More

    ಬ್ಲ್ಯಾಕ್​ ಫಂಗಸ್​ ಬಗ್ಗೆ ಮೋದಿಗೆ ಮೂರು ಪ್ರಶ್ನೆ ಕೇಳಿದ ರಾಹುಲ್​ ಗಾಂಧಿ

    ನವದೆಹಲಿ: ದೇಶದಲ್ಲಿ ಕರೊನಾ ಅಬ್ಬರ ಕೊಂಚ ತಗ್ಗುತ್ತಿದೆ ಎನ್ನುವಷ್ಟರಲ್ಲಿ ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಹೆಚ್ಚಾಗಲಾರಂಭಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, “ಬ್ಲ್ಯಾಕ್​ ಫಂಗಸ್​ ಮಹಾಮಾರಿಯ ಬಗ್ಗೆ ಕೇಂದ್ರ ಸರ್ಕಾರವು ಮೂರು ವಿಚಾರಗಳಲ್ಲಿ ಸ್ಪಷ್ಟನೆ ನೀಡಬೇಕು. 1) ಆಂಫೊಟೆರಿಸಿನ್​ ಬಿ ಔಷಧ ಕೊರತೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? 2) ಔಷಧವನ್ನು ರೋಗಿಗಳಲ್ಲಿ ಯಾವ ವಿಧಾನದಲ್ಲಿ ನೀಡಲಾಗುತ್ತಿದೆ? 3) ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಮೋದಿ ಸರ್ಕಾರ ಜನರಿಗೆ ಇನ್ನಷ್ಟು ತೊಂದರೆಗೊಳಗಾಗುವಂತೆ ಏಕಾಗಿ ಮಾಡುತ್ತಿದೆ?” ಎಂದು ಬರೆದುಕೊಂಡಿದ್ದಾರೆ.

    ಅಂದ ಹಾಗೆ ದೇಶದಲ್ಲಿ ಈಗಾಗಲೇ ಬ್ಲ್ಯಾಕ್​, ವೈಟ್​, ಯೆಲ್ಲೋ, ಕ್ರೀಂ ಬಣ್ಣದ ಫಂಗಸ್​ಗಳು ಕಾಣಿಸಿಕೊಂಡಿವೆ. ಪ್ರತಿದಿನ ದೇಶದಲ್ಲಿನ ಫಂಗಸ್​ ಪ್ರಕರಣಗಳು ಏರುತ್ತಲೇ ಸಾಗಿವೆ. ಕರ್ನಾಟಕ ರಾಜ್ಯವೊಂದರಲ್ಲೇ 1250 ಮಂದಿ ಬ್ಲ್ಯಾಕ್​ ಫಂಗಸ್​ಗೆ ತುತ್ತಾಗಿದ್ದು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. (ಏಜೆನ್ಸೀಸ್)

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಶಾಲೆಗೆ ಸ್ಕರ್ಟ್ ಧರಿಸಿ ಬರಲಾರಂಭಿಸಿದ ಪುರುಷ ಶಿಕ್ಷಕರು! ಅಷ್ಟಕ್ಕೂ ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts