More

    ವಿಶ್ವಪ್ರಸಿದ್ಧ ಆಫ್ಘಾನ್​ನ ಹಸಿರು ಕಣ್ಣಿನ ಹುಡುಗಿ ಈಗ ಎಲ್ಲಿದ್ದಾಳೆ? ತಾಲಿಬಾನಿಗಳಿಂದ ಈಕೆ ಸೆಫ್​ ಆಗಿದ್ಹೇಗೆ?

    ರೋಮ್​: ದಶಕಗಳ ಹಿಂದೆ ನ್ಯಾಷನಲ್​ ಜಿಯೋಗ್ರಫಿಕ್​ ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಸೆರೆಹಿಡಿಯಲಾಗಿದ್ದ ಹಸಿರು ಕಣ್ಣಿನ ಹುಡುಗಿಯ ಫೋಟೋ ವಿಶ್ವದಾದ್ಯಂತ ಭಾರೀ ಸದ್ದು ಮಾಡಿತ್ತು. ಆ ಫೋಟೋದಲ್ಲಿದ್ದ ಹುಡುಗಿಯ ಹೆಸರು ಶರ್ಬತ್​ ಗುಲಾ. ಈಕೆ ಅಫ್ಘಾನಿಸ್ತಾನ ಮೂಲದವಳು. ಆಫ್ಘಾನ್​ನಲ್ಲಿ ಈಗ ಪರಿಸ್ಥಿತಿ ಹೇಗಿದೆ ಎಂಬುದನ್ನು ಜಗತ್ತಿಗೆ ತಿಳಿದಿದೆ. ತಾಲಿಬಾನ್​ ವಶಪಡಿಸಿಕೊಂಡ ಬಳಿಕ ಅನೇಕ ನಾಗರಿಕರು ಆಫ್ಘಾನ್​ ಅನ್ನು ತೊರೆದಿದ್ದಾರೆ. ಅದರಲ್ಲಿ ಈ ಗುಲಾ ಕೂಡ ಒಬ್ಬಳು. ಹಾಗದ್ರೆ ಈಕೆ ಎಲ್ಲಿರಬಹುದು ಎಂಬ ಸಂಶಯ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

    ಆಫ್ಘಾನ್​ ಪ್ರಜೆ ಗುಲಾ ಅವರು ಈಗ ಇಟಲಿಯಲ್ಲಿ ಇರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಗುಲಾ ಅವರು ರೋಮ್​ ನಗರಕ್ಕೆ ಆಗಮಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ. ಆದರೆ, ಗುಲಾ ಯಾವ ದಿನಾಂಕದಂದು ರೋಮ್​ಗೆ ಆಗಮಿಸಿದ್ದಾರೆಂದು ಖಚಿತಪಡಿಸಿಲ್ಲ.

    ತಾಲಿಬಾನ್​ ನಿಯಂತ್ರಣದಲ್ಲಿರುವ ಆಫ್ಘಾನ್​ನಿಂದ ಗುಲಾರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಆಫ್ಘಾನ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್​ಜಿಒಗಳ ಮಾಡಿದ ಮನವಿಗೆ ನಾವು ಸ್ಪಂದಿಸಿದ್ದೇವೆ. ಅಫ್ಘಾನ್ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಕ್ರಮದ ಭಾಗವಾಗಿ ಗುಲಾ ಅವರನ್ನು ಸುರಕ್ಷಿತವಾಗಿ ಇಟಲಿಗೆ ಕರೆತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಅಮೆರಿಕ ಫೋಟೋಗ್ರಾಫರ್​ ಸ್ಟೀವ್ ಮೆಕ್ಕರಿ ಅವರು 1980ರಲ್ಲಿ ಪಾಕಿಸ್ತಾನದ ಶಿಬಿರದಲ್ಲಿ ಗುಲಾರ ಫೋಟೋವನ್ನು ಸೆರೆಹಿಡಿದಿದ್ದರು. ಇದಾದ ಬಳಿಕ ಅವರ ಫೋಟೋ ನ್ಯಾಷನಲ್​ ಜಿಯೋಗ್ರಫಿಕ್​ ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಪ್ರಕಟವಾಗಿತ್ತು. ಅಂದಿನಿಂದ ಗುಲಾ ಅವರು ಅಫ್ಘಾನಿಸ್ತಾನದ ಅತ್ಯಂತ ಪ್ರಸಿದ್ಧ ನಿರಾಶ್ರಿತೆಯಾಗಿದ್ದಾರೆ.

    1979ರ ಸೋವಿಯತ್ ಆಕ್ರಮಣದ ಸುಮಾರು ನಾಲ್ಕು ಅಥವಾ ಐದು ವರ್ಷಗಳ ನಂತರ ತಾನು ಅನಾಥಳಾಗಿ ಪಾಕಿಸ್ತಾನಕ್ಕೆ ಮೊದಲ ಬಾರಿಗೆ ಬಂದಿದ್ದೇನೆ ಎಂದು ಗುಲಾ ಹೇಳಿಕೊಂಡಿದ್ದರು. ಅಂದಿನಿಂದ ಗಡಿಯಲ್ಲಿ ಆಶ್ರಯ ಪಡೆದ ಲಕ್ಷಾಂತರ ಆಫ್ಘಾನ್ನರಲ್ಲಿ ಒಬ್ಬರಾಗಿದ್ದರು. ಗುರುತಿನ ಕಾಗದ ವಂಚಿಸಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಕ್ಕೆ ಆಕೆಯನ್ನು ಬಂಧಿಸಿ 2016ರಲ್ಲಿ ಆಕೆಯನ್ನು ಆಫ್ಘಾನ್​ಗೆ ಗಡಿಪಾರು ಮಾಡಲಾಯಿತು.

    ಕಳೆದ ಆಗಸ್ಟ್​ ತಿಂಗಳಲ್ಲಿ ತಾಲಿಬಾನಿಗಳು ಆಫ್ಘಾನ್​ ವಶಕ್ಕೆ ಪಡೆದುಕೊಂಡ ಬಳಿಕ ಸುಮಾರು 5000 ಆಫ್ಘಾನ್ನರನ್ನು ಸ್ಥಳಾಂತಿರಿಸಿದ್ದೇವೆ ಎಂದು ​ಸೆಪ್ಟೆಂಬರ್​ ಆರಂಭದಲ್ಲಿ ಇಟಲಿ ಸರ್ಕಾರ ಹೇಳಿಕೊಂಡಿತ್ತು. ಸೆಪ್ಟೆಂಬರ್ 9ರಂದು ಯುರೋಪಿಯನ್ ದೇಶಕ್ಕೆ ಬಂದಿಳಿದ ನಂತರ ಅಫ್ಘಾನಿಸ್ತಾನದ ಮೊದಲ ಮಹಿಳಾ ಮುಖ್ಯ ಪ್ರಾಸಿಕ್ಯೂಟರ್ ಮಾರಿಯಾ ಬಶೀರ್ ಅವರಿಗೆ ಪೌರತ್ವವನ್ನು ನೀಡಿರುವುದಾಗಿ ಇಟಲಿ ಈ ತಿಂಗಳ ಆರಂಭದಲ್ಲಿ ಹೇಳಿತ್ತು.

    ಜರ್ಮನಿ, ಬ್ರಿಟನ್ ಮತ್ತು ಟರ್ಕಿ ಜತೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಕಾರ್ಯಾಚರಣೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಐದು ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ. (ಏಜೆನ್ಸೀಸ್​)

    ಜಾರಕಿಹೊಳಿ ಸಹೋದರರಿಗೆ ಧರ್ಮ ಸಂಕಟ: ಲಖನ್ ಹಿಂದೆ ಸರಿಸಲು ಕೈ-ಕಮಲ ವರಿಷ್ಠರ ಒತ್ತಡ; ಕುಟುಂಬ ಗೌರವಕ್ಕಾಗಿ ಗೆಲ್ಲಿಸುವುದು ಅನಿವಾರ್ಯ

    ಮೊದಲು ಬುಸ್, ಕೊನೆಗೆ ಠುಸ್: ದಾಳಿಗಷ್ಟೇ ಎಸಿಬಿ ಸೀಮಿತ, 5 ವರ್ಷದಲ್ಲಿ ಒಬ್ಬರಿಗೂ ಶಿಕ್ಷೆ ಆಗಿಲ್ಲ..

    ಹವಾಮಾನ ನೀತಿ ಅಗತ್ಯ ನೆನಪಿಸಿದ ಮಳೆ; ವಿಕೋಪ ತಡೆಗೆ ಬೇಕು ಪ್ರತ್ಯೇಕ ಸಂಸ್ಥೆ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts