More

    ಶಾಲೆಯ ಟಾಯ್ಲೆಟ್​ನಲ್ಲಿ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ! SSLC ವಿದ್ಯಾರ್ಥಿ ವಿರುದ್ಧ ದೂರು ದಾಖಲು

    ಚೆನ್ನೈ: ನವಜಾತ ಶಿಶುವೊಂದರ ಮೃತದೇಹ ಶಾಲೆಯೊಂದರ ಸಮೀಪದ ಪೊದೆಗಳ ನಡುವೆ ಪತ್ತೆಯಾಗಿರುವ ಘಟನೆ ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದೆ. ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ, ಶಿಶುವನ್ನು ಶಾಲೆಯ ಸಮೀಪದ ಪೊದೆಗಳ ನಡುವೆ ಎಸೆದಿದ್ದಳು ಎಂದು ವರದಿಯಾಗಿದೆ.

    ಈ ಘಟನೆ ತಮಿಳುನಾಡಿನ ಕಡ್ಡಲೂರ್​ ಜಿಲ್ಲೆಯ ಭುವನಗಿರಿ ಪ್ರದೇಶದಲ್ಲಿ ನಡೆದಿದೆ. ಹುಡುಗಿಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ.

    ಗುರುವಾರ ವಿದ್ಯಾರ್ಥಿಯೊಬ್ಬ ಪೊದೆಯಲ್ಲಿ ಮಗುವನ್ನು ನೋಡಿದಾಗ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಶುವಿನ ಮೃತದೇಹವನ್ನು ವಶಕ್ಕೆ ಪಡೆದರು.

    ಶಿಶುವಿನ ಕರುಳು ಬಳ್ಳಿಯನ್ನು ಸರಿಯಾಗಿ ಕತ್ತರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು, ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿ, ಇಲ್ಲಿದೆ ತಂದು ಎಸೆದಿರಬಹುದು ಎಂದು ಊಹಿಸಿದರು. ಬಳಿಕ ತನಿಖೆ ನಡೆದಾಗ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವುದು ಬಯಲಾಯಿತು. ವಿದ್ಯಾರ್ಥಿನಿಯು ಕೂಡ ತಪ್ಪೊಪ್ಪಿಕೊಂಡಳು.

    ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಶಾಲೆಯ ಕಾಪೌಂಡ್​ ಬಳಿಯಿದ್ದ ಪೊದೆಗಳ ನಡುವೆ ಮಗುವನ್ನು ಎಸೆದು ಮನೆಗೆ ಹೋಗಿದ್ದಳು. ಮತ್ತೊಂದು ಶಾಲೆಯ 10ನೇ ತರಗತಿ ವಿದ್ಯಾರ್ಥಿಯಿಂದ ತಾನು ಗರ್ಭಿಣಿಯಾಗಿದ್ದಾಗಿ ವಿಚಾರಣೆ ವೇಳೆ ಹುಡುಗಿ ಹೇಳಿಕೊಂಡಿದ್ದಾಳೆ.

    ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ಸ್ಕೂಟರ್​ ಬೀಳುವಾಗ ಸಹಾಯಕ್ಕೆಂದು ವಿದ್ಯುತ್​ ಕಂಬ ಹಿಡಿದ ಯುವತಿ ಸಾವು: ಬೆಸ್ಕಾಂ, ಬಿಬಿಎಂಪಿ ವಿರುದ್ಧ ಆಕ್ರೋಶ

    ಶಾಂತಿ ಕದಡಲು ಹರ್ಷನ ಹತ್ಯೆ: ಎನ್​ಐಎಯಿಂದ ಕೋರ್ಟ್​ಗೆ ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆ

    ಐಟಿ ಸಿಟಿಯಲ್ಲಿ ಜಲಪ್ರಳಯ: ರಾಜಧಾನಿಯಲ್ಲಿ ಅಕ್ಷರಶಃ ಪ್ರವಾಹ; ಮನೆ, ಮಾಲ್​ಗಳ ಒಳಗೆಲ್ಲ ನೀರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts