More

    ಮೈಸೂರು ಪಾಲಿಕೆ ಚುನಾವಣೆ: ಬಿಜೆಪಿಯ ಶಿವಕುಮಾರ್ ನೂತನ ಮೇಯರ್, JDS ಎಡವಟ್ಟು, ಕಾಂಗ್ರೆಸ್​ ಸಂಭ್ರಮ

    ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯ ಫಲಿತಾಂಶ ಮಂಗಳವಾರ (ಸೆ.5) ಮಧ್ಯಾಹ್ನ ಹೊರಬಿದ್ದಿದ್ದು, ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಆಯ್ಕೆಯಾಗಿದ್ದಾರೆ.

    ಕೊನೆಯ ಕ್ಷಣದಲ್ಲಿ ಪಾಲಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಜೆಡಿಎಸ್​ ಶಾಕ್​ ನೀಡಿದೆ. ಶಿವಕುಮಾರ್ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ಸದ್ಯರುಗಳ 48 ಮತ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 28 ಮತಗಳು ಬಿದ್ದಿವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಲೇ ಬಿಜೆಪಿ ಕಾಂಗ್ರೆಸ್​ ಪಕ್ಷವನ್ನು ಯಾಮಾರಿಸಿದೆ. ಬಿಜೆಪಿಯ ಒಳ ತಂತ್ರ ಅರಿಯದೆ ಮೇಯರ್ ಆಗುವ ಕನಸು ಕಂಡಿದ್ದ ಕಾಂಗ್ರೆಸ್​ಗೆ ಕೊನೆ ಕ್ಷಣದಲ್ಲಿ ಭಾರಿ ನೀರಾಸೆಯಾಗಿದೆ.

    ಇದನ್ನೂ ಓದಿ: ಶಾಲೆಯ ಟಾಯ್ಲೆಟ್​ನಲ್ಲಿ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ! SSLC ವಿದ್ಯಾರ್ಥಿ ವಿರುದ್ಧ ದೂರು ದಾಖಲು

    ಜೆಡಿಎಸ್​ಗೆ ಬಿಗ್ ಶಾಕ್
    ಜಾತಿ‌ ಪ್ರಮಾಣ ಪತ್ರ ಸಲ್ಲಿಸದ ಕಾರಣ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್​ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕೃತಗೊಳಿಸಿದ್ದು, ಉಪಮೇಯರ್​ ಪಟ್ಟ ಕೂಡ ಬಿಜೆಪಿಗೆ ಒಲಿದಿದೆ. ಮೇಯರ್ ಮತ್ತು ಉಪಮೇಯರ್ ಎರಡು ಸ್ಥಾನ ಬಿಜೆಪಿ ಪಾಲಾಗಿದ್ದು, ಜೆಡಿಎಸ್​ಗೆ ಭಾರಿ ನಿರಾಶೆಯ ಜೊತೆಗೆ ಮುಖಭಂಗವು ಆಗಿದೆ. ಇದರ ನಡುವೆ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕೊಡಿ ಎಂದು ಜೆಡಿಎಸ್ ಸದಸ್ಯರು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

    ಕಿಚಾಯಿಸಿದ ಕಾಂಗ್ರೆಸ್​
    ಜೆಡಿಎಸ್​ಗೆ ಉಪಮೇಯರ್ ಸ್ಥಾನ ತಪ್ಪಿಸಿದಕ್ಕೆ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿದೆ. ಬಿಜೆಪಿಯು ಜೆಡಿಎಸ್​ಗೆ ಚಾಕೊಲೇಟ್ ಕೊಟ್ಟಾಯ್ತು ಎಂದು ಕಾಂಗ್ರೆಸ್​ ಕಿಚ್ಚಾಯಿಸಿದೆ. ಚುನಾವಣಾ ಕಲಾಪ ವೇಳೆ ಶೇಮ್ ಶೇಮ್ ಜೆಡಿಎಸ್ ಎಂದು ಕೂಗುವ ಮೂಲಕ ಕಾಂಗ್ರೆಸ್ ಸದಸ್ಯರು ಸಂಭ್ರಮಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರಿನ ವೇಗ ಎಷ್ಟಿತ್ತು? ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

    27 ವರ್ಷಗಳಲ್ಲಿ 5000 ಕಾರು ಕಳವು: 3 ಹೆಂಡತಿಯರು, ಲಕ್ಷುರಿ ಜೀವನ, ಭಾರತದ ಅತಿ ದೊಡ್ಡ ಕಾರು ಕಳ್ಳ ಸಿಕ್ಕಿಬಿದ್ದಿದ್ಹೇಗೆ?

    ವಯಸ್ಸಾದ ಮಾವನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ​ ಬೆನ್ನಲ್ಲೇ ಮಹಿಳಾ ಎಸ್​ಐಗೆ ಎದುರಾಯ್ತು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts