More

    ದುಡ್ಡು ಕೊಟ್ರೆ ಸ್ಪಾಟಲ್ಲೇ ಕೆಲ್ಸ… ಗಂಡನ ಲ್ಯಾಪ್​ಟಾಪ್​ ಬಳಸಿ ಮಾಡಬಾರದ್ದನ್ನು ಮಾಡ್ತಿದ್ದ ಮಹಿಳೆಯ ಬಂಧನ!

    ತುಮಕೂರು: ಗಂಡನ ಲ್ಯಾಪ್​ಟಾಪ್​ ಬಳಸಿ, ದಾಖಲೆಗಳನ್ನು ತಿರುಚಿ, ಆರ್​ಟಿಒ ಇಲಾಖೆಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಖತರ್ನಾಕ್​ ಸೈಬರ್​ ಕಳ್ಳಿಯನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

    ಬಂಧಿತಳನ್ನು ಸಿಂಧೂರ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆಯ ಕೃತ್ಯ ಕಂಡು ಪೊಲೀಸರೇ ದಂಗಾಗಿದ್ದಾರೆ. ಮಧುಗಿರಿ ಆರ್​ಟಿಒ ಕಚೇರಿಯ ರಿಜಿಸ್ಟ್ರೇಶನ್ ಪಾಸ್​ವರ್ಡ್ ಪಡೆದು ಬೇಕಾದವರಿಗೆ ಬೇಕಂದಲ್ಲಿ ಗಾಡಿ ರಿಜಿಸ್ಟ್ರೇಷನ್ ಮಾಡಿಕೊಟ್ಟಿದ್ದಾಳೆ. 2019 ರಿಂದ 2020 ರವರೆಗೂ ಲಕ್ಷಾಂತರ ರೂಪಾಯಿಯನ್ನು ವಂಚಿಸಿದ್ದಾಳೆ.

    ದುಡ್ಡು ಕೊಟ್ರೆ ಸ್ಥಳದಲ್ಲೇ ಆರ್​ಸಿ ಕಾರ್ಡ್, ಚಾರ್ಸಿ ನಂಬರ್ ಮತ್ತು ಎಫ್​ಸಿ ಸರ್ಟಿಫಿಕೇಟ್ ಕೊಡುತ್ತಿದ್ದಳು. ತನ್ನೆಲ್ಲ ಕೃತ್ಯಕ್ಕೆ ಗಂಡನ ಲ್ಯಾಪ್​ಟಾಪ್​ ಅನ್ನು ಬಳಸಿಕೊಂಡಿದ್ದು, ಬೇಕೆಂದಾಗ ಲಾಗಿನ್ ಆಗಿ ದುಡ್ಡು ನೀಡಿದವರಿಗೆ ರಿಜಿಸ್ಟ್ರೇಷನ್ ಮಾಡಿಕೊಡುತ್ತಿದ್ದಳು. ಬರೋಬ್ಬರಿ 286 ದಾಖಲೆಗಳನ್ನ ತಿದ್ದಿ ತೀಡಿ ಹಣವನ್ನು ನುಂಗಿ ನೀರು ಕುಡಿದಿದ್ದಾಳೆ.

    ಈ ಸಂಬಂಧ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಖತರ್ನಾಕ್​ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಬಳಿ ಲ್ಯಾಪ್​ಟ್ಯಾಪ್ ಮತ್ತು ಅಕ್ರಮ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಐಸಿಯುನಲ್ಲಿ ರಿಜ್ವಾನ್​ ಕೋರಿಕೆ ನೆರವೇರಿಸಿಕೊಟ್ಟ ಭಾರತೀಯ ವೈದ್ಯ: ಪಾಕ್​ ಆಟಗಾರನಿಂದ ಸಿಕ್ತು ಉಡುಗೊರೆ

    ಬಾಹ್ಯಾಕಾಶದಲ್ಲೇ ಮಕ್ಕಳ ಜನನ! ಜೆಫ್ ಬೆಜೋಸ್ ಭವಿಷ್ಯ ಅಂತರಿಕ್ಷ ಕಾಲನಿಯಲ್ಲಿ ಜನರ ವಾಸ

    ಜನಪರ ಆಡಳಿತ, ದೇಶದ ವಿಕಾಸ, ಸರ್ವಮತ ಬಿಜೆಪಿಯ ಗುರಿ; ಬಿ.ಎಲ್. ಸಂತೋಷ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts