ಹೈದರಾಬಾದ್: ಬಾಹುಬಲಿ ಚಿತ್ರದ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ನಟ ಪ್ರಭಾಸ್ ಅವರಿಗೆ ಬಹುದೊಡ್ಡ ಅಭಿಮಾನಿಗಳ ಬಳಗವಿದೆ. ಅದರಲ್ಲೂ ಪ್ರಭಾಸ್ ಅಂದ್ರೆ ಪ್ರಾಣ ಕೊಡುವ ಅಭಿಮಾನಿಗಳೂ ಸಹ ಇದ್ದಾರೆ. ಅಂತಹ ಅಭಿಮಾನಿ ಒಬ್ಬರಿಗೆ ಪ್ರಭಾಸ್ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ.
ಅಭಿಮಾನಿಯೊಬ್ಬ ತನ್ನ ತಲೆಗೂದಲನ್ನೂ ಸಂಪೂರ್ಣ ಟ್ರಿಮ್ ಮಾಡಿಕೊಂಡು ಅದರಲ್ಲಿ ಪ್ರಭಾಸ್ ಹೆಸರನ್ನು ಬರೆಸಿಕೊಂಡು ತಮ್ಮ ನೆಚ್ಚಿನ ನಟನ ಮೇಲೆ ವಿಶೇಷ ಅಭಿಮಾನ ಮೆರೆದಿದ್ದಾರೆ. ಇದನ್ನು ನೋಡಿದ ಪ್ರಭಾಸ್ ಮೂಕವಿಸ್ಮಿತರಾಗಿದ್ದು, ಅಭಿಮಾನಿ ಜತೆ ಕೆಲ ಕಾಲ ಕಳೆದು ಆತನಿಗೆ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಭಾಸ್ ಉಡುಗೊರೆ ನೀಡಿರುವುದು ಫಾಸಿಲ್ ಬ್ರ್ಯಾಂಡ್ ವಾಚ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್ ಆಗಿದೆ. ಇನ್ನು ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಇಂತಹ ಉಡುಗೊರೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ತಮ್ಮ ಅಭಿಮಾನಿಗಳಿ ಸರ್ಪ್ರೈಸ್ ಆಗಿಯೇ ಗಿಫ್ಟ್ ನೀಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಹುನಿರೀಕ್ಷಿತ ರಾಧೆಶ್ಯಾಮ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸಂಕ್ರಾಂತಿಗೆ ತೆರೆಗೆ ಅಪ್ಪಲಿಸಲಿದೆ. ಇದರೊಂದಿಗೆ ಆದಿಪುರುಷ, ಸಲಾರ್ ಮತ್ತು ಸ್ಪಿರಿಟ್ ಚಿತ್ರಗಳಲ್ಲಿಯೂ ಪ್ರಭಾಸ್ ಅಭಿನಯಿಸಿದ್ದಾರೆ. (ಏಜೆನ್ಸೀಸ್)
ಮಾಡೆಲ್ಗಳಿಬ್ಬರ ದುರ್ಮರಣ: ಪಾರ್ಟಿ ನಡೆದ ಹೋಟೆಲ್ ಮಾಲೀಕ ಮಾಡಿದ ಈ ಕೃತ್ಯದಿಂದ ಸಂಶಯ ದುಪ್ಪಟ್ಟು!
ಒಂದೇ ಫ್ರೇಮ್ನಲ್ಲಿ ಸೆರೆಯಾದ ಮೂರು ನಾಗರಹಾವುಗಳ ಅದ್ಭುತ ಫೋಟೋ! ನೆಟ್ಟಿಗರು ಹೇಳಿದ್ದು ಹೀಗೆ..
ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ
ಸಾಕು ನಾಯಿ ಮಾಡಿದ ಈ ಕೆಲಸಕ್ಕೆ ಅಕ್ಕ-ಪಕ್ಕದ ನಿವಾಸಿಗಳ ನಡುವೆ ಜಗಳ, ಮುಂದಾಗಿದ್ದು ದುರಂತ!