More

    ಕೊನೆಗೂ ಅಣ್ಣಾತ್ತೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ಸಾದ ರಜನಿಕಾಂತ್

    ಚೆನ್ನೈ: ಕರೊನಾ ಮತ್ತು ಲಾಕ್​ಡೌನ್​ನಿಂದ ಅತಂತ್ರವಾಗಿದ್ದ ಬಿಗ್​ಬಜೆಟ್​ ಮತ್ತು ಸ್ಟಾರ್​ ಚಿತ್ರಗಳ ಪೈಕಿ ರಜನಿಕಾಂತ್​ ಅಭಿನಯದ ಅಣ್ಣಾತ್ತೆ ಸಹ ಒಂದು. ಕೊನೆಗೂ ಈ ಚಿತ್ರದ ಚಿತ್ರೀಕರಣ ಬುಧವಾರ ಹೈದರಾಬಾದ್​ನಲ್ಲಿ ಮುಗಿದಿದ್ದು, ರಜನಿಕಾಂತ್​ ಚೆನ್ನೈಗೆ ವಾಪಸ್ಸಾಗಿದ್ದಾರೆ.

    ಇದನ್ನೂ ಓದಿ: ಈ ಚಿತ್ರದಲ್ಲಿ ಜನಪ್ರಿಯ ಕಾಮೆಡಿಯನ್ ಇದ್ದಾರೆ… ಯಾರು ಹೇಳ್ತೀರಾ ?!

    ಅಣ್ಣಾತ್ತೆ ಚಿತ್ರದ ಚಿತ್ರೀಕರಣ 2020ರಲ್ಲಿ ಆರಂಭವಾಗಿತ್ತು. ಒಂದಿಷ್ಟು ಭಾಗದ ಚಿತ್ರೀಕರಣದ ನಂತರ ಲಾಕ್​ಡೌನ್​ನಿಂದ ಚಿತ್ರೀಕರಣ ನಿಂತಿತ್ತು. ಚಿತ್ರತಂಡದವರು ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಈ ವರ್ಷದ ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಎಂದು ಪ್ಲಾನ್​ ಹಾಕಿಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

    ಕರೊನಾ ಮೊದಲ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಡಿಸೆಂಬರ್​ನಲ್ಲಿ ಚಿತ್ರತಂಡದವರು ಪುನಃ ಚಿತ್ರೀಕರಣ ಪ್ರಾರಂಭಿಸಿದರಾದರೂ, ಚಿತ್ರತಂಡದ ಏಳು ಜನರಿಗೆ ಕರೊನಾ ಪಾಸಿಟಿವ್​ ಉಂಟಾದ ಹಿನ್ನೆಲಯಲ್ಲಿ ಚಿತ್ರೀಕರಣ ಮತ್ತೊಮ್ಮೆ ನಿಲ್ಲಿಸಲಾಗಿತ್ತು.

    ಕೊನೆಗೆ, ಏಪ್ರಿಲ್​ನಲ್ಲಿ ಹೈದರಾಬಾದ್​ನಲ್ಲಿ ಮತ್ತೊಮ್ಮೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಈ ಭಾಗದ ಚಿತ್ರೀಕರಣದಲ್ಲಿ ಸಾಕಷ್ಟು ಕಲಾವಿದರು ಭಾಗವಹಿಸಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗಿದೆಯಂತೆ. 35 ದಿನಗಳ ಈ ಹಂತದ ಚಿತ್ರೀಕರಣ ಕೊನೆಗೂ ಬುಧವಾರ ಮುಗಿದಿದ್ದು, ಈ ಮೂಲಕ ಚಿತ್ರ ಸಂಪೂರ್ಣವಾಗಿದೆ. ಸದ್ಯದಲ್ಲೇ ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಲಿದ್ದು, ಈ ವರ್ಷದ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ವೈರಲ್​ ಆಗ್ತಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!

    ಅಣ್ಣಾತ್ತೆ ಚಿತ್ರವನ್ನು ಸನ್​ ಪಿಕ್ಚರ್ಸ್​ ನಿರ್ಮಿಸುತ್ತಿದ್ದು, ಶಿವ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್​, ನಯನತಾರಾ, ಕೀರ್ತಿ ಸುರೇಶ್​, ಮೀನಾ, ಖುಷ್ಬೂ ಮುಂತಾದವರು ನಟಿಸಿದ್ದಾರೆ.

    ಮನೆಯಲ್ಲಿ ಹಾಗೆಲ್ಲ ಆಡಿದ್ರೆ ಕಪಾಳಕ್ಕೆ ಹೊಡೀತಾರೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts