ಬೆಂಗಳೂರು: ರಿಯಲ್ ಲೈಫ್ ದಂಪತಿ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್, ‘ಲವ್ ಬರ್ಡ್ಸ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಮಿಲನಾ ಅವರ ಫಸ್ಟ್ ಲುಕ್ ಪೋಸ್ಟರ್ಗಳು ಬಿಡುಗಡೆಯಾಗಿದ್ದವು. ಈಗ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಇನ್ನೊಂದು ಚಿತ್ರದಲ್ಲಿ ಮಂಡ್ಯ ರಮೇಶ್ ಮಗಳು ದಿಶಾ … ಯಾವುದು ಗೊತ್ತಾ?
‘ಲವ್ ಬರ್ಡ್ಸ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು ವಿಜಯ್ ರಾಘವೇಂದ್ರ ಹಾಗೂ ಅಜೇಯ್ ರಾವ್. ಟೀಸರ್ ಬಿಡುಗಡೆ ಮಾಡಿ ಇಬ್ಬರೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಲವ್ ಬರ್ಡ್ಸ್’ ಚಿತ್ರವನ್ನು ಶ್ರೀ ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ‘ಕಡ್ಡಿಪುಡಿ’ ಚಂದ್ರು ನಿರ್ಮಿಸಿದ್ದು, ಪಿ.ಸಿ.ಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡುವ ಪಿ.ಸಿ. ಶೇಖರ್, ‘ನಾನು ಸಾಮಾನ್ಯವಾಗಿ ಒಂದೇ ತರಹದ ಚಿತ್ರ ಮಾಡುವುದಿಲ್ಲ. ಬೇರೆಬೇರೆ ರೀತಿಯ ಚಿತ್ರ ಮಾಡುತ್ತಿರುತ್ತೇನೆ. ಲಾಕ್ಡೌನ್ ಸಮಯದಲ್ಲಿ ಬರೆದ ಕಥೆಯಿದು. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಈ ಕಥೆ ಬರೆಯಲು ಸ್ಪೂರ್ತಿ. ಕಥೆ ಬರೆಯಬೇಕಾದರೆ ಕೃಷ್ಣ – ಮಿಲನ ನಾಗರಾಜ್ ಅವರೆ ನಾಯಕ-ನಾಯಕಿ ಅಂತ ನಿರ್ಧರಿಸಿದ್ದೆ. ಆನಂತರ ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಅವರು ಚಿತ್ರ ಮಾಡಲು ಮುಂದಾದರು’ ಎಂದರು.
ಕೃಷ್ಣ ಹಾಗೂ ಮಿಲನಾ ಮದುವೆಯಾದ ನಂತರ ಒಪ್ಪಿಕೊಂಡ ಚಿತ್ರವಿದು. ಈ ಕುರಿತು ಮಾತನಾಡುವ ಕೃಷ್ಣ, ‘ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಇದರಲ್ಲಿ ದೀಪಕ್ – ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ತಮಿಳಿಗೆ ರಕ್ಷಿತ್ ಶೆಟ್ಟಿ? ವಿಜಯ್ ಚಿತ್ರದಲ್ಲಿ ನಟನೆ?
‘ಲವ್ ಬರ್ಡ್ಸ್’ ಚಿತ್ರದಲ್ಲಿ ಲವ್ ಅಷ್ಟೇ ಅಲ್ಲ, ಬೇರೆ ವಿಷಯಗಳು ಇವೆ ಎನ್ನುವ ಮಿಲನಾಗೆ ಈ ಕಥೆ ಬಹಳ ಇಷ್ಟವಾಯಿತಂತೆ. ಅದೇ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು.
ರಾಜೇಶ್ ಕೃಷ್ಣನ್, ಕುಮಾರ್ ಗೋವಿಂದ್, ಶ್ರೀನಿವಾಸಮೂರ್ತಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ