More

    VIDEO| ಬೀದಿ ಬದಿಯಲ್ಲಿ ತರಕಾರಿ ಖರೀದಿಸಿ ವ್ಯಾಪಾರಿಗಳ ಕುಂದು-ಕೊರತೆ ಆಲಿಸಿದ ವಿತ್ತ ಸಚಿವೆ! ವಿಡಿಯೋ ವೈರಲ್​

    ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ಮೈಲಾಪುರ ಪ್ರದೇಶದಲ್ಲಿ​ ಬೀದಿ ಬದಿಯ ವ್ಯಾಪಾರಿಗಳ ಬಳಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತರಕಾರಿ ಖರೀದಿಸಿದ ವಿಡಿಯೋವನ್ನು ಅವರ ಅಧಿಕೃತ ಕಚೇರಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ.

    ತರಕಾರಿ ಖರೀದಿಸಿದ್ದಲ್ಲದೆ, ವ್ಯಾಪಾರಿಗಳ ಕುಂದು ಕೊರತೆಗಳನ್ನು ಸಹ ನಿರ್ಮಲಾ ಸೀತಾರಾಮನ್​ ಅವರು ಆಲಿಸಿದ್ದಾರೆ ಎಂದು ಕಚೇರಿ ತಿಳಿಸಿದೆ. ವ್ಯಾಪಾರಿಗಳೊಂದಿಗೆ ಮಾತನಾಡಿರುವ ಫೋಟೋಗಳನ್ನು ಸಹ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

    ನಿರ್ಮಲಾ ಅವರು ಕೆಲವು ಸಿಹಿ ಗೆಣಸನ್ನು ಆಯ್ದುಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಫೋಟೋದಲ್ಲಿ ಹಾಗಲಕಾಯಿಯನ್ನು ತೆಗೆದುಕೊಳ್ಳುತ್ತಿರುವುದು ಸೆರೆಯಾಗಿದೆ. ಅಲ್ಲದೆ, ಅಲ್ಲಿನ ಮಹಿಳಾ ವ್ಯಾಪಾರಿಗಳ ಜೊತೆ ನಿರ್ಮಲಾ ಅವರು ಸಂವಾದ ನಡೆಸಿದ್ದಾರೆ. ಅದೇ ದಿನ ಬೆಳಗ್ಗೆ ನಿರ್ಮಲಾ ಅವರು ನಗರದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕೇಂದ್ರವನ್ನು ಉದ್ಘಾಟನೆ ಮಾಡಿದರು.

    ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಕೇಂದ್ರದಲ್ಲಿ ತರಕಾರಿಗಳು ಪ್ರಮುಖ ಅಂಶಗಳಾಗಿವೆ. ನಿರ್ಮಲಾ ಸೀತಾರಾಮನ್​ ಅವರು ಗಮನ ವಹಿಸಬೇಕಾದ ಅಂಶಗಳಲ್ಲಿ ತರಕಾರಿಗಳು ಸಹ ಒಂದಾಗಿದೆ. ಏಕೆಂದರೆ, ತರಕಾರಿಗಳ ಬೆಲೆ ಹೆಚ್ಚಾಗುತ್ತಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

    ಅಂದಹಾಗೆ ಚಿಲ್ಲರೆ ದೇಶ ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಶೇ. 7 ರಷ್ಟಿದೆ. ಹಣದುಬ್ಬರ ಪ್ರಮಾಣವು ಶೇ. 6ರೊಳಗೆ ಇರಬೇಕು ಎನ್ನುವುದು ಆರ್​ಬಿಐ ಗುರಿ. ಆದರೆ, ರಷ್ಯಾ-ಯೂಕ್ರೇನ್ ಸಂಘರ್ಷದಿಂದ ಹಣದುಬ್ಬರದ ಗುರಿಯನ್ನು ಆರ್​ಬಿಐ ತುಸು ಹಿಗ್ಗಿಸಿದೆ. ಈ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡೇ ಆರ್​ಬಿಐ ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಸಾಲದ ಮೇಲಿನ ಬಡ್ಡಿ ದರವನ್ನು 50 ಮೂಲಾಂಶ ಹೆಚ್ಚಳ ಮಾಡಿದೆ. ಇದರಿಂದ ರೆಪೊ ದರ ಶೇ. 5.90ಕ್ಕೆ ತಲುಪಿದೆ. (ಏಜೆನ್ಸೀಸ್​)

    ಮೇಲುಕೋಟೆಯಲ್ಲಿ ತೆಲುಗು ಚಿತ್ರತಂಡದಿಂದ ಮತ್ತೆ ಎಡವಟ್ಟು: ನಾಗಚೈತನ್ಯ ಚಿತ್ರದ ವಿರುದ್ಧ ಮಂಡ್ಯ ಜನರ ಆಕ್ರೋಶ

    ಪ್ರೊ ಕಬಡ್ಡಿ ಲೀಗ್: ಗುಜರಾತ್-ತಲೈವಾಸ್ ಫೈಟ್ ರೋಚಕ ಟೈ, ಪಟನಾ ಪೈರೇಟ್ಸ್-ಪುಣೇರಿ ಪಲ್ಟಾನ್ ಪಂದ್ಯವೂ ಸಮಬಲ

    ತುಮಕೂರಿನಲ್ಲಿ 2ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ರಾಹುಲ್​ಗೆ ಡಿಕೆಶಿ, ಸಿದ್ದು, ಪರಂ ಸಾಥ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts