮತ್ತು ರಣವೀರ್​ ಸಿಂಗ್​ ಹೇಗೆ ಅತಿಥಿಗಳಾಗಿ ಕಾಣಿಸಿಕೊಂಡಿದ್ದರೋ, ಈಗ ‘ಸಿಂಗಂ ಅಗೇನ್​’ ಚಿತ್ರದಲ್ಲೂ ರಣವೀರ್​ ಸಿಂಗ್​ ಬರುತ್ತಾರಂತೆ.

    ಇದನ್ನೂ ಓದಿ: ತಮಿಳಿಗೆ ರಕ್ಷಿತ್​ ಶೆಟ್ಟಿ? ವಿಜಯ್​ ಚಿತ್ರದಲ್ಲಿ ನಟನೆ?

    ‘ಸಿಂಗಂ 2’ ಬಂದಾಗಲೇ ‘ಸಿಂಗಂ 3’ ಯಾವಾಗ ಬರುತ್ತದೆ ಎಂಬ ಕುತೂಹಲ ಈ ಫ್ರಾಂಚೈಸಿ ಚಿತ್ರಗಳ ಅಭಿಮಾನಿಗಳಲ್ಲಿತ್ತು. ಈಗ ಅದಕ್ಕೊಂದು ಚಾಲನೆ ಸಿಕ್ಕಿದ್ದು, ಚಿತ್ರ ಶುರುವಾಗುವುದಷ್ಟೇ ಬಾಕಿ ಇದೆ.

    ಮದುವೆಯಾದವರ ಅನುಭವವೇ ‘ಲವ್ ಬರ್ಡ್ಸ್’; ಟೀಸರ್ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts