More

  ವಿಚ್ಛೇದಿತ ನಿರ್ಮಾಪಕನ ಕೈ ಹಿಡಿಯಲಿದ್ದಾರೆ “ರಣವಿಕ್ರಮ” ಸಿನಿಮಾ ನಟಿ…!

  ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಪುನೀತ್​​ ರಾಜ್​​ಕುಮಾರ್​​ ಅಭಿನಯದ ರಣವಿಕ್ರಮ ಸಿನಿಮಾ ಮೂಲಕವಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದ ನಟಿ ಅಂಜಲಿ. ಸ್ಟಾರ್‌ ನಟರೊಂದಿಗೆ ನಟಿಸಿರುವ ಈ ನಟಿ, ವಿಚ್ಛೇದಿತ ನಿರ್ಮಾಪಕರೊಬ್ಬರ ಜೊತೆ ಸಪ್ತಪದಿ ತುಳಿದಿದ್ದಾರೆ, ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿದೆ.

  ತೆಲುಗು ಸಿನಿಮಾರಂಗದ ನಟಿಯಾಗಿದ್ದರೂ ಅಂಜಲಿ ಕೆಲವು ತಮಿಳು, ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಮ್‌ ನಿರ್ದೇಶನದ ಕರಾಟು ಸಿನಿಮಾದ ಮೂಲಕ ಇವರು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದ ಅಂಜಲಿ ಕನ್ನಡದಲ್ಲಿ ಪವನ್‌ ಒಡೆಯರ್‌ ನಿರ್ದೇಶನದ ಹಾಗೂ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿದ್ದ ರಣವಿಕ್ರಮ ಚಿತ್ರದಲ್ಲೂ ನಟಿಸಿದ್ದರು. ಟಾಲಿವುಡ್​​ನ ಸ್ಟಾರ್​ ನಟರ ಜತೆ ಅಂಜಲಿ ಸ್ಕ್ರೀನ್​ ಶೇರ್​​ ಮಾಡಿದ್ದಾರೆ.

  ಅಂಜಲಿ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಬಂದಿದೆ. ತೆಲುಗು ಸಿನಿಮಾ ರಂಗದ  ನಿರ್ಮಾಪಕರೊಬ್ಬರ ಜೊತೆ ಈಕೆಯ ಮದುವೆಯಾಗಿದೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಡೇಟಿಂಗ್‌ನಲ್ಲಿದ್ದು, ಒಂದೋ ಈಗಾಗಲೇ ಮದುವೆಯಾಗಿದೆ ಇಲ್ಲವೇ ಶೀಘ್ರದಲ್ಲಿ ಇವರ ಮದುವೆ ನಿಶ್ಚಯವಾಗಬಹುದು ಎನ್ನಲಾಗಿದೆ. ಈ ಬಗ್ಗ ಅಂಜಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಸ್ಟಾರ್‌ ಹೀರೋಯಿನ್‌ ಆಗಿರುವ ಅಂಜಲಿ ಈ ಹಿಂದೆ ತಮ್ಮೊಂದಿಗೆ ಜರ್ನಿ ಸಿನಿಮಾದಲ್ಲಿ ನಟಿಸಿದ್ದ ನಟ ಜೈ ಜೊತೆ ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.ಜೈ ಹಾಗೂ ಅಂಜಲಿ ಇಬ್ಬರೂ ಜೊತೆಯಲ್ಲಿಯೇ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇವರು ಮದುವೆಯೂ ಆಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಅಂಜಲಿ ಒಮ್ಮೆ ಸಂದರ್ಶನವೊಂದರಲ್ಲ, ವ್ಯಕ್ತಿಯ ಜೊತೆಗಿನ ರಿಲೇಷನ್‌ಷಿಪ್‌ನ ಕಾರಣದಿಂದಾಗಿ ವೃತ್ತಿಯತ್ತ ಗಮನನೀಡಲು ಸಾಧ್ಯವಾಗುತ್ತಿಲ್ಲ. ಇದು ಕೆಟ್ಟ ಸಂಬಂಧವಾಗಿತ್ತು ಎಂದಿದ್ದರು.

  ಕೆಲ ವರ್ಷಗಳ ವಿಶ್ರಾಂತಿಯ ಬಳಿಕ ಅಂಜಲಿ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಶಂಕರ್‌ ನಿರ್ದೇಶನದ ಗೇಮ್‌ ಚೇಂಜರ್‌ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಅದರೊಂದಿಗೆ ವೆಬ್‌ಸಿರೀಸ್‌ಗಳನ್ನೂ ಅವರು ನಟಿಸಿದ್ದಾರೆ. ಆದ್ರೆ ಇವರ ಮದುವೆ ವಿಚಾರವಾಗಿ ಟಾಲಿವುಡ್​​ನಲ್ಲಿ ಗುಸುಗುಸು ಶುರುವಾಗಿದೆ.

  ವಿಚ್ಛೇದಿತ ಸ್ಟಾರ್ ಪ್ರೊಡ್ಯೂಸರ್ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವದಂತಿಯೇ? ಅಥವಾ ಇದು ನಿಜವೇ? ಈ ವಿಚಾರದಲ್ಲಿ ಸ್ಪಷ್ಟನೆ ಸಿಗಬೇಕಾದರೆ ಅಂಜಲಿಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದೆ.

  “ವೀಳ್ಯದೆಲೆ ಪಲಾವ್​”ಮಾಡಿದ್ರೆ ರುಚಿ ಜತೆ ಆರೋಗ್ಯವು ನಿಮ್ಮದಾಗುತ್ತದೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts