More

    ಜನಪರ ಆಡಳಿತ, ದೇಶದ ವಿಕಾಸ, ಸರ್ವಮತ ಬಿಜೆಪಿಯ ಗುರಿ; ಬಿ.ಎಲ್. ಸಂತೋಷ್ ಹೇಳಿಕೆ

    ಮಂಗಳೂರು: ಜನಪರ ಆಡಳಿತ, ದೇಶದ ವಿಕಾಸದೊಂದಿಗೆ ಸರ್ವಮತ ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

    ಮಂಗಳೂರಿನಲ್ಲಿ ಶನಿವಾರ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸರ್ವರ್ಸ³ಯಾಗಿ ಬೆಳೆಸುವ ಉದ್ದೇಶದಿಂದ ಪಕ್ಷದ ವಿವಿಧ ಮೋರ್ಚಾಗಳ ಜತೆ ಪ್ರತ್ಯೇಕ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಕೋಷ್ಠಗಳು ಸಮರ್ಥವಾಗಿವೆ. ಪಕ್ಷ ಕೇವಲ ಬಹುಮತ ಪಡೆದರೆ ಸಾಲದು. ರಾಜ್ಯದಲ್ಲಿ ಬಹುಮತ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಕರಾವಳಿಯಲ್ಲಿ ಬಿಜೆಪಿ ಗೆದ್ದರೂ ಉಳ್ಳಾಲದಲ್ಲಿ ಗೆಲುವು ಸಾಧ್ಯವಾಗಿಲ್ಲ. ಅಂತಹ ಕ್ಷೇತ್ರ ಗಳಲ್ಲೂ ಗೆಲುವು ಸಾಧ್ಯವಾಗಬೇಕಾದರೆ ಸಂಘಟನೆಯ ಶಕ್ತಿಯನ್ನು ಬೂತ್​ವುಟ್ಟಕ್ಕೆ ಕೊಂಡೊಯ್ಯಬೇಕು. ಎಲ್ಲ ಬೂತ್​ಗಳಲ್ಲಿ ಬಿಜೆಪಿ ಪ್ರಾಬಲ್ಯ ಸ್ಥಾಪಿಸಬೇಕು ಎಂದರು.

    ಕಾಂಗ್ರೆಸ್ ಚಿಂತನೆ ಮುಕ್ತ: ಕಾಂಗ್ರೆಸ್​ವುುಕ್ತ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಅರ್ಥ ವಿರೋಧ ಪಕ್ಷ ಮುಕ್ತ ಅಂತ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಬೇಕು. ಆದರೆ ನೆಲದ ಸಂಸ್ಕೃತಿಯನ್ನು ಗೌರವಿಸದ ಕಾಂಗ್ರೆಸ್​ನಂತಹ ಪಕ್ಷ ನಮ್ಮ ದೇಶಕ್ಕೆ ಹೊಂದಿಕೆಯಾಗದು. ಅದಕ್ಕಾಗಿ ಕಾಂಗ್ರೆಸ್ ಚಿಂತನೆಯಿಂದ ದೇಶ ಮುಕ್ತವಾಗಬೇಕು ಎಂದರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸಹ ಸಂಯೋಜಕ ಶಿವಯೋಗಿ ಸ್ವಾಮಿ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಇದ್ದರು.

    ಸಿದ್ದರಾಮಯ್ಯರಿಗೆ ಅರ್ಥ ಆಗದು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್ ಸ್ವಾತಂತ್ರ್ಯ್ಕಾಗಿ ಬಿಜೆಪಿಯವರು ಯಾರಾದರೂ ಬಲಿದಾನ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಆ ಸಂದರ್ಭ ಬಿಜೆಪಿ ಹುಟ್ಟಿರಲಿಲ್ಲ ಎನ್ನುವ ಜ್ಞಾನವೂ ಅವರಿಗಿಲ್ಲ. ಸ್ವಾತಂತ್ರ್ಯ್ಕಾಗಿ ಬಲಿದಾನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬಲಿದಾನ ಮಾಡುವ ಅವಕಾಶ ಬಂದಾಗ ನಮ್ಮ ಸಂಘಟನೆಯವರು ಮಾಡಿದಷ್ಟು ಬಲಿದಾನ ಬೇರೆ ಯಾರೂ ಮಾಡಿಲ್ಲ ಎಂದರು.

    ಬಿ.ಎಲ್.ಸಂತೋಷ್ ಹೇಳಿದ್ದು…

     
    1. ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ. ಅವರಿಗೆ ಬದ್ಧತೆ, ಪ್ರಾಮಾಣಿಕತೆ ಇಲ್ಲ. ಎಲ್ಲಿಯೊ ಕುಳಿತು ಟ್ವೀಟ್ ಮಾಡುತ್ತಾರೆ.
    2. ಪ್ರಧಾನಿ ಮೋದಿ ಬೈದರೆ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಬರುತ್ತದೆ ಎನ್ನುವ ಕಾರಣದಿಂದಲೇ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ.
    3. ಬಾಲಿವುಡ್​ನ ಅನೇಕ ನಟರು ಬಾಯ್ತೆರೆದರೆ ಹಿಂದುತ್ವ ವಿರೋಧವೇ ಮಾತನಾಡುತ್ತಿದ್ದಾರೆ.
    4. ಮತದ ಆಸೆಯಿಂದ ಆರ್​ಎಸ್​ಎಸ್ ದೂಷಣೆ ಕೆಲವು ಮುಖಂಡರಿಗೆ ಫ್ಯಾಷನ್ ಆಗಿದೆ. ಚುನಾವಣೆ ಮುಗಿದಾಗ ಅವರಿಗೆ ಆರ್​ಎಸ್​ಎಸ್ ಮರೆತು ಹೋಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts