More

    ನಾನು ಆ ರೀತಿಯ ಹುಡುಗಿಯಲ್ಲ! ಬೋಲ್ಡ್​ ಬ್ಯೂಟಿ ನಿವೇತಾ ಪೆತುರಾಜ್​ ಮುಕ್ತ ಮಾತು

    ಚೆನ್ನೈ: ಇತ್ತೀಚಿನ ದಿನಗಳಲ್ಲಿ ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರೆಂದರೆ ಅದು ನಿವೇತಾ ಪೆತುರಾಜ್. ಕಾಲಿವುಡ್​ ಬ್ಯೂಟಿ ನಿವೇತಾ ಟಾಲಿವುಡ್​ ಹಾಗೂ ಕಾಲಿವುಡ್​​ನಲ್ಲಿ ಮಿಂಚುತ್ತಿದ್ದು, ಬಹುಬೇಡಿಕೆಯ ನಟಿ ಎಂಬ ಸ್ಥಾನವನ್ನು ಅಲಂಕರಿಸಿದ್ದಾರೆ. ಬಿಡುಗಡೆ ಸಜ್ಜಾಗಿರುವ ತೆಲುಗು ಚಿತ್ರ ಪಾಗಲ್​ನಲ್ಲಿ ನಟಿಸಿದ್ದಾರೆ.

    ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಿವೇತಾ, ನನಗೆ ಹೆಚ್ಚು ಹೆಚ್ಚು ಗಂಭೀರ ಪಾತ್ರಗಳೇ ಬರುತ್ತಿದವು. ಇದೊಂದು ರೀತಿಯಲ್ಲಿ ನನಗೆ ಕಷ್ಟ ಅನಿಸತೊಡಗಿತು. ನಾನು ತುಂಬಾ ಗಂಭೀರ ಎಂದೇ ಭಾವಿಸಿದ್ದರು. ಆದರೆ, ಪಾಗಲ್​ ಚಿತ್ರ ಆ ಹಣೆಪಟ್ಟಿಯನ್ನು ಕಳಚಿದೆ. ಪಾಗಲ್​ ಚಿತ್ರದ ಪಾತ್ರದ ಬಗ್ಗೆ ನನಗೆ ತೃಪ್ತಿ ಇದೆ. ಈ ಚಿತ್ರದಲ್ಲಿ ನನಗೆ ಗ್ಲಾಮರಸ್​ ಪಾತ್ರವಿದೆ ಎಂದು ನಿವೇತಾ ಹೇಳಿದ್ದಾರೆ. ಸದ್ಯ ನಿವೇತಾ ಕ್ರೇಜಿ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

    ಈ ಹಿಂದೆ ನಾನು ಮಾಡಿರುವ ಬಹುತೇಕ ಚಿತ್ರದ ಪಾತ್ರಗಳೆಲ್ಲವೂ ತುಂಬಾ ಗಂಭೀರವಾದದ್ದು, ಹೀಗಾಗಿ ನನ್ನ ಲುಕ್​ ಗಂಭೀರ ಪಾತ್ರಗಳಿಗೆ ಮಾತ್ರ ಸರಿಹೊಂದುತ್ತದೆ ಎಂದು ನಾನು ಭಾವಿಸಿದ್ದೆ. ಹೀಗಾಗಿ ನನಗೆ ಅಂಥಹ ಪಾತ್ರಗಳೇ ಹುಡುಕಿ ಬರುತ್ತಿವೆ ಅಂದುಕೊಂಡಿದ್ದೆ. ನೋಡಲು ನಾನು ಗಂಭೀರ ಹುಡುಗಿಯಂತಿರಬಹುದು ಆದರೆ, ನಾನು ಆ ರೀತಿಯಲ್ಲ ಎಂದು ನಿವೇತಾ ಹೇಳಿದ್ದಾರೆ.

    ಗಂಭೀರಾ ಪಾತ್ರಗಳನ್ನು ಮಾಡುವಾಗಲೆಲ್ಲಾ ನಾನು ತುಂಬಾ ಕಷ್ಟಪಟ್ಟಿದ್ದೇನೆ. ಇನ್ಮುಂದೆ ನಿರ್ದೇಶಕರು ಕ್ರೇಜಿ ಹಾಗೂ ಗ್ಲಾಮರಸ್​ ಪಾತ್ರಗಳಿಗಾಗಿ ನನ್ನ ಬಳಿ ಬರುತ್ತಾರೆಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು. ಪಾಗಲ್​ ಚಿತ್ರ ಆಗಸ್ಟ್​ 14ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು…

    ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್​ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?

    ‘ಪದವಿಪೂರ್ವ’ದಲ್ಲಿ ನಟಿ ಸೋನಲ್ ಮೊಂತೆರೋ​; ಇಬ್ಬರು ನಾಯಕಿಯರ ಜೊತೆಗೆ ಮತ್ತೊಬ್ಬ ಬೆಡಗಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts