More

    ಭಾರತೀಯ ಸೇನೆಯಲ್ಲಿ ಸೇವೆಗೆ ಅವಕಾಶ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

    ಬೆಂಗಳೂರು: ಭಾರತೀಯ ಸೇನೆಯು ಸಶಸ ಪಡೆಗಳ ಅತಿದೊಡ್ಡ ಘಟವಾಗಿದ್ದು, ರಾಷ್ಟ್ರಪತಿ ಅವರು ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಬ್ರಿಟಿಷ್ ಸರ್ಕಾರದಲ್ಲಿ 1895 ಏ.1ರಂದು ಸ್ಥಾಪನೆಯಾದ ಸೇನೆಯನ್ನು ವಿವಿಧ ಬದಲಾವಣೆಗಳೊಂದಿಗೆ 1950 ಜ.26ರಂದು ಮರು ರಚನೆ ಮಾಡಲಾಯಿತು. ರಾಷ್ಟ್ರೀಯ ಭದ್ರತೆ ಮತ್ತು ಏಕತೆ ಸೇನೆಯ ಧ್ಯೇಯವಾಗಿದ್ದು, ಬಾಹ್ಯ ಆಕ್ರಮಣ ಮತ್ತು ಆಂತರಿಕ ಬೆದರಿಕೆಗಳಿಂದ ರಾಷ್ಟ್ರವನ್ನು ರಕ್ಷಿಸುತ್ತದೆ. ಪ್ರಸ್ತುತ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರ ಸೇವೆಗೆ ಸಿದ್ಧವಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. 

    ಒಟ್ಟು ಹುದ್ದೆಗಳು-381

    ಹುದ್ದೆಯ ವಿವರ
    ವಿಭಾಗ-ಹುದ್ದೆ
    ಸಿವಿಲ್ ಇಂಜಿನಿಯರಿಂಗ್-82
    ಕಂಪ್ಯೂಟರ್ ಸೈನ್ಸ್-64
    ಎಲೆಕ್ಟ್ರಿಕಲ್ ಇಂಜಿನಿಯರಿಂಗ್-36
    ಎಲೆಕ್ಟ್ರಾನಿಕ್ಸೃ್ ಇಂಜಿನಿಯರಿಂಗ್-70
    ಮೆಕ್ಯಾನಿಕಲ್ ಇಂಜಿನಿಯರಿಂಗ್-110
    ಇತರ ಇಂಜಿನಿಯರಿಂಗ್ ಸ್ಟ್ರೀಮ್-17
    ಎಸ್‌ಎಸ್‌ಸಿ (ಡಬ್ಲ್ಯು) ಟೆಕ್ -1
    ಎಸ್‌ಎಸ್‌ಸಿ (ಡಬ್ಲ್ಯು) (ಟೆಕ್ ಅಲ್ಲದ)-1

    ಯಾವ ವರ್ಗಕ್ಕೆ ಎಷ್ಟು?
    ಎಸ್‌ಎಸ್‌ಸಿ (ಟೆಕ್)-63 ಪುರುಷರು: 350
    ಎಸ್‌ಎಸ್‌ಸಿ (ಟೆಕ್)-34 ಮಹಿಳೆಯರು: 29
    ಎಸ್‌ಎಸ್‌ಸಿ (ಡಬ್ಲ್ಯು) ಟೆಕ್: 1
    ಎಸ್‌ಎಸ್‌ಸಿ (ಡಬ್ಲ್ಯು) (ಟೆಕ್ ಅಲ್ಲದ): 1

    ವಿದ್ಯಾರ್ಹತೆ
    ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಿಇ, ಬಿ.ಟೆಕ್, ಪದವಿ ಪೂರ್ಣಗೊಳಿಸಿರಬೇಕು.

    ವಯೋಮಿತಿ
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವಯಸ್ಸು ಆಗಿರಬೇಕು. ಗರಿಷ್ಠ 27 ವಯೋಮಿತಿ ನಿಗದಿಪಡಿಸಲಾಗಿದ್ದು, ಟೆಕ್ ಮತ್ತು ನಾನ್ ಟೆಕ್ ಹುದ್ದೆಗಳಿಗೆ 35 ವರ್ಷದವರೆಗೆ ಅವಕಾಶ ಕಲ್ಪಿಸಲಾಗಿದೆ. ಸೇನೆಯ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯವಾಗಲಿದೆ.

    ವೇತನ
    ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 56,100 ರೂ. ಸ್ಟೈಪೆಂಡ್ ಪಾವತಿಸಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ 56,100 ರೂ. ನಿಂದ 2,50,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಭಾರತೀಯ ಸೇನೆಯು ಹೊರಡಿಸಿದ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ joinindianarmy.nic.in ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಸಂವಹನ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಹಾಗೂ ಕೆಲಸದಲ್ಲಿನ ಅನುಭವ ಕುರಿತು ಪ್ರಮಾಣ ಪತ್ರಗಳನ್ನು ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಬೇಕು. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. 

    ಆಯ್ಕೆ ಪ್ರಕ್ರಿಯೆ
    ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸೇನೆಗೆ ಅವಶ್ಯವಿರುವ ಮಾನದಂಡಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಎಸ್‌ಎಸ್‌ಬಿ ಸಂದರ್ಶನ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೇ ದಿನ : 21-02-2024
    ಹೆಚ್ಚಿನ ಮಾಹಿತಿಗಾಗಿ: joinindianarmy.nic.in 

    ಎಐ ಇಂಪ್ಯಾಕ್ಟ್: ಉದ್ಯೋಗಾಕಾಂಕ್ಷಿಗಳಿಗೆ ಹಣಕಾಸು ಸಚಿವರ ಸಲಹೆ, ಈಗಲೇ ಈ ವಿಷಯ ಕಲಿಯಿರಿ, ಇಲ್ಲದಿದ್ದರೆ ತೊಂದರೆಗೆ ಸಿಲುಕುವುದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts