More

    ಹೊಸ ಪಕ್ಷ ಸ್ಥಾಪಿಸಲು ಹೊರಟ ರಜನಿಕಾಂತ್​ಗೆ ಸಮನ್ಸ್​! ಕಾರಣವೇನು ಗೊತ್ತಾ?

    ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ರಾಜಕೀಯಕ್ಕೆ ಎಂಟ್ರಿ ಆಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ರಜನಿಕಾಂತ್​ ಅವರಿಗೆ ಏಕ ವ್ಯಕ್ತಿ ಆಯೋಗವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದೆ. ಯಾವ ವಿಚಾರಕ್ಕಾಗಿ ಈ ವಿಚಾರಣೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ದುಬೈ​ ದೊರೆಗೂ ಶುರುವಾಯ್ತು ಟಿಕ್​ಟಾಕ್​ ಹುಚ್ಚು! ಬದಲಾವಣೆ ತರೋದಕ್ಕೆ ಇದೇ ಸರಿಯಾದ ದಾರಿ ಎಂದ ಸುಲ್ತಾನ್​

    2018ರಲ್ಲಿ ತೂತುಕುಡಿ ಸ್ಟೆರ್‌ಲೈಟ್ ಕಾರ್ಖಾನೆಯಲ್ಲಿ ಹಿಂಸಾಚಾರ ನಡೆದಿತ್ತು. ವೇದಾಂತದ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಘಟನೆಯಲ್ಲಿ ಹದಿಮೂರು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದಿದ್ದ ರಜನಿಕಾಂತ್​, ಈ ಹೋರಾಟದಲ್ಲಿ ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯೊಳಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಇದನ್ನೂ ಓದಿ: ಅಪ್ಪ ಅಮ್ಮನ ಉಸಿರುಗಟ್ಟಿಸಿ, ಬೆಂಕಿ ಹಚ್ಚಿ ಕೊಂದ ಮಕ್ಕಳು! ಪೊಲೀಸರು ಬಂದಾಗ ಬೇರೆಯದ್ದೇ ಕಥೆ ಹೇಳಿದರು

    ತೂತುಕುಡಿ ಪೊಲೀಸ್ ಫೈರಿಂಗ್ ಘಟನೆ ಬಗ್ಗೆ ಏಕ ವ್ಯಕ್ತಿ ಆಯೋಗವು ವಿಚಾರಣೆ ನಡೆಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ವಿಚಾರಣೆಗೆ ಸಹಕರಿಸಲು ಫೆಬ್ರವರಿಯಲ್ಲೇ ರಜನಿಕಾಂತ್​ ಅವರಿಗೆ ಸಮನ್ಸ್​ ನೀಡಲಾಗಿತ್ತು. ತುತುಕೂಡಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಹೇಳುವ ಮೂಲಕ ರಜನಿಕಾಂತ್ ವಿನಾಯಿತಿ ಬಯಸಿದ್ದರು. ಇದೀಗ ಜನವರಿ 19ರಂದು ವಿಚಾರಣೆಗೆ ಹಾಜರಾಗುವಂತೆ ಆಯೋಗವು ಎರಡನೇ ಬಾರಿಗೆ ಸಮನ್ಸ್​ ನೀಡಿದೆ. ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದ ಆಯೋಗವು ರಿಜಿಸ್ಟರ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದೆ. (ಏಜೆನ್ಸೀಸ್​)

    ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

    ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts