More

    ಆನ್​ಲೈನ್​ ಮೂಲಕವೇ ರಿಜಿಸ್ಟರ್​ ಮ್ಯಾರೇಜ್​ ಆದ ವಧು: ಕೇರಳದಲ್ಲೇ ಇದು ಮೊದಲು

    ಪುನಲೂರ್​: ಕೇರಳದ ಪುನಲೂರ್​ನಲ್ಲಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಇಂದು (ಅ.23) ಬೆಳಗ್ಗೆ ಆಗಮಿಸಿದ ವಧು ಧನ್ಯಾ ಮಾರ್ಟಿನ್​, ಉಕ್ರೇನ್​ನಲ್ಲಿರುವ ವರ ಜೀವನ್​ ಕುಮಾರ್​ ಜತೆ ಕಾನೂನುಬದ್ಧವಾಗಿ ಆನ್​ಲೈನ್​ ಮೂಲಕವೇ ಮದುವೆ ಆಗುವ ಮೂಲಕ ಸುದ್ದಿಯಾಗಿದ್ದಾರೆ.

    ರಾಜ್ಯದಲ್ಲಿ ಡಿಜಿಟಲ್​ ಸೌಲಭ್ಯದೊಂದಿಗೆ ನೆರವೇರಿದ ಮೊದಲನೇ ಮದುವೆ ಇದಾಗಿದೆ. ಸಬ್​ ರಿಜಿಸ್ಟ್ರಾರ್​ ಟಿ.ಎಂ. ಫಿರೋಜ್​ ನೇತೃತ್ವದಲ್ಲಿ ಈ ವಿವಾಹ ಕಾರ್ಯಕ್ರಮ ಅಚ್ಚಕಟ್ಟಾಗಿ ನೆರವೇರಿದೆ. ಸಮಾರಂಭದ ಬಳಿಕ ಮದುವೆ ಪ್ರಮಾಣ ಪತ್ರವನ್ನು ತಕ್ಷಣ ವಧುವಿಗೆ ಹಸ್ತಾಂತರಿಸಲಾಯಿತು.

    ಅಂದಹಾಗೆ ವರ ಜೀವನ್​ ಕುಮಾರ್​ ಪುನಲೂರ್​ ನಿವಾಸಿ. ಕೋವಿಡ್​ ನಿರ್ಬಂಧಗಳ ಹಿನ್ನೆಲೆಯಲ್ಲಿ ಉಕ್ರೇನ್​ನಿಂದ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ. ವಧು ಧನ್ಯಾ ತಿರುವಂತಪುರಂನ ಕಝಕ್ಕೂಟಂ ಮೂಲದ ನಿವಾಸಿ. ವಿಶೇಷ ಮದುವೆ ಕಾಯ್ದೆ ಪ್ರಕಾರ ತಮ್ಮ ಮದುವೆಯನ್ನು ನೋಂದಣಿ ಮಾಡಲು ಕಳೆದ ಮಾರ್ಚ್​ನಲ್ಲೇ ಧನ್ಯಾ ಮತ್ತು ಜೀವನ್​ ಕುಮಾರ್​ ಅರ್ಜಿ ಸಲ್ಲಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಜೀವನ್​ ಕುಮಾರ್​ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದರು.

    ಅರ್ಜಿಯ ಸಿಂಧುತ್ವವನ್ನು ವಿಸ್ತರಿಸಬೇಕು ಮತ್ತು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡೂ ಕುಟುಂಬಗಳ ಉಪಸ್ಥಿತಿಯ ನಿಯಮವನ್ನು ತಪ್ಪಿಸುವ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ನೆರವೇರಿಸಬೇಕೆಂದು ಅರ್ಜಿಯಲ್ಲಿ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ವಿದೇಶಾಂಗ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿಪ್ರಾಯಗಳನ್ನು ಪರಿಗಣಿಸಿ, ಕೋರ್ಟ್​ ವಧು-ವರರ ಪರ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಆನ್​ಲೈನ್​ ಸೌಲಭ್ಯ ಮೂಲಕ ಇಬ್ಬರು ವಿವಾಹ ಕಾರ್ಯ ನೇರವೇರಿದ್ದು, ರಾಜ್ಯದಲ್ಲೇ ಮೊದಲ ಆನ್​ಲೈನ್​ ಮದುವೆಗೆ ಧನ್ಯಾ ಮತ್ತು ಜೀವನ್​ ಕುಮಾರ್​ ಸಾಕ್ಷಿಯಾಗಿದ್ದಾರೆ.

    ವರನ ತಂದೆ ದೇವರಾಜನ್​ ತಂದೆಯ ಪರವಾಗಿ ಸಹಿ ಹಾಕಿದರು. ಜಿಲ್ಲಾ ರಿಸ್ಟ್ರಾರ್​ ಸಿ ಕೆ ಜಾನ್ಸನ್​ ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದರು. ಗೂಗಲ್​ ಮೀಟ್​ ಎಂಬ ಆನ್​ಲೈನ್​ ವೇದಿಕೆ ಮೂಲಕ ಈ ವಿನೂತನ ಮದುವೆ ಸಮಾರಂಭ ನೆರವೇರಿತು. (ಏಜೆನ್ಸೀಸ್​)

    ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಶಾಕಿಂಗ್​ ನ್ಯೂಸ್ ಕೊಟ್ಟ​ ಎಡಿಜಿಪಿ ಅಲೋಕ್​ ಕುಮಾರ್..!​

    ಶಾಲಾಧ್ಯಕ್ಷನನ್ನು ನಂಬಿ ಕಾರಿನಲ್ಲಿ ಹೋದ ಶಿಕ್ಷಕಿಗೆ ಕಾದಿತ್ತು ಶಾಕ್​! ಮೊದಲೇ ಹಳ್ಳ ತೋಡಿದ್ದ ಕಿರಾತಕ

    ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್​.ಎನ್​. ರಾಜೇಶ್​ ಸನ್ನದು ಅಮಾನತು

    ಕೇಂದ್ರ ಗೃಹಸಚಿವ ಅಮಿತ್​ ಷಾ ಬರ್ತಡೇಗೆ ಶುಭಕೋರಿ ಸಿಕ್ಕಾಪಟ್ಟೆ ಟ್ರೋಲ್​ ಆದ ಸಾರಾ ಅಲಿ ಖಾನ್..!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts