More

    ರಾಜ್​ ಕುಂದ್ರಾ ಕೇಸ್​: ಪೋರ್ನ್​ ವಿಡಿಯೋ ತಯಾರಿ-ವೀಕ್ಷಣೆ ಬಗ್ಗೆ ಭಾರತ-ಯುಕೆ ಕಾನೂನು ಏನು ಹೇಳುತ್ತೆ?

    ಮುಂಬೈ: ಬ್ಲೂ ಫಿಲ್ಮ್​ ದಂಧೆ ಪ್ರಕರಣದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅನೇಕ ಸಂತ್ರಸ್ತ ನಟಿಯರು ನೀಡಿದ ದೂರಿನ ಆಧಾರದ ಮೇಲೆ ಸುಮಾರು 5 ತಿಂಗಳಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಅನೇಕರನ್ನು ಬಂಧಿಸಿದ್ದಾರೆ. ಸದ್ಯ ರಾಜ್​ ಕುಂದ್ರಾ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಇದರ ಮಧ್ಯೆ ಅಶ್ಲೀಲ ಚಿತ್ರಗಳ ಕುರಿತು ಭಾರತೀಯ ಕಾನೂನು ಏನು ಹೇಳುತ್ತದೆ ಎಂಬ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಅದರ ಬಗೆಗಿನ ಕಿರುಚಿತ್ರಣ ಇಲ್ಲಿದೆ.

    ಯುಕೆ ಮೂಲದ ಕಂಪನಿಯ ಆ್ಯಪ್​ನಿಂದ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅಶ್ಲೀಲ ಚಿತ್ರ ಅಥವಾ ವಿಡಿಯೋಗೆ ಸಂಬಂಧಿಸಿದಂತೆ ಯುಕೆ ಮತ್ತು ಭಾರತದ ಕಾನೂನುಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪೋರ್ನೋಗ್ರಫಿ ಅಂತಾ ಬಂದಾಗ ಭಾರತದಲ್ಲಿನ ಕಾನೂನು ಬಹಳ ಕಠಿಣವಾಗಿವೆ. ಅಶ್ಲೀಲ ವಿಡಿಯೋಗಳನ್ನು ನೋಡುವುದು ಎರಡು ದೇಶಗಳಲ್ಲಿಯೂ ಅಪರಾಧವಲ್ಲ. ಆದರೆ, ಅದನ್ನು ತಯಾರಿಸಿ, ವಿತರಣೆ ಮಾಡುವುದು ಎರಡು ದೇಶಗಳಲ್ಲಿಯೂ ಅಕ್ರಮ ಎಂದು ಪರಿಗಣಿಸಲಾಗಿದ್ದು, ಪ್ರಕರಣ ದಾಖಲಿಸಲಾಗುತ್ತದೆ.

    ಇದನ್ನೂ ಓದಿರಿ: ಪಂಚಭಾಷಾ ತಾರೆ ಪ್ರಿಯಾಮಣಿ-ಮುಸ್ತಫಾ ರಾಜ್ ಮದುವೆ ಅಸಿಂಧು: ಕೊರ್ಟ್​ ಮೆಟ್ಟಿಲೇರಿದ ಮೊದಲ ಪತ್ನಿ!

    ಭಾರತದ ಕಾನೂನುಗಳ ವಿಚಾರಕ್ಕೆ ಬರುವುದಾದರೆ, ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಪೋರ್ನೋಗ್ರಫಿ ವಿರುದ್ಧ 292, 293 ಮತ್ತು 294 ಎಂಬ ಮೂರು ಸೆಕ್ಷನ್​ಗಳಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಕೂಡ ಪೋರ್ನೋಗ್ರಫಿ ಪ್ರಕರಣವನ್ನು ವ್ಯವಹರಿಸುತ್ತದೆ. ಆದಾಗ್ಯೂ, ಭಾರತದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಅಥವಾ ಓದುವುದು ಈ ಸೆಕ್ಷನ್​ಗಳ ಅಡಿಯಲ್ಲಿ ಅಪರಾಧವಲ್ಲ. 2015ರ ಜುಲೈನಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು, ನಾಲ್ಕು ಗೋಡೆಗಳ ಮಧ್ಯೆ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಅಪರಾಧವಲ್ಲ ಎಂದು ಹೇಳಿದೆ. ಆದರೆ, ಅಶ್ಲೀಲ ವಿಡಿಯೋ ತಯಾರಿಸುವುದು, ಉತ್ತೇಜಿಸುವುದು ಮತ್ತು ವಿತರಿಸುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ.

    ಐಪಿಸಿ ಸೆಕ್ಷನ್ 292ರ ಬಗ್ಗೆ ತಿಳಿಯುವುದಾದರೆ, ಈ ಸೆಕ್ಷನ್​ ಅಡಿಯಲ್ಲಿ ಅಶ್ಲೀಲ ವಿಡಿಯೋಗಳನ್ನು “ತಯಾರಿಸುವುದು” ಮತ್ತು “ವಿತರಣೆ” ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪ ಸಾಬೀತಾದಲ್ಲಿ ಮೊದಲ ಅಪರಾಧಕ್ಕೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎರಡನೇ ಅಪರಾಧಕ್ಕೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

    ಸೆಕ್ಷನ್​ 293ರ ಅಡಿಯಲ್ಲಿ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಅದನ್ನು 20 ವರ್ಷಕ್ಕಿಂತ ಕಳಗಿನ ವಯೋಮಾನದವರಿಗೆ ವಿತರಣೆ ಮಾಡುವುದು ಅಪರಾಧವಾಗಿದೆ. ಸೆಕ್ಷನ್​ 294ರ ಅಡಿಯಲ್ಲಿ ಸಿನಿಮಾ ಅಥವಾ ಇತರೆ ವೇದಿಕೆಗಳಲ್ಲಿ ಹಾಗೂ ಸಾಂಗ್​ಗಳಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡುವಂತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲವಾಗಿ ಮಾತನಾಡುವುದು ಮತ್ತು ಹಾಡುವುದು ಕೂಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮುಂಬೈ ಪೊಲೀಸರು ರಾಜ್​ ಕುಂದ್ರಾ ವಿರುದ್ಧ ಈ ಮೇಲಿನ ಎಲ್ಲ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

    ಇದನ್ನೂ ಓದಿರಿ: ಮಹಿಳೆಯರಿಗೆ ಫ್ರೀ ಎಂಟ್ರಿ! ಬಾಡಿಗೆ ಬಂಗಲೆಯಲ್ಲಿ ಮಿಡ್​ನೈಟ್​ ರಹಸ್ಯ: ಕಾಲಿವುಡ್​ ನಟಿ ಬಂಧನ

    ಅಶ್ಲೀಲ ಚಿತ್ರಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡರೆ ವಿವಿಧ ಸೆಕ್ಷನ್​ಗಳಡಿಯಲ್ಲೂ ಪ್ರಕರಣಗಳನ್ನು ದಾಖಲಸಿಲಾಗುತ್ತದೆ. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ದುರ್ಬಳಕೆಯಾದರೆ, “ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ -2012 (ಪೊಕ್ಸೊ)” ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಮಕ್ಕಳನ್ನು ಅಶ್ಲೀಲತೆಗೆ ಬಳಸಿಕೊಂಡರೆ ಈ ಕಾಯ್ದೆಯ ಸೆಕ್ಷನ್​ 14ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ದುರ್ಬಳಕೆಯಾದರೆ “ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ” ಅಡಿಯಲ್ಲಿ ಕೇಸು ದಾಖಲಿಸಲಾಗುತ್ತದೆ. ಈ ಮೇಲಿನ ಕಾಯ್ದೆಗಳ ಸೆಕ್ಷನ್​ 3,4,6 ಮತ್ತು 7ರ ಅಡಿಯಲ್ಲೂ ರಾಜ್​ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.

    ಇವುಗಳಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೆಕ್ಷನ್​ 67ಎ ಕೂಡ ಅಶ್ಲೀಲ ಪ್ರಕರಣಗಳನ್ನು ವ್ಯವರಿಸುತ್ತದೆ. ಈ ಕಾಯ್ದೆ ಅಡಿಯಲ್ಲಿ ಅಶ್ಲೀಲ ವಿಡಿಯೋ ಅಥವಾ ಚಿತ್ರಗಳನ್ನು ವಿದ್ಯುನ್ಮಾನ ಸಾಧನಗಳಲ್ಲಿ “ಪ್ರಕಟಿಸುವುದು” ಮತ್ತು “ಹಂಚಿಕೊಳ್ಳು”ವಂತಿಲ್ಲ. ಈ ಕಾಯ್ದೆ ಅಡಿ ಆರೋಪ ಸಾಬೀತಾದಲ್ಲಿ ಮೊದಲ ಅಪರಾಧಕ್ಕೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ. ಎರಡನೇ ಅಪರಾಧಕ್ಕೆ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಭಾರತಕ್ಕೆ ಹೋಲಿಸಿದರೆ ಯುಕೆ ಕಾನೂನು ಸಂಪೂರ್ಣ ವಿಭಿನ್ನವಾಗಿದೆ. 2021ರಲ್ಲಿ ಅಲ್ಲಿನ ಕಾನೂನು ಆಯೋಗ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಒಂದೇ ಒಂದು ಅಪರಾಧವೂ ದಾಖಲಾಗಿಲ್ಲವಂತೆ. ಇನ್ನು ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆ ಪೋರ್ನೋಗ್ರಫಿ ಏರಿಕೆಗೆ ಕಾರಣವಾಗಿದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. 1959 ಮತ್ತು 1964 ಎಂಬ ಎರಡು ಕಾನೂನುಗಳು ಪೊರ್ನೋಗ್ರಫಿಯನ್ನು ತಡೆಯಲು ಇಂಗ್ಲೆಂಡ್​ನಲ್ಲಿ ಬಳಕೆಯಲ್ಲಿದೆ.

    ಇದನ್ನೂ ಓದಿರಿ: ಬ್ಲೂ ಫಿಲ್ಮ್ಂನಿಂದ ದಿನಕ್ಕೆ ಎಂಟು ಲಕ್ಷ ರೂ: ವಿದೇಶದೊಂದಿಗೆ ನಂಟು: ಕುಂದ್ರಾ ಕುರಿತ ಸ್ಫೋಟಕ ಮಾಹಿತಿ

    ಯುಕೆ ಕ್ರಿಮಿನಲ್ ಜಸ್ಟೀಸ್ ಅಂಡ್ ಪಬ್ಲಿಕ್ ಆರ್ಡರ್ ಆಕ್ಟ್-1994 (CJ POA 1994) ಪ್ರಕಾರ ಇಂದಿನ ಹೈಟೆಕ್ ಇಂಟರ್ನೆಟ್ ಅಪರಾಧಗಳನ್ನು ಒಳಗೊಂಡಿರದಂತಹ ಸಮಸ್ಯೆಗಳನ್ನು ಪರಿಹರಿಸಲು ಪರಿಚಯಿಸಲಾಗಿದೆ. 2015ರಲ್ಲಿ ಯುಕೆ ಸರ್ಕಾರ ಕ್ರಿಮಿನಲ್ ನ್ಯಾಯ ಮತ್ತು ನ್ಯಾಯಾಲಯಗಳ ಕಾಯ್ದೆ-2015 ಯನ್ನು ಪರಿಚಯಿಸಿದೆ. ಇದರ ಪ್ರಕಾರ ಪೋರ್ನ್​ ಸಿನಿಮಾಗಳಲ್ಲಿ ನಟಿಸುವ ನಟಿಯರ ಸಮ್ಮತಿ ಇಲ್ಲದೆ ಅವರ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದೆ. (ಏಜೆನ್ಸೀಸ್​)

    ‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

    ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ

    ‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts