ಎದುರು ಬದುರಾದ ದೋಣಿಗಳು: ಢಿಕ್ಕಿಯ ರಭಸಕ್ಕೆ 25 ಮಂದಿಯ ದುರಂತ ಸಾವು

ಢಾಕಾ (ಬಾಂಗ್ಲಾದೇಶ): ಮಧ್ಯ ಬಾಂಗ್ಲಾದೇಶದಲ್ಲಿ ಎರಡು ದೋಣಿಗಳು ಮುಖಾಮುಖಿಯಾದ ಪರಿಣಾಮ ಡಿಕ್ಕಿ ಹೊಡೆದಿದ್ದು, ಈ ಘರ್ಷಣೆಯಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ. ಶಿಬ್ಚಾರ್ ಪಟ್ಟಣದ ಸಮೀಪವಿರುವ ಪದ್ಮಾ ನದಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 30 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ದೋಣಿ ಮತ್ತು ಮರಳು ಸಾಗಿಸುವ ದೋಣಿ ನಡುವೆ ಢಿಕ್ಕಿ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ವೇಳೆ 25 ಮೃತದೇಹಗಳು ಪತ್ತೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮಿರಾಜ್ ಹೊಸೇನ್ ಮಾಹಿತಿ ನೀಡಿದ್ದಾರೆ. ನಾವು ಐದು ಜನರನ್ನು ರಕ್ಷಿಸಿದ್ದೇವೆ … Continue reading ಎದುರು ಬದುರಾದ ದೋಣಿಗಳು: ಢಿಕ್ಕಿಯ ರಭಸಕ್ಕೆ 25 ಮಂದಿಯ ದುರಂತ ಸಾವು