More

    40 ಅಂಕ ಪಡೆದ್ರೂ 4 ‌ಅಂಕ ಕೊಟ್ಟು‌ ಫೇಲ್​! ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿನಿ ಭವಿಷ್ಯ ಅತಂತ್ರ

    ಕೊಪ್ಪಳ: ಪರೀಕ್ಷೆ ಬರೆಯದೇ ಪಾಸ್ ಆಗುವ ಸರ್ಕಾರದ ಆಫರ್ ತಿರಸ್ಕರಿಸಿದ್ದ ವಿದ್ಯಾರ್ಥಿನಿಯ ಭವಿಷ್ಯವೇ ಈಗ ಅತಂತ್ರವಾಗಿದೆ. ಪರೀಕ್ಷೆ ಬರೆದಿದ್ದ ಭೂಮಿಕಾ ಫೇಲ್ ಆಗಿದ್ದಾಳೆ. ಆದರೆ, ಇದರಲ್ಲಿ ಪಿಯು ಬೋರ್ಡ್ ಎಡವಟ್ಟು ಮಾಡಿರುವುದು ಸ್ಪಷ್ಟವಾಗಿದೆ.‌ ವಿದ್ಯಾರ್ಥಿನಿ ಭೂಮಿಕಾ 40 ಅಂಕ ಪಡೆದಿದ್ದರೂ 4 ‌ಅಂಕ ಕೊಟ್ಟು‌ ಅನುತ್ತೀರ್ಣ ಮಾಡಿದ್ದಾರೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ವರ್ಷ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ನಡೆಸದೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಪಿಯು ಬೋರ್ಡ್ ತೀರ್ಮಾನಿಸಿತ್ತು.‌ ಆದ್ರೆ, ಸರ್ಕಾರದ ಆಫರ್ ತಿರಸ್ಕರಿಸಿದ್ದ ಗಂಗಾವತಿಯ ವೆಂಕಟೇಶ್ವರ ಪಿಯು ಕಾಲೇಜಿನ ಭೂಮಿಕಾ ಪರೀಕ್ಷೆ ಬರೆದಿದ್ದಳು.

    ರಸಾಯನ ಶಾಸ್ತ್ರದಲ್ಲಿ ಭೂಮಿಕಾ ಪಡೆದದ್ದು 40 ಅಂಕಗಳು. ಆದರೆ, ಪಿಯು ಬೋರರ್ಡ್​ ಕೇವಲ 4 ಅಂಕ ನೀಡಿ ವಿದ್ಯಾರ್ಥಿನಿಯನ್ನು ಫೇಲ್​ ಮಾಡಿದೆ. ಇದರಿಂದ ಮನನೊಂದಿದ್ದ ವಿದ್ಯಾರ್ಥಿನಿ ಕೆಲ ದಿನ ಊಟ ನಿದ್ರೆ ಮಾಡದೆ ತುಂಬಾ ಹತಾಶೆಗೊಂಡಿದ್ದಳು.

    ಪಾಲಕರು ಪರೀಕ್ಷೆ ಬರೆದ ಉತ್ತರ ಪತ್ರಿಕೆ ಜೆರಾಕ್ಸ್ ಕಾಪಿ ತರಿಸಿ ನೋಡಿದಾಗ‌ ಆಕೆ 40 ಅಂಕ ಪಡೆದಿರೋದು ಗೊತ್ತಾಗಿದೆ. ಪಿಯು ಬೋರ್ಡ್ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಭೂಮಿಕಾ ತಂದೆ ಚಂದ್ರಶೇಖರಗೌಡ ತಾವರಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿದ್ಯಾರ್ಥಿನಿಯ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪಿಯು ಬೋರ್ಡ್ ಮಾಡಿರುವ ತಪ್ಪನ್ನು ತಿದ್ದುಪಡಿ ಮಾಡಿ ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅರಣ್ಯಾಧಿಕಾರಿ ಸಾವಿನ ಕೇಸ್​: ಪತ್ನಿಯ ಅಕ್ರಮ ಬಯಲಿಗೆಳೆಯಲು ಮಾಡಿದ್ದ ಸುಳ್ಳು ಪತ್ತೆ ಪರೀಕ್ಷೆಯ ವರದಿ ಔಟ್​

    ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

    ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್​ ಖುಷ್! ಮನಸ್ಸು ಬದಲಿಸಿದ್ರಾ ಸೌತ್​ ಬ್ಯೂಟಿ?

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts