More

    ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಒಮಿಕ್ರಾನ್: 16 ರಾಜ್ಯಗಳಲ್ಲಿ ವ್ಯಾಪಿಸಿದ ಕರೊನಾ ರೂಪಾಂತರಿ..

    | ಬೆಂಕಿ ಬಸಣ್ಣ ನ್ಯೂಯಾರ್ಕ್

    ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕರೊನಾ ವೈರಾಣುವಿನ ರೂಪಾಂತರಿ ಒಮಿಕ್ರಾನ್ ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡಿದ್ದು ಡಿಸೆಂಬರ್ ಒಂದನೆ ತಾರೀಕು. ಆದರೆ ಕಳೆದ ಆರು ದಿನಗಳಲ್ಲಿ ಅಮೆರಿಕದ ಒಂದನೇ ಮೂರರಷ್ಟು ಪ್ರದೇಶಕ್ಕೆ, ಅಂದರೆ ಸುಮಾರು 16 ರಾಜ್ಯಗಳಲ್ಲಿ ಒಮಿಕ್ರಾನ್ ಕೇಸುಗಳು ಕಾಣಿಸಿಕೊಂಡಿದ್ದು ತೀವ್ರ ಆತಂಕ ಮೂಡಿಸಿದೆ.

    ಅಮೆರಿಕದ ರಾಜ್ಯಗಳಾದ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನ್ಯೂಜರ್ಸಿ, ಕೊಲರಾಡೊ, ನೆಬ್ರಾಸ್ಕ ವಿಸ್ಕಾನ್ಸನ್, ಪೆನ್ಸಿಲ್ವೇನಿಯ, ಮೇರಿಲ್ಯಾಂಡ್, ಯುಟಾ, ಮಿಸ್ಸೋರಿ, ಮಿನ್ನೆಸೋಟ, ನೆಬ್ರಾಸ್ಕ, ಹವಾಯಿ ಹೀಗೆ ಹಲವಾರು ರಾಜ್ಯಗಳಲ್ಲಿ ಒಮಿಕ್ರಾನ್ ಮಹಾಮಾರಿ ಕಾಣಿಸಿಕೊಂಡಿದೆ. ಸೋಂಕಿತರಲ್ಲಿ ಕೆಲವರಿಗೆ ದಕ್ಷಿಣ ಆಫ್ರಿಕಾ ದೇಶಕ್ಕೆ ಪ್ರಯಾಣ ಮಾಡಿದ ಹಿಸ್ಟರಿ ಇದ್ದರೆ, ಇನ್ನುಳಿದವರು ಅಮೆರಿಕದ ದೇಶದ ಹೊರಗಡೆ ಪ್ರಯಾಣ ಮಾಡಿಯೇ ಇಲ್ಲ. ಇದು ಇನ್ನೂ ಹೆಚ್ಚಿನ ಅಪಾಯಕಾರಿ ವಿಷಯ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಫ್ರಿಕಾ ಖಂಡದ ಹಲವಾರು ದೇಶಗಳಿಂದ ಬರುವ ವಿಮಾನಗಳನ್ನು ನಿಷೇಧಿಸಿದ್ದಾರೆ. ಭಾರತ ಸೇರಿ ಹಲವಾರು ದೇಶಗಳಿಂದ ಬರುವ ಪ್ರಯಾಣಿಕರು ಕೇವಲ 24 ಗಂಟೆ ಒಳಗಾಗಿ ಕರೊನಾ ಟೆಸ್ಟ್ ಮಾಡಿಸಿ ನೆಗಟಿವ್ ರಿಸಲ್ಟ್ ರಿಪೋರ್ಟ್ ನೀಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಇದು ಅಮೆರಿಕಕ್ಕೆ ಪ್ರಯಾಣ ಬಯಸುವವರಿಗೆ ಬಹಳಷ್ಟು ಅನಾನುಕೂಲ ಉಂಟುಮಾಡಿದೆ. ವಿಮಾನ ನಿರ್ಗಮನದ ಕೇವಲ 24 ಗಂಟೆಗಳ ಒಳಗಾಗಿ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿ ಅದರ ರಿಸಲ್ಟ್ ಪಡೆಯುವುದು ತುಂಬಾ ಕಷ್ಟದ ಕೆಲಸವಾದರೂ ಅದನ್ನು ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಅಮೆರಿಕದ ಅನೇಕ ರಾಜ್ಯಗಳಲ್ಲಿ ಕಟ್ಟಡಗಳ ಒಳಗಡೆಯೂ ಮಾಸ್ಕ ಧರಿಸುವುದನ್ನು ಕಡ್ಡಾಯ ಮಾಡಲಾಗುತ್ತಿದೆ.

    ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಒಮಿಕ್ರಾನ್: 16 ರಾಜ್ಯಗಳಲ್ಲಿ ವ್ಯಾಪಿಸಿದ ಕರೊನಾ ರೂಪಾಂತರಿ..

    ಕ್ರಿಸ್​ಮಸ್​ ವೇಳೆ ಆತಂಕ: ಕ್ರಿಸ್​ಮಸ್ ಹಬ್ಬ ಸದ್ಯದಲ್ಲಿ ಬರಲಿದ್ದು, ಕೋಟ್ಯಂತರ ಜನರು ಪ್ರಯಾಣ ಮಾಡುವುದರಿಂದ, ಒಂದೆಡೆ ಸೇರುವುದರಿಂದ, ಜನಸಂದಣಿಯಿಂದಾಗಿ ಡೆಲ್ಟಾ ಮತ್ತು ಒಮಿಕ್ರಾನ್ ಹೊಸ ಅಲೆಗಳು ಅಮೆರಿಕಕ್ಕೆ ಅಪ್ಪಳಿಸುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಶೇ. 99 ಡೆಲ್ಟಾ ವೈರಸ್: 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಲಸಿಕೆ ( ಮೂರನೇ ಡೋಸ್) ಯನ್ನು ಹಾಕಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ. ಆದರೂ ಕೆಲವು ಜನರು ಮಾಸ್ಕ್ ಧರಿಸಲು, ಲಸಿಕೆ ಹಾಕಿಸಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗ ಅಮೆರಿಕದಲ್ಲಿ ಪ್ರತಿದಿನ 90 ಸಾವಿರದಿಂದ 1 ಲಕ್ಷ ಕರೊನಾ ಕೇಸುಗಳು ಪತ್ತೆಯಾಗುತ್ತಿದ್ದು ಇದರಲ್ಲಿ 99% ಪ್ರತಿಶತ ರೂಪಾಂತರವಾದ ಡೆಲ್ಟಾ ವೈರಸ್ ಆಗಿವೆ.

    ಬೆಲೆ ಏರಿಕೆ: ಕಳೆದ ಎರಡು ವರ್ಷಗಳಿಂದ ಅಮೆರಿಕ ಕರೊನಾ ವೈರಸ್​ನಿಂದ ತತ್ತರಿಸಿದೆ. ಈವರೆಗೆ ಅಮೆರಿಕದಲ್ಲಿ ಒಟ್ಟು ನಾಲ್ಕು ಕೋಟಿ 76 ಲಕ್ಷ ಸೋಂಕಿತರು ಮತ್ತು 7,69, 000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು ಇದರ ಪರಿಣಾಮ ಅಮೇರಿದ ಎಲ್ಲ ವಸ್ತುಗಳ ಬೆಲೆಗಳು ಜಾಸ್ತಿಯಾಗಿವೆ.

    ಲಸಿಕೆ ಅಭಿಯಾನಕ್ಕೆ ಪ್ರಧಾನಿ ಸಂತಸ: ದೇಶದ ಅರ್ಹ ಜನಸಂಖ್ಯೆಯಲ್ಲಿ ಶೇಕಡ 50ಕ್ಕೂ ಹೆಚ್ಚು ಜನರಿಗೆ ಪೂರ್ಣ ಪ್ರಮಾಣದ ಲಸಿಕೆ ಡೋಸ್ ವಿತರಣೆ ಆಗಿದೆ ಎಂಬುದು ಸಂತಸದ ವಿಚಾರ. ಭಾರತದ ಲಸಿಕೆ ಅಭಿಯಾನ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇದು ಕೋವಿಡ್ 19 ಸಮರಕ್ಕೆ ಬಲ ನೀಡುವ ಪ್ರಮುಖ ಕ್ಷಣ. ಆದಾಗ್ಯೂ, ಕೋವಿಡ್ 19 ಸೋಂಕು ತಡೆಗೆ ನಿಯಮ ಪಾಲನೆ ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮನವಿ ಮಾಡಿದ್ದಾರೆ.

    ಹೆಚ್ಚುವರಿ ಲಸಿಕೆಗೆ ಐಎಂಎ ಆಗ್ರಹ: ಆರೋಗ್ಯ ಸೇವೆ ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಕೋವಿಡ್ ಲಸಿಕೆ ಡೋಸ್ ನೀಡಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸೋಮವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಒಮಿಕ್ರಾನ್ ವೇರಿಯೆಂಟ್ ಸೋಂಕು ಹೆಚ್ಚುತ್ತಿರುವ ಕಾರಣ ಐಎಂಎ ಈ ರೀತಿ ಆಗ್ರಹ ಮಾಡಿದ್ದು, 12ರಿಂದ 18 ವರ್ಷದವರಿಗೂ ಲಸಿಕೆ ಒದಗಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕ್ಷಿಪ್ರಗತಿಯಲ್ಲಿ ನೆರವೇರಿಸಬೇಕು ಎಂದು ಮನವಿ ಮಾಡಿದೆ.

    ಕೋವಿಡ್ ತಡೆಗೆ ಚ್ಯೂಯಿಂಗ್ ಗಮ್: ಕೋವಿಡ್ 19 ಸೋಂಕು ಹರಡುವ ‘ಖಅಖಇಟ್ಖ’ ವೈರಸ್ ಅನ್ನು ಟ್ರಾ್ಯಪ್​ಗೆ ವಿಜ್ಞಾನಿಗಳು ಚ್ಯೂಯಿಂಗ್ ಗಮ್ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಸಸ್ಯದಲ್ಲಿ ಬೆಳೆದ ಪ್ರೊಟೀನ್ ಆಧಾರಿತವಾಗಿದ್ದು, ಇದನ್ನು ಜಗಿಯುತ್ತಿದ್ದರೆ ಸಲೈವಾದಲ್ಲಿರುವ ವೈರಸ್ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಅದು ಹರಡುವ ಸಾಧ್ಯತೆಯನ್ನು ಇಳಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಪೆನ್​ಸಿಲ್ವೇನಿಯ ಯೂನಿವರ್ಸಿಟಿಯ ಹೆನ್ರಿ ಡೇನಿಯಲ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿ ಮಾಲಿಕ್ಯುಲರ್ ಥೆರಪಿ ಜರ್ನಲ್​ನಲ್ಲಿ ಪ್ರಕಟವಾಗಿದೆ.

    • ಆಸ್ಟ್ರೇಲಿಯದಲ್ಲಿ ಒಮಿಕ್ರಾನ್ ಸಾಮುದಾಯಿಕವಾಗಿ ಹರಡಲು ಶುರುವಾಗಿದೆ ಎಂದು ಅಲ್ಲಿನ ಸರ್ಕಾರ ಖಾತರಿಪಡಿಸಿದೆ. ಇದುವರೆಗೆ ಅಲ್ಲಿ 15 ಒಮಿಕ್ರಾನ್ ಕೇಸ್ ದೃಢಪಟ್ಟಿವೆ.
    • ಹಾಂಕಾಂಗ್ ಹೋಟೆಲ್​ನಲ್ಲಿ ಅಕ್ಕಪಕ್ಕದ ಕೊಠಡಿಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಇದ್ದವರಲ್ಲಿ ಒಮಿಕ್ರಾನ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts