More

    ಹೆಂಗಸರು ತಡರಾತ್ರಿವರೆಗೆ ಕುಡಿದ್ರೆ ಸಿಗುತ್ತೆ ಡಿಸ್ಕೌಂಟ್​! ಸಂಸತ್ತಲ್ಲಿ ಮದ್ಯ ಪ್ರದರ್ಶಿಸಿ ಬಿಜೆಪಿ ಸಂಸದರಿಂದ ಆರೋಪ

    ನವದೆಹಲಿ: ಬಿಜೆಪಿ ಸಂಸದ ಪರ್ವೇಶ್​ ಸಾಹೀಬ್​ ಸಿಂಗ್ ವರ್ಮಾ ಅವರು​ ಸೋಮವಾರ ಸಂಸತ್ತಿನಲ್ಲಿ ಮದ್ಯದ ಪ್ಯಾಕ್​ ಅನ್ನು ಪ್ರದರ್ಶಿಸಿ, ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಕೋವಿಡ್​ 19 ಸಾಂಕ್ರಮಿಕ ಸಂದರ್ಭದಲ್ಲಿ 25 ಸಾವಿರ ಮಂದಿ ಮೃತಪಟ್ಟಿದ್ದರೆ, ದೆಹಲಿ ಸರ್ಕಾರ ಕೇಂದ್ರಾಡಳಿತ ಪ್ರದೇಶದಲ್ಲಿ ಮದ್ಯ ಸೇವನೆ ಪ್ರಮಾಣ ಹೆಚ್ಚಿಲು ಹೊಸ ಅಬಕಾರಿ ನೀತಿಯನ್ನು ರಚಿಸುವಲ್ಲಿ ಬಿಜಿಯಾಗಿದೆ ಎಂದು ವರ್ಮಾ ಕಿಡಿಕಾರಿದ್ದಾರೆ.

    ಇಂದು ಹೊಸದಾಗಿ 824 ಮದ್ಯದಂಗಡಿಗಳು ತೆರೆದಿವೆ. ವಸತಿ ಪ್ರದೇಶ, ಕಾಲನಿಗಳು ಮತ್ತು ಗ್ರಾಮಗಳಲ್ಲೂ ಕೂಡ ಮದ್ಯದಂಗಡಿ ತೆರೆದಿವೆ. ಮಧ್ಯರಾತ್ರಿ 3 ಗಂಟೆಯವರೆಗೂ ಮದ್ಯದಂಗಡಿ ತೆರೆದಿರುತ್ತದೆ. ಬಾರ್‌ಗಳಲ್ಲಿ ಮಹಿಳೆಯರು ತಡರಾತ್ರಿ 3 ಗಂಟೆಯವರೆಗೆ ಕುಡಿದರೆ ಅವರಿಗೆ ರಿಯಾಯಿತಿ ನೀಡಲಾಗುತ್ತಿದೆ. ಮದ್ಯ ಕುಡಿಯುವ ವಯೋಮಿತಿಯನ್ನು 25 ರಿಂದ 21ಕ್ಕೆ ಇಳಿಸಲಾಗಿದೆ ಎಂದು ವರ್ಮಾ ಆರೋಪಿಸಿದ್ದಾರೆ. ​

    ಮುಖ್ಯಮಂತ್ರಿಗಳು ಹೆಚ್ಚು ಆದಾಯ ಗಳಿಸುವ ಉದ್ದೇಶವು ಇದರ ಹಿಂದಿದೆ. ಹೀಗಾಗಿ ಸಿಎಂ ತಮ್ಮ ಪ್ರಚಾರವನ್ನು ಕೂಡ ವಿಸ್ತರಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪಂಜಾಬ್‌ಗೆ ತೆರಳಿದ ಅವರು ಮದ್ಯದ ಸಂಸ್ಕೃತಿಯನ್ನು ಕೊನೆಗಾಣಿಸುವುದಾಗಿ ಹೇಳಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ದೆಹಲಿಯಲ್ಲಿ ಮದ್ಯ ಸೇವನೆಯನ್ನು ಹೆಚ್ಚಿಸುತ್ತಿದ್ದಾರೆಂದು ವರ್ಮಾ ಕೇಜ್ರಿವಾಲ್​ ವಿರುದ್ಧ ಟೀಕಾಪ್ರಹಾರ ನಡೆಸಿದರು.

    ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಪ್ರಕಾರ ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಯಿತು. ಆದರೆ, ಈಗ ಅಂಗಡಿಗಳು ಮತ್ತೆ ತೆರೆದಿವೆ ಎಂದು ವರ್ಮಾ ಹೇಳಿದರು. (ಏಜೆನ್ಸೀಸ್​)

    ಕೇವಲ 7 ಗಂಟೆಯಲ್ಲಿ 919 ಪುರುಷರ ಜತೆ ಲೈಂಗಿಕ ಸಂಪರ್ಕ: ಈಕೆ ಹೇಳೋದನ್ನು ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ವಿಕ್ಕಿ-ಕತ್ರಿನಾ ಮದುವೆಯ ನೇರಪ್ರಸಾರಕ್ಕೆ OTTಯಿಂದ 100 ಕೋಟಿ ರೂ. ಆಫರ್: ತಾರಾಜೋಡಿಯ ನಿಲುವೇನು?

    ಶಾಲೆ ಆಸ್ತಿಗೆ ಡಿಜಿ ಬೇಲಿ!; ಸರ್ಕಾರಿ ಸ್ಕೂಲ್​ಗಳ ಸ್ವತ್ತು ಸಂರಕ್ಷಣೆಗೆ ಸರ್ಕಾರ ಹೊಸ ಹೆಜ್ಜೆ

    ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಒಮಿಕ್ರಾನ್: 16 ರಾಜ್ಯಗಳಲ್ಲಿ ವ್ಯಾಪಿಸಿದ ಕರೊನಾ ರೂಪಾಂತರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts