More

    ಮೂರನೇ ಬಾರಿ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ

    ನವದೆಹಲಿ: ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಇನ್ನು ತಣ್ಣಗಾಗದಿರುವ ಸಮಯದಲ್ಲೇ ಬ್ಯಾಂಕ್​ ಸಾಲಗಾರರಿಗೆ ಮತ್ತೊಮ್ಮೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ತನ್ನ ರೆಪೋ ದರವನ್ನು 50 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 5.40ಕ್ಕೆ ಹೆಚ್ಚಳ ಮಾಡಿದೆ.

    ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್​ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ.

    ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಶುಕ್ರವಾರ ಪ್ರಕಟಿಸಿದ್ದಾರೆ. ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರವನ್ನು ಗುರಿಯೊಳಗೆ ಇರಿಸಿಕೊಳ್ಳುವತ್ತ ಗಮನಹರಿಸಲು ಎಂಪಿಸಿ ನಿರ್ಧರಿಸಿದೆ ಎಂದು ಶಕ್ತಿಕಾಂತ್ ದಾಸ್​ ಹೇಳಿದ್ದಾರೆ.

    ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಆರ್‌ಬಿಐನ ಮೂರನೇ ರೆಪೋ ದರ ಏರಿಕೆಯಾಗಿದೆ. ಕಳೆದ ಜೂನ್​ ತಿಂಗಳಲ್ಲಿ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಿತ್ತು. ಇದೀಗ 50 ಮೂಲಾಂಶ ಏರಿಕೆಯೊಂದಿಗೆ 5.40 ರಷ್ಟಾಗಿದೆ. ಸದ್ಯದ ಏರಿಕೆಯೊಂದಿಗೆ, ರೆಪೋ ದರ ಅಥವಾ ಬ್ಯಾಂಕ್‌ಗಳು ಸಾಲ ಪಡೆಯುವ ಅಲ್ಪಾವಧಿ ಸಾಲದ ದರವು ಸಾಂಕ್ರಾಮಿಕ ಪೂರ್ವದಲ್ಲಿದ್ದ ಶೇಕಡ 5.15 ಅನ್ನು ದಾಟಿದೆ.

    ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಆರು ಸದಸ್ಯರು ದರ ಏರಿಕೆಗೆ ಒಮ್ಮತದಿಂದ ಮತ ಹಾಕಿದರು. ಆರ್​ಬಿಐ ಮೇ ತಿಂಗಳಲ್ಲಿ ನಡೆದ ನಿಗದಿತ ಸಭೆಯೊಂದರಲ್ಲಿ 40 ಮೂಲಾಂಶ ಹೆಚ್ಚಳದೊಂದಿಗೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಂಡಿತು. ನಂತರ ಜೂನ್‌ನಲ್ಲಿ 50 ಮೂಲಾಂಶ ಹೆಚ್ಚಳವಾಯಿತು, ಆದರೆ ಏರಿರುವ ಬೆಲೆಗಳು ಇಲ್ಲಿಯವರೆಗೆ ಕೊಂಚವೇ ಮಾತ್ರ ಕಡಿಮೆಯಾಗಿವೆ. ಹೀಗಾಗಿ ಕೇಂದ್ರೀಯ ಬ್ಯಾಂಕ್ ಎದುರಿಸುತ್ತಿರುವ ಸಂದಿಗ್ಧತೆಯ ಬಗ್ಗೆ ಶಕ್ತಿಕಾಂತ್​ ದಾಸ್​ ತಿಳಿಸಿದರು ಮತ್ತು ಗಮನಹರಿಸಬೇಕಾದ ಆರ್ಥಿಕ ಕಾಳಜಿಗಳನ್ನು ಒತ್ತಿ ಹೇಳುವ ಮೂಲಕ ರೆಪೋ ದರ ಏರಿಕೆಯನ್ನು ಸಮರ್ಥಿಸಿಕೊಂಡರು.

    ಇನ್ನು 2022-23 ರ ನೈಜ GDP ಬೆಳವಣಿಗೆಯನ್ನು ಮೊದಲ ತ್ರೈಮಾಸಿಕದಲ್ಲಿ ಶೇ. 16.2, ಎರಡನೇ ತ್ರೈಮಾಸಿಕದಲ್ಲಿ 6.2, ಮೂರನೇ ತ್ರೈಮಾಸಿಕದಲ್ಲಿ 4.1 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 4ರೊಂದಿಗೆ ಸಮತೋಲನದಲ್ಲಿ ಇರಿಸಿಕೊಳ್ಳಲಾಗಿದೆ. ಇದಲ್ಲದೆ, ಶಕ್ತಿಕಾಂತ ದಾಸ್ ಅವರ ಪ್ರಕಾರ 2023-24ರ ಮೊದಲ ತ್ರೈಮಾಸಿಕದಲ್ಲಿ ನೈಜ GDP ಬೆಳವಣಿಗೆಯನ್ನು ಶೇ. 6.7 ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನು ಸಹ ಹಾವು ಕಡಿತಕ್ಕೆ ಬಲಿ!

    ಎಚ್ಚರಿಕೆಗೂ ಕ್ಯಾರೆ ಎನ್ನದೆ ಮುಂದೆ ಸಾಗಿದ ಚಾಲಕ: ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್​ ವಾಹನ

    ಕಾಂಗ್ರೆಸ್​ ನಾಯಕಿ ನವ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್​: ಬಂಧನದ ಭೀತಿಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts