More

    ರಸ್ತೆ ಪಕ್ಕದ ಮನೆಯಿಂದ ಕೇಳಿಬಂತು ಮಹಿಳೆ ಚೀರಾಟದ ಶಬ್ದ: ಓಡಿಹೋಗಿ ನೋಡಿದ ದಂಪತಿಗೆ ಕಾದಿತ್ತು ಶಾಕ್​!

    ತ್ರಿಶೂರು: ಬೆಳ್ಳಂಬೆಳಗ್ಗೆ ಕೇರಳ ಮೂಲದ ದಂಪತಿ ವಾಯುವಿಹಾರಕ್ಕೆ ತೆರಳಿದಾಗ ಮಾರ್ಗಮಧ್ಯೆ ಕೇಳಿಬಂದಂತಹ ಅಳುವ ಶಬ್ದದ ಕಡೆ ಹೋಗಿ ನೋಡಲು ನಿಜಕ್ಕೂ ಅವರಿಗೆ ಶಾಕ್​ ಒಂದು ಎದುರಾಗಿತ್ತು. ಆದರೂ, ತಮ್ಮ ಸಮಯಪ್ರಜ್ಞೆಯಿಂದಾಗಿ ದಂಪತಿ ಎರಡು ಜೀವಗಳನ್ನು ಉಳಿಸಿದ್ದಾರೆ.

    ವಿವರಣೆಗೆ ಬರುವುದಾದರೆ, ವನಿಯಂಪಾರ ನಿವಾಸಿಗಳಾದ ದಂಪತಿ ಎರಪ್ಪರ ಮ್ಯಾಥೀವ್​ ಮತ್ತು ಆತನ ಪತ್ನಿ ಗ್ರೆಟೆಲ್ ಇಂದು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ರಸ್ತೆಯ ಸಮೀಪ ಇದ್ದ ಮನೆಯಿಂದ ಮಹಿಳೆಯ ಕಿರುಚಾಟ ಶಬ್ದ ಕೇಳಿಬಂದಿದೆ. ಸಮಯ ವ್ಯರ್ಥ ಮಾಡದೇ ಮತ್ತು ಒಂದು ಕ್ಷಣವೂ ಯೋಚಿಸದೇ ದಂಪತಿ ತಕ್ಷಣ ಶಬ್ದ ಕೇಳಿಬಂದ ಸ್ಥಳಕ್ಕೆ ಓಡಿದ್ದಾರೆ.

    ಈ ವೇಳೆ ಮನೆಯಲ್ಲಿದ್ದ ಗರ್ಭಿಣಿ ಹೊಟ್ಟೆ ನೋವಿನಿಂದ ನರಳುತ್ತಾ ಮಗುವಿಗೆ ಜನ್ಮ ನೀಡುತ್ತಿರುವುದನ್ನು ಗಮಿಸಿದ್ದಾರೆ. ಭಾರಿ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ಆಕೆಯನ್ನು ನೋಡಿದ ದಂಪತಿ ತಕ್ಷಣ ನೆರವಿಗೆ ಧಾವಿಸಿದರು.

    ಇದನ್ನೂ ಓದಿರಿ: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ

    ಮೂಲತಃ ನರ್ಸ್​ ಆಗಿರುವ ಗ್ರೇಟೆಲ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ನೆರವಾದರು. ಮಗುವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಆದರೆ, ಕರುಳುಬಳ್ಳಿಯನ್ನು ಕತ್ತರಿಸಿದಾಗಲೂ ಮಗು ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನು ಗಮನಿಸಿದ ಗ್ರೇಟೆಲ್​, ಪ್ರಥಮ ಚಿಕಿತ್ಸೆಯನ್ನು ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಅಳಲು ಆರಂಭಿಸಿತು.

    ಗ್ರೇಟೆಲ್​ ಭಾರತದ ಅನೇಕ ಆಸ್ಪತ್ರೆಗಳಲ್ಲಿ ನರ್ಸ್​ ಆಗಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯಿಂದಾಗಿ ಮಗು ಮತ್ತು ತಾಯಿಯ ರಕ್ಷಣೆ ಮಾಡಿದ್ದಾರೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಎರಡು ಜೀವಗಳು ತಮ್ಮ ಅಮೂಲ್ಯ ಪ್ರಾಣವನ್ನು ಉಳಿಸಿಕೊಂಡಿವೆ.

    ಅಂದಹಾಗೆ ಮಹಿಳೆಗೆ ಮೇನಲ್ಲಿ ಮಗುವಾಗು ನಿರೀಕ್ಷೆಯಿತ್ತು. ಆದರೆ, ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮಗುವಿಗೆ ಮನೆಯಲ್ಲಿ ಜನ್ಮ ನೀಡಲು ಆರಂಭಿಸಿದ್ದಾಳೆ. ಆದರೆ, ದಂಪತಿ ಸಮಯಪ್ರಜ್ಞೆಯಿಂದಾಗಿ ಮಗು ಮತ್ತು ತಾಯಿ ಬದುಕುಳಿದಿವೆ. ಸದ್ಯ ಸ್ಥಳೀಯರ ಸಹಾಯದಿಂದ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್​)

    ತೂತುಬಿದ್ದ ಗುಡಿಸಲು, ಸೆಕ್ಯುರಿಟಿ ಕೆಲಸ: ಕಷ್ಟದ ಹಾದಿ ಮೆಟ್ಟಿನಿಂತು ಪ್ರಾಧ್ಯಾಪಕನಾದ ಯುವಕನ ಯಶೋಗಾಥೆ!

    ಯುಗಾದಿ ಆಚರಿಸುವ ಖುಷಿಯಲ್ಲಿ ತವರಿಗೆ ಹೊರಟ ಕುಟುಂಬಕ್ಕೆ ಕಾದಿತ್ತು ಭೀಕರ ಸಾವು: ಮಗ ಅನಾಥ!

    ದಾಳಿ ಮಾಡಿದ ಪೊಲೀಸರು 2 ಕ್ವಿಂಟಲ್​ ಘಮಘಮಿಸುವ ಜಿಲೇಬಿ, ಸಮೋಸಾ ಎತ್ತಾಕೊಂಡು ಹೋದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts