More

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾರೆಡ್ಡಿ! ಡಿಕೆ.ಸುರೇಶ್ ಮನವೊಲಿಕೆಗೂ ಬಗ್ಗದ ನೂತನ ಸಚಿವ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಕ್ಯಾತೆ ಶುರುವಾಗಿದ್ದು ಇದೀಗ ಸಾರಿಗೆ ಖಾತೆ ನೀಡಿದ್ದಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಇದೀಗ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್ ಎದುರು ಸಾಲು ಸಾಲು ಸಂಕಷ್ಟಗಳು ಇದ್ದು ಅದರಲ್ಲಿ ಖಾತೆ ಹಂಚಿಕೆ ಕೂಡ ಒಂದು. ಪ್ರತಿಯೊಬ್ಬರಿಗೂ ತಮ್ಮಿಷ್ಟದ ಖಾತೆಯೇ ಸಿಗಬೇಕು ಎಂದರೆ ಹೇಗೆ? ಹೀಗಾಗಿ ಸಚಿವರಿಗೆ ಖಾತೆ ಹಂಚಿಕೆ ಮಾಡುವವರಿಗೂ ಸಂಕಷ್ಟ.

    ಇದನ್ನೂ ಓದಿ: ಸ್ವಪಕ್ಷೀಯರಿಂದಲೇ ಯಡಿಯೂರಪ್ಪಗೆ ಕಿರುಕುಳ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಬೇಸರ

    ಇದೀಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆ ಜವಾಬ್ದಾರಿ ವಹಿಸಿದ್ದು ಇದರಿಂದ ಅಸಮಾಧಾನಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದು ಅವರ ನಿವಾಸಕ್ಕೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.

    ಸದಾಶಿವ ನಗರ ನಿವಾಸದಿಂದ ಲಕ್ಕಸಂದ್ರದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ‌ಭೇಟಿಗೆಂದು ತೆರಳಿದ ಡಿಕೆಶಿ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೂ ಮೊದಲು ರಾಮಲಿಂಗ ರೆಡ್ಡಿ ನಿವಾಸದಲ್ಲಿ ಡಿಕೆ ಸುರೇಶ್ ಬೆಳಗ್ಗೆ 11 ಗಂಟೆಯಿಂದಲೂ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಡಿಕೆ ಸುರೇಶ್ ಮನವೊಲಿಕೆಗೂ ಬಗ್ಗದ ಕಾರಣ ಸ್ವತಃ ಡಿಕೆಶಿವಕುಮಾರ್​ ಬಂದಿದ್ದು ಖಾತೆಯನ್ನು ಒಪ್ಪಿಕೊಳ್ಳಲು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಮನೆ ಬಳಿಯೇ ಕರೊನಾ ಲಸಿಕೆ ಕೊಡಲಿ : ಶಾಸಕ ರಾಮಲಿಂಗಾ ರೆಡ್ಡಿ ಒತ್ತಾಯ

    ಆದರೆ ರಾಮಲಿಂಗಾ ರೆಡ್ಡಿ ಮಾತ್ರ “ಸಾರಿಗೆ ಆದರೆ ಬೇಡವೇ ಬೇಡ, ಸಚಿವ ಸ್ಥಾನವೇ ಬೇಡ” ಎಂದು ಡಿಕೆ ಶಿವಕುಮಾರ್ ಎದುರು ಪುನರುಚ್ಚರಿಸಿದ್ದಾರೆ. 

    ರಾಮಲಿಂಗಾ ರೆಡ್ಡಿ ವಾದವೇನು?

    ಇದನ್ನೂ ಓದಿ: ಭದ್ರತೆ ಸಿಗದ್ದಕ್ಕೆ ಪ್ರತಿಪಕ್ಷ ನಾಯಕರಿಗೆ ಮನವಿ, ಶಾಸಕ ರಾಮಲಿಂಗಾ ರೆಡ್ಡಿ ಅಭಿಪ್ರಾಯ 

    ನೂತನ ಸಚಿವ ರಾಮಲಿಂಗಾ ರೆಡ್ಡಿ ಮಾತಿನ ಪ್ರಕಾರ ಸಿಎಂ ಬಿಟ್ಟರೆ ಕ್ಯಾಬಿನೆಟ್​ನಲ್ಲಿರುವ ಹಿರಿಯ ತಾನು. ತನಗೆ ಸಾರಿಗೆ ಇಲಾಖೆಯಂತ ಸಣ್ಣ ಖಾತೆಯನ್ನು ನೀಡುವುದು ಬೇಡ. ಕೃಷ್ಣಭೈರೇಗೌಡಗೆ ಕಂದಾಯ ಕೊಟ್ಟಿದ್ದೀರಿ. ಅಂತಹ ಪ್ರಮುಖ ಖಾತೆಯನ್ನೇ ತನಗೆ ನೀಡಬಹುದಿತ್ತು. ಸಾರಿಗೆ ಇಲಾಖೆಯನ್ನು ತಾನು ಹಿಂದೆ ನಾಲ್ಕೂವರೆ ವರ್ಷ ನಿಭಾಯಿಸಿದ್ದೇನೆ. ತನಗಿಂತ ಕಿರಿಯರಿಗೆಲ್ಲ ಪ್ರಮುಖ ಖಾತೆಗಳನ್ನು ನೀಡಿದ್ದು ತನಗೆ ಮಾಡಿರೋ ಅವಮಾನ. ಅವಮಾನ ಮಾಡಿಕೊಂಡು ಖಾತೆ ನಿಭಾಯಿಸುವುದಕ್ಕಿಂತ ಸಚಿವ ಸ್ಥಾನವೇ ಬೇಡ. ಇದೇ ವಾದವನ್ನು ರಾಮಲಿಂಗಾ ರೆಡ್ಡಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಎದುರು ಮುಂದಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts