More

    ಜನರಲ್​​ ಬಿಪಿನ್​ ರಾವತ್​ ಅವರ ಕೊನೇ ಆಸೆ ಏನಿತ್ತು? ತಮ್ಮ ಗ್ರಾಮದ ಜನರ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು

    ಡೆಹ್ರಾಡೂನ್​: ತಮಿಳುನಾಡಿನ ಕೂನೂರಿನಲ್ಲಿ ನಿನ್ನೆ (ಡಿ.8) ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾದ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಅವರ ಕೊನೆಯ ಆಸೆಯೊಂದು ಅವರೊಂದಿಗೆ ಕೊನೆಯಾಗಿದೆ.

    ಬಿಪಿನ್​ ರಾವತ್​ ಅವರು ಕೊನೆಯದಾಗಿ 2018ರಲ್ಲಿ ತಮ್ಮ ತವರು ಗ್ರಾಮಕ್ಕೆ ಭೇಟಿ ನೀಡಿದ್ದರು. ನಿವೃತ್ತಿಯ ಬಳಿಕ ಗ್ರಾಮದಲ್ಲಿ ಒಂದು ಕಟ್ಟಡ ನಿರ್ಮಿಸುವ ಆಸೆ ಇತ್ತು ಎಂಬುದನ್ನು ಅವರ ಅಂಕಲ್​ 70 ವರ್ಷದ ಭರತ್​ ಸಿಂಗ್​ ರಾವತ್​ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ನಿನ್ನೆ ಕೆಲಸದ ನಿಮಿತ್ತ ಭರತ್​ ಸಿಂಗ್​ ರಾವತ್​ ಅವರು ಕೊಟ್​ದ್ವಾರಗೆ ತೆರಳಿದ್ದರು. ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್​ ಪತನದ ಸುದ್ದಿ ಗೊತ್ತಾಗಿದೆ. ಉತ್ತರಾಖಂಡದ ಪುರಿ ಜಿಲ್ಲೆಯ ದ್ವಾರಿಖಾಲ್​ ಬ್ಲಾಕ್​ನ ಸೈನಾ ಗ್ರಾಮದಲ್ಲಿ ಬಿಪಿನ್​ ರಾವತ್​ ಅವರ ಕುಟುಂಬ ನೆಲೆಸಿದೆ. ತಮ್ಮ ಕುಲದೇವತೆಗೆ ಪ್ರಾರ್ಥನೆ ಸಲ್ಲಿಸಲೆಂದು 2018ರಲ್ಲಿ ಗ್ರಾಮಕ್ಕೆ ಬಂದಿದ್ದರು. ಅದೇ ಅವರ ಕೊನೆಯ ತವರು ಭೇಟಿಯಾಗಿದೆ ಎಂದು ಅವರ ಅಂಕಲ್​ ತಿಳಿಸಿದರು.

    ತಮ್ಮ ಗ್ರಾಮದ ಮೇಲೆ ಬಿಪಿನ್​ ರಾವತ್ ಅವರು ವಿಶೇಷ ಅಭಿಮಾನ ಹೊಂದಿದ್ದರು. ನಿವೃತ್ತಿಯ ನಂತರ ಅಲ್ಲಿನ ಜನರಿಗೆ ಏನಾದರೂ ಮಾಡಬೇಕೆಂದು ಬಯಸಿದ್ದರು. ಹೀಗಾಗಿ ನಿವೃತ್ತಿ ನಂತರ ಗ್ರಾಮದಲ್ಲಿ ನೆಲೆಸಲು ಮನೆಯೊಂದನ್ನು ನಿರ್ಮಿಸಲು ಮುಂದಾಗಿದ್ದರು. ಗ್ರಾಮದಿಂದ ಸಾಕಷ್ಟು ಜನರು ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗುವುದನ್ನು ನೋಡಿ ಅವರಿಗೆ ತುಂಬಾ ನೋವಾಗಿ ಕಣ್ಣೀರಿಟ್ಟಿದ್ದರು. ಅಲ್ಲದೆ, ಫೋನ್​ ಮಾಡಿದ್ದ ಅವರು ಮುಂದಿನ ಏಪ್ರಿಲ್​ನಲ್ಲಿ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರು ಎಂದು ಭರತ್​ ಸಿಂಗ್​ ತಿಳಿಸಿದ್ದಾರೆ.

    ರಾವತ್​ ಆಸೆ ಅವರೊಂದಿಗೆ ಕೊನೆಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಬಿಪಿನ್​ ರಾವತ್ ಅವರ ಪತ್ನಿ ಮಧುಲಿಕಾ ಅವರು ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಸೊಹಾಗ್‌ಪುರದವರು. ಮುಂದಿನ ವರ್ಷ ಸೊಹಗ್‌ಪುರಕ್ಕೆ ಬಂದು ಸೈನಿಕ ಶಾಲೆಯ ಕಾಮಗಾರಿ ಆರಂಭಿಸುವುದಾಗಿ ರಾವತ್ ಹೇಳಿದ್ದರು ಎಂದು ರಾವತ್​ ಅವರ ಬಾಮೈದ ಯಶವರ್ಧನ್ ಹೇಳಿದ್ದಾರೆ. (ಏಜೆನ್ಸೀಸ್​)

    2015ರಲ್ಲಿ ರಾವತ್‌ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್‌…

    ರಾವತ್‌ ಜೀವಕ್ಕೆ ಕುತ್ತಾಗೋಯ್ತಾ ಕೊನೆಕ್ಷಣದ ಆ ನಿರ್ಧಾರ? ರಸ್ತೆ ಮಾರ್ಗಕ್ಕೆ ವ್ಯವಸ್ಥೆಯಾಗಿದ್ದಾಗ ಹೆಲಿಕಾಪ್ಟರ್‌ ಏರಿದ್ದೇಕೆ?

    ಸೇನಾ ಹೆಲಿಕಾಪ್ಟರ್​ ಪತನಕ್ಕೆ ಕಾರಣವೇನು? ಪತ್ತೆಯಾದ ಬ್ಲಾಕ್​ಬಾಕ್ಸ್​ ಮೇಲೆ ಎಲ್ಲರ ಕಣ್ಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts