More

    ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ಬೆಂಗಳೂರು: ಕನ್ನಡ ಚಿತ್ರರಂಗ ಧ್ರುವತಾರೆ ಪುನೀತ್​ ರಾಜ್​ಕುಮಾರ್​ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್​ ಸಾವು ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತ ನೀಡಿದೆ. 46ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕವಾಗಿ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

    ಇದರ ನಡುವೆ ಅಪ್ಪು ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಫ್ಯಾಮಿಲಿ ಡಾಕ್ಟರ್​ ಮೇಲೆ ಅನುಮಾನ ವ್ಯಕ್ತಪಡಿಸಿರುವ ಅಭಿಮಾನಿಗಳು ದೂರು ಕೂಡ ಸಲ್ಲಿಸಿದ್ದಾರೆ. ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ನಟ ಶಿವರಾಜ್​ಕುಮಾರ್​ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ಏನೇ ನಡೆದಿದ್ರೂ ಅದು ಪುನೀತ್​ಗೆ ಮಾತ್ರ ಗೊತ್ತಿರುತ್ತದೆ. ಆದ್ರೆ ಆತನೇ ಇಂದು ನಮ್ಮ ನಡುವೆ ಇಲ್ಲ ಎಂದು ಶಿವಣ್ಣ ಭಾವುಕರಾದರು.

    ಸಾವಿನ ಮೇಲೆ ವ್ಯಕ್ತವಾಗಿರುವ ಅನುಮಾನದ ಬಗ್ಗೆ ಏನು ಹೇಳು ಬೇಕು ತಿಳಿಯುತ್ತಿಲ್ಲ. ನಾವಂತೂ ಆ ಕ್ಷಣದಲ್ಲಿ ಆ ಸ್ಥಳದಲ್ಲಿ ಇರಲಿಲ್ಲ. ಘಟನಾ ಸ್ಥಳದಲ್ಲಿ ಇದ್ದಾಗ ಏನಾದರೂ ಹೇಳಬಹುದು. ಆದರೆ, ಸ್ಥಳದಲ್ಲಿ ಏನು ನಡೆಯಿತು ಎಂಬುದನ್ನು ತಿಳಿಯದೇ ಏನೇ ಹೇಳಿದರು ಅದು ತಪ್ಪು ಅಭಿಪ್ರಾಯ ಆಗುತ್ತದೆ. ಅಲ್ಲಿ ಏನಾಗಿದೆ ನನಗೆ ಗೊತ್ತಿಲ್ಲ. ಆದರೆ, ನನ್ನ ತಮ್ಮನಿಗೆ ಕೊನೆಯದಾಗಿ ಒಂದು ಅವಕಾಶ ಸಿಗಲಿಲ್ಲವಲ್ಲ ಎಂಬ ನೋವಾಗಿದೆ ಎಂದರು.

    ಹಾಗಂತೆ..ಹೀಗಂತೆ ಎಂಬ ಅಂತೆ ಕಂತೆಗಳಿಗೆ ಬೆಲೆ ಕೊಟ್ಟರೆ ಕಷ್ಟವಾಗುತ್ತದೆ. ಯಾರು ಏನೇ ಮಾಡಿದ್ದರೂ ಅದು ಪುನೀತ್​ಗೆ ಮಾತ್ರ ತಿಳಿದಿರುತ್ತದೆ. ಆದರೆ, ಆತ ಈಗ ನಮ್ಮ ನಡುವೆ ಇಲ್ಲ. ಅಂದು ಅಶ್ವಿನಿ ಕೂಡ ಗೊಂದಲಕ್ಕೆ ಒಳಗಾಗಿದ್ದರು. ಏನು ಮಾಡಬೇಕೆಂಬ ತೊಳಲಾಟದಲ್ಲಿ ಸಿಲುಕಿದ್ದರು. ಅಲ್ಲಿ ಏನು ನಡೆದಿದೆ ಎಂಬುದನ್ನು ವೈದ್ಯರು ಹೇಳಬೇಕಷ್ಟೇ. ಅವರು ಹೇಳಿದ್ದು ಸರಿನಾ? ತಪ್ಪಾ? ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಆ ಸ್ಥಳದಲ್ಲಿ ನಾವ್ಯಾರು ಇರಲಿಲ್ಲ. ಅಲ್ಲಿರದೇ ಏನೇನೂ ಮಾತನಾಡಿದರೆ ತಪ್ಪಾಗುತ್ತದೆ. ಏನೇ ಮಾಡಿದ್ದರೂ ಅದು ಅವರ ಮನಸಾಕ್ಷಿಗೆ ಗೊತ್ತಾಗುತ್ತದೆ ಎಂದು ಶಿವಣ್ಣ ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ಪುನೀತ್ ನೇತ್ರದಾನದಿಂದ ಮತ್ತಷ್ಟು ಮಂದಿಗೆ ದೃಷ್ಟಿಭಾಗ್ಯ; ನಾಲ್ವರಿಗಲ್ಲ ಇನ್ನೂ ಹಲವರ ಬಾಳಿಗೆ ಬೆಳಕಾಗಲಿದ್ದಾರೆ ‘ಅಪ್ಪು’

    ಹ್ಯಾಟ್ರಿಕ್​ನತ್ತ ಜಿನ್​ಪಿಂಗ್; ಸಿಪಿಸಿ ಸಮಾವೇಶದಲ್ಲಿ ನಿರ್ಣಯ, ಬಲ ಹೆಚ್ಚಿಸಿಕೊಂಡ ಚೀನಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts