More

    ಬಾಹ್ಯಾಕಾಶದಲ್ಲೇ ಮಕ್ಕಳ ಜನನ! ಜೆಫ್ ಬೆಜೋಸ್ ಭವಿಷ್ಯ ಅಂತರಿಕ್ಷ ಕಾಲನಿಯಲ್ಲಿ ಜನರ ವಾಸ

    ವಾಷಿಂಗ್ಟನ್: ಮುಂದಿನ ಕೆಲ ದಶಕಗಳಲ್ಲಿ ಬಾಹ್ಯಾಕಾಶದಲ್ಲೇ ಮಕ್ಕಳು ಜನಿಸಲಿದ್ದು, ರಜಾ ಕಾಲ ಕಳೆಯಲು ಭೂಮಿಗೆ ಬರಲಿದ್ದಾರೆ ಎಂದು ವಿಶ್ವದ ಎರಡನೇ ಅತಿ ಶ್ರೀಮಂತ ಉದ್ಯಮಿ ಜೆಫ್ ಬೆಜೋಸ್ ಭವಿಷ್ಯ ನುಡಿದಿದ್ದಾರೆ. ವಾಷಿಂಗ್ಟನ್​ನಲ್ಲಿ ನಡೆದ ‘ಹವಾಮಾನ ವೈಪರೀತ್ಯ ಹಾಗೂ ಭೂಮಿಯ ಸಂರಕ್ಷಣೆ’ ಕುರಿತ ಸಂವಾದದಲ್ಲಿ ಅವರು ತಮ್ಮ ಬಾಹ್ಯಾಕಾಶ ಯೋಜನೆಯ ಮುನ್ನೋಟ ವಿವರಿಸಿದರು.

    ಬಾಹ್ಯಾಕಾಶದಲ್ಲಿ ತೇಲುವ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಭೂಮಿ ಮೇಲಿರುವ ವಾತಾವರಣವನ್ನು ಇಲ್ಲಿ ಕೃತಕವಾಗಿ ಸೃಷ್ಟಿ ಮಾಡಲಾಗುತ್ತದೆ. ಗುರುತ್ವಾಕರ್ಷಣೆ, ಹವಾಮಾನ ಕೂಡ ಭೂಮಿಯ ರೀತಿಯಲ್ಲೇ ಇರುತ್ತದೆ. ಸ್ಪಿನ್ನಿಂಗ್ ಸಿಲಿಂಡರ್​ಗಳನ್ನು ಅಳವಡಿಕೆ ಮಾಡಲಾಗುತ್ತದೆ. 10 ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಜೀವಿಸಬಹುದು. ಭೂಮಿಯ ರೀತಿಯಲ್ಲೇ ನದಿಗಳು, ಕಾಡುಗಳು, ವನ್ಯ ಜೀವಿಗಳೂ ಇಲ್ಲಿ ಇರಲಿವೆ ಎಂದು ಅವರು ವಿವರಿಸಿದರು.

    ‘ಮುಂದಿನ ಶತಮಾನದಲ್ಲಿ ಜನರು ಬಾಹ್ಯಾಕಾಶದಲ್ಲೇ ಜನಿಸಲಿದ್ದಾರೆ. ಅದು ಅವರ ಮೊದಲ ಮನೆ ಆಗಿರಲಿದೆ. ಬಾಹ್ಯಾಕಾಶ ಕಾಲನಿಗಳಲ್ಲಿ ಅವರು ಜೀವನ ಮಾಡಲಿದ್ದಾರೆ. ನಾವು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ರೀತಿಯಲ್ಲೇ ಅವರು ಭೂಮಿಗೆ ಬಂದು ಮತ್ತೆ ವಾಪಸ್ ತೆರಳಲಿದ್ದಾರೆ. ಬೇರೆ ಗೃಹದಲ್ಲಿ ಮಾನವ ವಾಸ ಮಾಡುವ ಮುನ್ನ, ಬಾಹ್ಯಾಕಾಶದಲ್ಲಿ ವಾಸ ಮಾಡಬೇಕಾಗುತ್ತದೆ. ಮಂಗಳನಂಥ ಗೃಹದಲ್ಲಿ ಮಾನವ ವಾಸ ಮಾಡುವುದು ಬಹಳ ಕಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಜೋಸ್ ಬ್ಲೂ ಒರಿಜಿನ್ ಎಂಬ ಬಾಹ್ಯಾಕಾಶ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಇದು ಹಲವು ಯೋಜನೆಯನ್ನು ಹಮ್ಮಿಕೊಂಡಿದೆ. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕೂಡ ಸ್ಪೇಸ್ ಎಕ್ಸ್ ಎಂಬ ಬಾಹ್ಯಾಕಾಶ ಕಂಪನಿ ನಡೆಸುತ್ತಿದ್ದಾರೆ.

    VIDEO| ಆಹಾ! ಹೊಸ ‘ದೃಷ್ಟಿ’ ಸಿಕ್ಕಿದ ಈ ಪೋರಿಯ ಸಂತಸ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts