More

    ಗ್ರಾಪಂ ಅಕ್ರಮಗಳ ವಿರುದ್ಧ ದೂರು ನೀಡಿದ RTI ಕಾರ್ಯಕರ್ತನ ಕೈಕಾಲು ಮುರಿದು ಮೊಳೆ ಹೊಡೆದ ದುಷ್ಕರ್ಮಿಗಳು

    ಜೈಪುರ: ಭ್ರಷ್ಟಾಚಾರ ಮತ್ತು ಗ್ರಾಮ ಪಂಚಾಯಿತಿ ಏರಿಯಾದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ ಆರ್​ಟಿಐ ಕಾರ್ಯಕರ್ತ ಮೇಲೆ ನಿಷ್ಕರುಣೆಯಿಂದ ಹಲ್ಲೆ ಮಾಡಿರುವ ಘಟನೆ ಡಿ. 21ರಂದು ರಾಜಸ್ಥಾನದ ಬರ್ಮರ್​ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕಾರ್ಯಕರ್ತ ಅಮ್ರಾರಾಮ್​ ಗೊದಾರ ಎಂಬುವರ ಮೇಲೆ ಕಬ್ಬಿಣದ ಸಲಾಕೆಯಿಂದ ಬಡಿದು ಕೈಕಾಲುಗಳನ್ನು ಮುರಿದಿದ್ದಾರೆ. ಅಲ್ಲದೆ, ಮೊಳೆಗಳಿಂದ ಕೈಕಾಲುಗಳ ಮೇಲೆ ಚುಚ್ಚಿ ಚಿತ್ರಹಿಂಸೆಯನ್ನು ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೊದಾರ ಅವರನ್ನು ಜೋಧ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

    ಬರ್ಮರ್​ ಪೊಲೀಸ್​ ವರಿಷ್ಠಾಧಿಕಾರಿ ದೀಪಕ್​ ಭಾರ್ಗವ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೋದಾರ ಆರೋಗ್ಯವನ್ನು ವಿಚಾರಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದ್ದು, ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ನಾಲ್ಕು ತಂಡಗಳನ್ನು ಕಳುಹಿಸಿದ್ದು, ಆರೋಪಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುವುದು ಎಂದಿದ್ದಾರೆ.

    ಗೋದಾರ ಅವರನ್ನು ಎಂಟು ಮಂದಿ ದುಷ್ಕರ್ಮಿಗಳು ಹೊತ್ತುಕೊಂಡು ಹೋಗಿ ಕೆಲವು ಗಂಟೆಗಳ ಕಾಲ ಹಲ್ಲೆ ಮಾಡಿದ್ದಾರೆ. ಅವರು ಕೈ ಮತ್ತು ಕಾಲುಗಳು ಮುರಿದಿವೆ ಮತ್ತು ಕೈಕಾಲುಗಳಿಗೆ ಮೊಳೆಗಳನ್ನು ಸಹ ಹೊಡೆಯಲಾಗಿದೆ. ಬಳಿಕ ಗೊದಾರ ಮೃತಪಟ್ಟಿರಬಹುದೆಂದು ಭಾವಿಸಿ, ಅವರನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಡಿಸೆಂಬರ್ 15 ರಂದು ಗ್ರಾಮಗಳ ಅಭಿಯಾನದಲ್ಲಿ ಗೋದಾರ ಅವರು ಸ್ಥಳೀಯಾಡಳಿತಕ್ಕೆ ಸೇರಿದರು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಎನ್​ಆರ್​ಇಜಿಎ ಅಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಮತ್ತು ವಸತಿ ಯೋಜನೆಯಲ್ಲೂ ಅಕ್ರಮ ನಡೆಯುತ್ತಿದೆ. ಅಲ್ಲದೆ, ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಅಶ್ಲೀಲ ವೆಬ್​ಸೈಟ್​ ಓನ್ಲಿಫ್ಯಾನ್ಸ್​ನ ಸಿಇಒ ಆಗಿ ಮುಂಬೈ ಮೂಲದ ಅಮ್ರಪಲಿ ಗ್ಯಾನ್​ ನೇಮಕ!

    ಈ ರಾಷ್ಟ್ರದ ವಿಡಿಯೋಗಳನ್ನು ನೋಡಿದ 7 ಮಂದಿಗೆ ಗಲ್ಲುಶಿಕ್ಷೆ: ಉ. ಕೊರಿಯಾದ ಕರಾಳ ಮುಖ ಅನಾವರಣ

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts