More

    ದುಬೈ​ ದೊರೆಗೂ ಶುರುವಾಯ್ತು ಟಿಕ್​ಟಾಕ್​ ಹುಚ್ಚು! ಬದಲಾವಣೆ ತರೋದಕ್ಕೆ ಇದೇ ಸರಿಯಾದ ದಾರಿ ಎಂದ ಸುಲ್ತಾನ್​

    ದುಬೈ: ಟಿಕ್​ಟಾಕ್​ ಬಗ್ಗೆ ಗೊತ್ತಿಲ್ಲದವರು ಬಹುಶಃ ಯಾರೂ ಇಲ್ಲ. ಸರ್ಕಾರಿ ಇಲಾಖೆಗಳು ಸೇರಿ, ಅನೇಕ ಸೆಲೆಬ್ರಿಟಗಳು, ಗಣ್ಯರು ಕೂಡ ಟಿಕ್​ಟಾಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಆ್ಯಪ್​ನ್ನು ಭಾರತದಲ್ಲಿ ನಿಷೇಧಿಸಲಾಗಿದೆಯಾದರೂ ಬೇರೆ ದೇಶಗಳಲ್ಲಿ ಟಿಕ್​ಟಾಕ್​ ತನ್ನ ಹಾವಳಿಯನ್ನು ಮುಂದುವರಿಸಿದೆ. ಇದೀಗ ಈ ಆ್ಯಪ್​ಗೆ ದುಬೈನ್ ದೊರೆಯೂ ಎಂಟ್ರಿ ಕೊಟ್ಟಿದ್ದಾರೆ.

    ಇದನ್ನೂ ಓದಿ: ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

    ದುಬೈನ ಸುಲ್ತಾನ, ಅರಬ್​ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಟಿಕ್​ಟಾಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಾಗಿ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಟಿಕ್​​ಟಾಕ್​ಗೆ ಬಂದಿದ್ದೇನೆ. ಇಲ್ಲಿ ಕೋಟ್ಯಂತರ ಜನರಿದ್ದಾರೆ. ಜನರನ್ನು ತಲುಪಲು ಇದು ಸೂಕ್ತ ವೇದಿಕೆ. ನಾನು ಈ ಆ್ಯಪ್​ ಮೂಲಕ ಜನರನ್ನು ತಲುಪಲಿದ್ದೇನೆ. ನನ್ನ 50 ವರ್ಷದ ಸೇವೆಯ ಹಾದಿಯನ್ನು ಪರಿಚಯಿಸಲಿದ್ದೇನೆ. ಜನರಿಗೆ ಸ್ಫೂರ್ತಿ ತುಂಬಲಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಪ್ಪ ಅಮ್ಮನ ಉಸಿರುಗಟ್ಟಿಸಿ, ಬೆಂಕಿ ಹಚ್ಚಿ ಕೊಂದ ಮಕ್ಕಳು! ಪೊಲೀಸರು ಬಂದಾಗ ಬೇರೆಯದ್ದೇ ಕಥೆ ಹೇಳಿದರು

    ಶೇಖ್​ ಅವರ ಟಿಕ್​ಟಾಕ್​ ಅಕೌಂಟ್​ನಲ್ಲಿ ಎರಡು ವಿಡಿಯೋಗಳನ್ನು ಹಾಕಲಾಗಿದೆ. ಒಂದರಲ್ಲಿ ಹುಲಿ ಸಿಂಹಗಳ ವಿಡಿಯೋವಿದ್ದು, ಪ್ರತಿನಿತ್ಯ ಧನಾತ್ಮಕ ಭಾವದೊಂದಿಗೆ ಏಳಬೇಕೆಂದು ಶೇಖ್​ ಅವರು ತಮ್ಮ ಧ್ವನಿಯಲ್ಲೇ ಹೇಳಿದ್ದಾರೆ. ಎರಡನೇ ವಿಡಿಯೋದಲ್ಲಿ ಕರೊನಾ ಸೋಂಕಿನ ಬಗ್ಗೆ ಜಾಗ್ರತೆ ವಹಿಸುವಂತೆ ಅವರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

    ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts