More

    ಎರಡು ಸಿನಿಮಾಗಳಿಂದ 250 ಕೋಟಿ ರೂ. ಸಂಭಾವನೆ ಪಡೆದರಾ ರಜನಿಕಾಂತ್​?

    ಚೆನ್ನೈ: ರಜನಿಕಾಂತ್​ ಅಭಿನಯದ ‘ಜೈಲರ್​’ ಚಿತ್ರದ ಚಿತ್ರೀಕರಣ ಎರಡು ತಿಂಗಳ ಹಿಂದೆ ಪ್ರಾರಂಭವಾಗಿ, ಕೆಲವು ಭಾಗದ ಚಿತ್ರೀಕರಣವಷ್ಟೇ ಆಗಿದೆ. ಈ ಮಧ್ಯೆ, ಅವರು ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವ ಸುದ್ದಿ ಇದ್ದು, ಈ ಚಿತ್ರಗಳಲ್ಲಿ ನಟಿಸುವುದಕ್ಕೆ 250 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ‘ಗಂಧದ ಗುಡಿ’ ಚಿತ್ರಕ್ಕೆ ಮೊದಲ ದಿನ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

    ರಜನಿಕಾಂತ್​ ಈ ಹಿಂದೆ ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣದ ‘2.0’ ಮತ್ತು ‘ದರ್ಬಾರ್​’ ಚಿತ್ರಗಳಲ್ಲಿ ನಟಿಸಿದ್ದರು. ಆ ನಂತರ ರಜನಿಕಾಂತ್ ಅಭಿನಯದಲ್ಲಿ ಇದೇ ಸಂಸ್ಥೆಯು ಎರಡು ಚಿತ್ರಗಳನ್ನು ನಿರ್ಮಿಸಲಿದೆ ಎಂಬ ಸುದ್ದಿ ಇತ್ತು. ಆದರೆ, ಯಾವುದೂ ಪಕ್ಕಾ ಆಗಿರಲಿಲ್ಲ. ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್​ನ ಸುಭಾಸ್ಕರ್​, ರಜನಿಕಾಂತ್​ ಅವರನ್ನು ಭೇಟಿ ಮಾಡಿ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಈ ಒಪ್ಪಂದದ ಪ್ರಕಾರ, ಸಂಸ್ಥೆ ನಿರ್ಮಾಣದ ಎರಡು ಚಿತ್ರಗಳಲ್ಲಿ ರಜನಿಕಾಂತ್​ ನಟಿಸಲಿದ್ದು, ಈ ಎರಡೂ ಚಿತ್ರಗಳು ನವೆಂಬರ್​ ನಾಲ್ಕರಂದು ಅಧಿಕೃತವಾಗಿ ಪ್ರಾರಂಭವಾಗಲಿದೆಯಂತೆ.

    ಇದಕ್ಕೂ ಮುನ್ನ, ‘ಡಾನ್​’ ಖ್ಯಾತಿಯ ಸಿಬಿ ಚಕ್ರವರ್ತಿ ನಿರ್ದೇಶನದ ಚಿತ್ರವೊಂದರಲ್ಲಿ ರಜನಿಕಾಂತ್​ ನಟಿಸುತ್ತಿರುವ ಸುದ್ದಿ ಇತ್ತು. ಅದರ ಜತೆಗೆ, ಮಣಿರತ್ನಂ ನಿರ್ದೇಶನದ ಒಂದು ಚಿತ್ರದಲ್ಲಿ ರಜನಿಕಾಂತ್​ ನಟಿಸುವುದಾಗಿ ಸುದ್ದಿಯಾಗಿತ್ತು. ರಜನಿಕಾಂತ್​ ಈಗ ಒಪ್ಪಿರುವ ಲೈಕಾ ಸಂಸ್ಥೆಯ ಎರಡು ಚಿತ್ರಗಳನ್ನು ಮಣಿರತ್ನಂ ಮತ್ತು ಸಿಬಿ ನಿರ್ದೇಶಿಸುತ್ತಿದ್ದಾರಾ? ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಇನ್ನು, ಈ ಕುತೂಹಲದ ಜತೆಗೆ ಇನ್ನೊಂದು ವಿಷಯವೂ ಕೇಳಿಬರುತ್ತಿದೆ. ಅದೇನೆಂದರೆ, ಲೈಕಾ ನಿರ್ಮಿಸುತ್ತಿರುವ ಎರಡು ಚಿತ್ರಗಳು ವಿಭಿನ್ನವಲ್ಲ, ಬದಲಿಗೆ ‘ಬಾಹುಬಲಿ’ ಮತ್ತು ‘ಕೆಜಿಎಫ್​’ ಶೈಲಿಯ ಫ್ರಾಂಚೈಸಿ ಚಿತ್ರಗಳಂತೆ. ಕಥೆಯು ದೊಡ್ಡದಾಗಿರುವುದರಿಂದ, ಎರಡು ಭಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆಯಂತೆ. ಆದರೆ, ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಿದ್ದಾರೆ ಎಂಬ ಮಾಹಿತಿ ಸದ್ಯಕ್ಕಿಲ್ಲ.

    ಇದನ್ನೂ ಓದಿ: ‘ವರಾಹ ರೂಪಂ’ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್​ ಆದೇಶ

    ಈ ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ರಜನಿಕಾಂತ್​ ಅವರು ಪಡೆದಿರುವ ಸಂಭಾವನೆ 250 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಒಂದು ಕಾಲಕ್ಕೆ ರಜನಿಕಾಂತ್​ ಇಡೀ ದೇಶದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ಈಗಲೂ ಅವರಿಗೆ ಅಷ್ಟು ದೊಡ್ಡ ಮಾರ್ಕೆಟ್​ ಇದೆಯಾ? ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಲೈಕಾ ಸಂಸ್ಥೆಯವರು ನಿಜಕ್ಕೂ 250 ಕೋಟಿ ರೂ. ಸಂಭಾವನೆಯನ್ನು ರಜನಿಕಾಂತ್​ ಅವರಿಗೆ ಕೊಟ್ಟಿದ್ದಾರಾ? ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರವಿಲ್ಲ.

    ‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್​ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts