More

    ಅರೆಂಜ್​ ಮ್ಯಾರೇಜ್​ನಿಂದ ನನ್ನನ್ನು ಕಾಪಾಡಿ! ಬೀದಿ ಬೀದಿಯಲ್ಲಿ ರಾರಾಜಿಸುತ್ತಿವೆ ಜಾಹೀರಾತು ಫಲಕಗಳು

    ಲಂಡನ್​: ಯುನೈಟೆಡ್​ ಕಿಂಗ್​ಡಮ್​ ಮೂಲದ ಬ್ಯಾಚುಲರ್​ ಓರ್ವ ಪರಿಪೂರ್ಣ ಹೆಂಡತಿಗಾಗಿ ಜಾಹೀರಾತು ಫಲಕಗಳನ್ನು ಅಳವಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಹುಬ್ಬೇರಿಸುವ ವಿಚಾರವೆಂದರೆ ಜಾಹೀರಾತು ಫಲಕಗಳ ಮೇಲೆ “ಅರೆಂಜ್​ ಮ್ಯಾರೇಜ್​ನಿಂದ ನನ್ನನ್ನು ಕಾಪಾಡಿ” ಎಂದು ಬರೆದಿದ್ದಾರೆ.

    ಉದ್ಯಮಿಯು ಆಗಿರುವ 29 ವರ್ಷದ ಮುಹಮ್ಮದ್​ ಮಲಿಕ್​ ಎಂಬುವರು ಫೈಂಡ್​ಮಲಿಕ್​ವೈಫ್​ ಡಾಟ್​ ಕಂ (Findmalikawife.com) ಹೆಸರಿನ ವೆಬ್​ಸೈಟ್​ ತೆರೆದಿದ್ದು, ಬರ್ಮಿಂಗ್​ಹ್ಯಾಂ ಸುತ್ತಲೂ ಹಲವು ಜಾಹೀರಾತು ಫಲಕಗಳನ್ನು ಅಳವಡಿಸಿದ್ದಾರೆ. ಈ ಮೂಲಕ ತನಗೆ ಸೂಕ್ತವಾಗುವ ಪರಿಪೂರ್ಣ ಜೀವನ ಸಂಗಾತಿಗಾಗಿ ಮಲಿಕ್​ ಹುಡುಕಾಟ ನಡೆಸುತ್ತಿದ್ದಾರೆ.

    ಜಾಹೀರಾತು ಫಲಕಗಳಲ್ಲಿ ನಗುತ್ತಾ ಪೋಸ್​ ನೀಡಿರುವ ಮಲಿಕ್​ ಅವರ ಫೋಟೋ ಮತ್ತು “ಅರೆಂಜ್​ ಮ್ಯಾರೇಜ್​ನಿಂದ ನನ್ನನ್ನು ಕಾಪಾಡಿ” ಎಂಬ ಹಾಸ್ಯಭರಿತ ಬರವಣಿಗೆಯನ್ನು ಕಾಣಬಹುದಾಗಿದೆ. ಅಲ್ಲದೆ, ಮಲಿಕ್​ ಅವರ ವೆಬ್​ಸೈಟ್​ ಲಿಂಕ್​ ಕೂಡ ಇದೆ. ಬರ್ಮಿಂಗ್​ಹ್ಯಾಂ ಮತ್ತು ಮ್ಯಾಂಚೆಸ್ಟರ್​ ನಗರದ ಬೀದಿಗಳಲ್ಲಿ ಈ ಫಲಕಗಳು ರಾರಾಜಿಸುತ್ತಿವೆ.

    ಲಂಡನ್​ ಮೂಲದ ಮಲಿಕ್​ ಬರ್ಮಿಂಗ್​ಹ್ಯಾಂ ಅನ್ನು ತನ್ನ ಎರಡನೇ ಮನೆ ಎಂದು ಪರಿಗಣಿಸಿದ್ದಾರೆ. ತನ್ನ ಈ ವಿಭಿನ್ನ ಜಾಹೀರಾತುವಿನ ಬಗ್ಗೆ ಮಾತನಾಡಿರುವ ಮಲಿಕ್​, ತಾನು ಅರೆಂಜ್​ ಮ್ಯಾರೇಜ್​ ಐಡಿಯಾಗೆ ವಿರುದ್ಧವಲ್ಲ. ಆದರೆ, ನನ್ನದೇ ಮೊದಲ ಆಯ್ಕೆಯನ್ನು ನಾನು ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಇದುವರೆಗೂ ನನಗೆ ಸರಿಯಾದ ವಧು ದೊರಕಿಲ್ಲ. ಈ ಪ್ರದೇಶದಲ್ಲಿ ಅದು ಕಠಿಣವೂ ಆಗಿದೆ. ಹೀಗಾಗಿ ಜಾಹೀರಾತು ಫಲಕವನ್ನು ಪಡೆಯಬೇಕಾಗಿತ್ತು ಎಂದಿದ್ದಾರೆ.

    ಯಾವ ರೀತಿ ವಧು ಬೇಕೆಂಬ ಪ್ರಶ್ನೆಗೆ ಉತ್ತರಿಸಿರುವ ಮಲಿಕ್​, ನನ್ನ ಆದರ್ಶ ಮಹಿಳೆ ಮುಸ್ಲಿಂ ಆಗಿರಬೇಕು. 20 ವರ್ಷ ವಯಸ್ಸಾಗಿರಬೇಕು. ಜಾಹೀರಾತು ಫಲಕಗಳನ್ನು ಅಳವಡಿಸಿದಾಗಿನಿಂದ ನೂರಾರು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ, ಅದನ್ನು ನೋಡಲು ನನಗೆ ಸಮಯವಿಲ್ಲ. ಹೀಗಾಗಿ ಬಿಡುವು ಮಾಡಿಕೊಂಡು ಎಲ್ಲವನ್ನು ನೋಡುತ್ತೇನೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ನೀನು ಬಿಗ್​ಬಾಸ್​ನಲ್ಲಿದ್ದಾಗ ತನೀಶ್​ ಜತೆ ಮಾಡಿದ್ದೇನು? ದೀಪ್ತಿ ವಿರುದ್ಧ ಶಾಕಿಂಗ್​ ಹೇಳಿಕೆ ನೀಡಿದ ಶ್ರೀರೆಡ್ಡಿ

    ಸಿಂಹವನ್ನು ಬೆಕ್ಕಿನಂತೆ ಹೊತ್ತು ಸಾಗಿದ ಮಹಿಳೆ! ಎದೆ ಝಲ್​ ಎನಿಸುವ ವಿಡಿಯೋ ವೈರಲ್​

    ನೀನು ಬಿಗ್​ಬಾಸ್​ನಲ್ಲಿದ್ದಾಗ ತನೀಶ್​ ಜತೆ ಮಾಡಿದ್ದೇನು? ದೀಪ್ತಿ ವಿರುದ್ಧ ಶಾಕಿಂಗ್​ ಹೇಳಿಕೆ ನೀಡಿದ ಶ್ರೀರೆಡ್ಡಿ

    ನಾನೇಕೆ ಹಿಂದೂ ಧರ್ಮದಿಂದ ಮತಾಂತರಗೊಂಡೆ? ರಹಸ್ಯ ಬಿಚ್ಚಿಟ್ಟ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts