More

    ವಿದೇಶಿ ಮಹಿಳೆಯರ ಜತೆ ಧಾರಾವಾಹಿ ನಟನ ಅಕ್ರಮ ಸಂಬಂಧ: ಪತಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ!

    ಹೈದಾರಬಾದ್​: ತೆರೆಯ ಮೇಲೆ ನಾಯಕನಾಗಿ ಅಮಾಯಕನಂತೆ ನಟಿಸುವ ಧಾರವಾಹಿ ನಟ, ನಿಜ ಜೀವನದಲ್ಲಿ ವಿಲನ್ ಆಗಿದ್ದು ದಿನನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸ್ವತಃ ಪತ್ನಿಯೇ ನಟನ ವಿರುದ್ಧ ದೂರು ಇದೀಗ ನೀಡಿದ್ದಾಳೆ.

    ಹೌದು, ಟಾಲಿವುಡ್ ಕಿರುತೆರೆ ಕಲಾವಿದ ರಾಜೇಶ್ ದತ್ತ ವಿರುದ್ಧ ಆತನ ಪತ್ನಿ ಅರುಣಾ ಅಲಿಯಾಸ್ ಸಾಧನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಪತಿಗೆ ವಿದೇಶಿ ಮಹಿಳೆಯರ ಜತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ವಿದೇಶಿಯರು ಮಾತ್ರವಲ್ಲದೆ, ಸಾಕಷ್ಟು ಯುವತಿಯರ ಜತೆಯು ಸಂಬಂಧ ಹೊಂದಿದ್ದು, ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ದೂರು ನೀಡಿದ್ದಾರೆ.

    ಆರೋಪಿ ರಾಜೇಶ್, ವಂದಿನಮ್ಮ ಮತ್ತು ಚಂದ್ರಲೇಖ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಕ್ರಮ ಸಂಬಂಧ ಹೊಂದಿರುವ ಪತಿ ನಾನು ಮನೆಯಲ್ಲಿ ಇರುವಾಗಲೇ ಅವರನ್ನು ಜೊತೆಯಲ್ಲೇ ಕರೆತಂದು ನನ್ನ ಮುಂದೆಯೇ ಚಕ್ಕಂದ ಆಡುತ್ತಾರೆ. ಪ್ರಶ್ನಿಸಿದರೆ, ಒದ್ದು ಹೊರಗಡೆ ಹಾಕುತ್ತೇನೆಂದು ಬೆದರಿಕೆ ಹಾಕುತ್ತಾರೆಂದು ಸಾಧನಾ ದೂರಿದ್ದಾರೆ.

    ತನ್ನ ಪಾಲಕರೊಂದಿಗೆ ತೆರಳಿ ಜಗದ್ಗಿರಿ ಗುಟ್ಟಾ ಪೊಲೀಸ್ ಠಾಣೆಯಲ್ಲಿ ಸಾಧನಾ ದೂರು ನೀಡಿದ್ದಾರೆ. ಇನ್ನೊಂದೆಡೆ ಮನೆಯಲ್ಲೇ ಉಳಿದಿರುವ ರಾಜೇಶ್, ತನಗೂ ನ್ಯಾಯ ಬೇಕೆಂದು ಕೇಳುತ್ತಿದ್ದಾನೆ.

    ಸುಮಾರು 28 ಧಾರವಾಹಿಗಳಲ್ಲಿ ರಾಜೇಶ್ ನಟಿಸಿದ್ದಾರೆ. 2015ರ ಜೂನ್ 6ರಂದು ವಿಜಯವಾಡದಲ್ಲಿ ರಾಜೇಶ್ ಮತ್ತು ಸಾಧನಾ ಮದುವೆ ನಡೆಯಿತು. ಮದುವೆಯಾದ ಕೆಲವು ತಿಂಗಳುಗಳವರೆಗೆ ಇಬ್ಬರ ದಾಂಪತ್ಯ ಚೆನ್ನಾಗಿಯೇ ಸಾಗಿತು. ಆದರೆ, ನಂತರದ ದಿನಗಳಲ್ಲಿ ರಾಜೇಶ್ ತನ್ನ ಅಸಲಿ ಮುಖವಾಡವನ್ನು ಕಳಚಿದ. ಬಳಿಕ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದು ಸಾಧನಾ ದೂರು ನೀಡಿದ್ದಾರೆ. (ಏಜೆನ್ಸೀಸ್​)

    ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!

    ‘ಸುಮಕ್ಕಾ ಎಲ್ಲಿದ್ದೀಯಾಕ್ಕಾ?’ ಜಾಲತಾಣದಲ್ಲಿ ಪೋಸ್ಟರ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಸ್ವಾಭಿಮಾನಿ ಸಂಸದೆ

    ಎದುರು ಬದುರಾದ ದೋಣಿಗಳು: ಢಿಕ್ಕಿಯ ರಭಸಕ್ಕೆ 25 ಮಂದಿಯ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts