More

    ಪ್ರೇಯಸಿಗೆ ಜಾಮೀನು ಕೊಡಿಸಲು ಹೋಗಿ ಮರಣದಂಡನೆಗೆ ಗುರಿ: ವಿಷದ ಇಂಜೆಕ್ಷನ್​ ನೀಡಿ ಪ್ರಿಯಕರನ ಹತ್ಯೆ

    ವಾಷಿಂಗ್ಟನ್​: ಪ್ರೇಯಸಿಗೆ ಜಾಮೀನು ಕೊಡಿಸಲು ಹೋಟೆಲ್​ ಒಂದನ್ನು ದರೋಡೆ ಮಾಡಿ, ಇಬ್ಬರನ್ನು ಕೊಲೆಗೈದು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗೆ ಗುರುವಾರ ಅಮೆರಿಕದ ಒಕ್ಲಹೊಮ್​ನಲ್ಲಿ ಮಾರಕ ಇಂಜೆಕ್ಷನ್​ ನೀಡಿ ಸಾಯಿಸಲಾಯಿತು. ಇದು ಯುನೈಟೆಡ್​ ಸ್ಟೇಟ್ಸ್​ನಲ್ಲಿ ಈ ವರ್ಷದ ಮೊದಲ ಮರಣದಂಡನೆ ಶಿಕ್ಷೆಯಾಗಿದೆ.

    ನ್ಯಾಯಾಲಯದ ದಾಖಲೆಗಳ ಪ್ರಕಾರ ಜೈಲು ಪಾಲಾಗಿದ್ದ ತನ್ನ ಪ್ರೇಯಸಿಗೆ ಜಾಮೀನು ಕೊಡಿಸಲು ಅಪರಾಧಿ ಡೊನಾಲ್ಡ್​ ಗ್ರ್ಯಾಂಟ್​ 2001ರಲ್ಲಿ 25ನೇ ವಯಸ್ಸಿನಲ್ಲಿ ಹೋಟೆಲ್​ ಒಂದಕ್ಕೆ ನುಗ್ಗಿ ಸುಲಿಗೆ ಮಾಡಿದ್ದ. ಈ ವೇಳೆ ಇಬ್ಬರು ಹೋಟೆಲ್​ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದ. ಓರ್ವ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಇನ್ನೊಬ್ಬನನ್ನು ಚಾಕುವಿನಿಂದ ಇರಿದು ಸಾಯಿಸಿದ್ದ.

    ಡೊನಾಲ್ಡ್​ ಗ್ರ್ಯಾಂಟ್​ ಆರೋಪ ಸಾಬೀತಾಗಿ 2005ರಲ್ಲಿ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಆತ ಮರಣದಂಡನೆ ಶಿಕ್ಷೆಯಿಂದ ಪಾರಾಗಲು ಅನೇಕ ಮೇಲ್ಮನವಿಯನ್ನು ಸಲ್ಲಿಸಿದ್ದ. ಅಪರಾಧಿಯು ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಮತ್ತು ಚಿಕ್ಕವಯಸ್ಸಿನಲ್ಲಿ ಆತನ ಕುಡುಕ ತಂದೆಯ ಹಿಂಸೆಯು ಮೆದುಳಿನ ಮೇಲೆ ಆಘಾತದ ಉಂಟು ಮಾಡಿದ್ದು, ಆತ ನಿರ್ದಿಷ್ಟ ಬೌದ್ಧಿಕ ಕೊರತೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಆತನ ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಬೇಕೆಂದು ಆತನ ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದರು.

    ಯುನೈಟೆಡ್​ ಸ್ಟೇಟ್ಸ್​ನ ದಕ್ಷಿಣ ರಾಜ್ಯವಾದ ಓಕ್ಲಹೋಮದಲ್ಲಿ ಮರಣದಂಡನೆಯ ವಿಧಾನದ ಕುರಿತು ಅವರ ಕೊನೆಯ ಮನವಿಯನ್ನು ಯುಎಸ್​ ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿತು. ಈಗ 46 ವರ್ಷ ವಯಸ್ಸಿನ ಗ್ರ್ಯಾಂಟ್​ಗೆ ಮ್ಯಾಕ್‌ಅಲೆಸ್ಟರ್‌ನಲ್ಲಿರುವ ಒಕ್ಲಹೋಮ ಸ್ಟೇಟ್ ಪೆನಿಟೆನ್ಷಿಯರಿಯಲ್ಲಿ ಮೂರು ಮಾರಕ ಪದಾರ್ಥಗಳ ಚುಚ್ಚುಮದ್ದನ್ನು ನೀಡಿ ಮರಣದಂಡಣೆ ಶಿಕ್ಷೆ ಪೂರ್ಣಗೊಳಿಸಲಾಯಿತು.

    ಇತ್ತೀಚಿನ ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ವಾರ್ಷಿಕವಾಗಿ ಮರಣದಂಡನೆಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. 23 ಯುಎಸ್​ ರಾಜ್ಯಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.

    ಒಕ್ಲಹೋಮಾದಲ್ಲಿ 2015 ರಲ್ಲಿ ಮರಣದಂಡನೆಯ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಲಾಗಿತ್ತು. ಆದರೆ, 2021ರಲ್ಲಿ ಆ ನಿಷೇಧವನ್ನು ತೆಗೆದುಹಾಕಲಾಯಿತು. (ಏಜೆನ್ಸೀಸ್​)

    ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಉಗ್ರರ ದಾಳಿಗೆ ಪಾಕ್​ನ 10 ಸೈನಿಕರ ಸಾವು

    ಆಂಧ್ರಪ್ರದೇಶದ ತಿರುಪತಿ ಇನ್ನು ಶ್ರೀಬಾಲಾಜಿ ಜಿಲ್ಲೆ

    ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts