

ಬೆಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಹಾಲು ಹಾಳಾಗಿದೆ ಎಂದು ಹಿಂತಿರುಗಿಸಲು ಯತ್ನಿಸಿದ ವೃದ್ಧೆಯೊಬ್ಬರು ಇತ್ತೀಚೆಗೆ ಆನ್ಲೈನ್ ವಂಚಕರಿಂದ 77,000 ರೂಪಾಯಿ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ನಿವಾಸಿ 65 ವರ್ಷದ ಸೋಫಿಯಾ (ಹೆಸರು ಬದಲಾಯಿಸಲಾಗಿದೆ), ಮೈಸೂರು ರಸ್ತೆಯ ಕಸ್ತೂರಬಾ ನಗರದ ರಸ್ತೆಯೊಂದರ ಕಿರಾಣಿ ಪ್ಲಾಟ್‌ಫಾರ್ಮ್‌ನಿಂದ ಆನ್‌ಲೈನ್ನಲ್ಲಿ ಹಾಲನ್ನು ಖರೀದಿಸುತ್ತಾರೆ. ಮಾರ್ಚ್ 18 ರಂದು ಅದು ಹಾಳಾಗಿರುವುದನ್ನು ಗಮನಿಸಿ ಅದನ್ನು ಹಿಂದಿರುಗಿಸಲು ಬಯಸಿದ್ದರು.
ನಿವೃತ್ತ ಸೇನಾ ಅಧಿಕಾರಿಯೊಬ್ಬರ ಪತ್ನಿಯಾಗಿರುವ ಸೋಫಿಯಾ ಆನ್ಲೈನ್ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿದ್ದಾರೆ. ಯಾವುದೋ ಒಂದು ಸಂಖ್ಯೆಗೆ ಕರೆ ಮಾಡುತ್ತಿದ್ದಂತೆ, ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಕಿರಾಣಿ ವೇದಿಕೆಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡನು. ಆಕೆ ಖರೀದಿ ಮಾಡಿದ್ದಾ ಹಾಲು ಹಾಳಾಗಿದೆ ಎಂದು ಹೇಳಿದ್ದಾಳೆ. ಆತ ಹಾಳಾದ ಹಾಲನ್ನು ನೀವು ಹಿಂದಿರುಗಿಸಬೇಕಾಗಿಲ್ಲ. ನಾನು ನೀವು ಹಾಲಿಗೆ ಕೊಟ್ಟ ಹಣವನ್ನು ಹಿಂದಿರುಗಿಸುತ್ತೇನೆ, ಅದಕ್ಕಾಗಿ ನೀವು ನಾನು ಹೇಳಿದಂತೆ ಮಾಡಿ ಎಂದಿದ್ದಾನೆ. ಮಹಿಳೆ ಕೂಡಾ ಇದಕ್ಕೆ ಒಪ್ಪಿದ್ದಾಳೆ.